ಆನೇಕಲ್: ಕೋವಿಡ್-19 ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಡಿ ಭಾಗಗಳ ವಲಸೆ ಕಾರ್ಮಿಕರ ಸಂಕಷ್ಟ ಆಲಿಸಲು ಧಾವಿಸಿದ್ದಾರೆ.
ಅತ್ತಿಬೆಲೆ ಭಾಗದ ಬಳ್ಳೂರು-ಇಂಡ್ಲಬೆಲೆ ಭಾಗದಲ್ಲಿನ ವಲಸೆ ಕಾರ್ಮಿಕರ ಅಳಲು ಆಲಿಸಿದರು. ಈ ವೇಳೆ ತಹಶೀಲ್ದಾರ್ ಮಹದೇವಯ್ಯ ಕೂಡ ಉಪಸ್ಥಿತರಿದ್ದರು. ಮಾಲೀಕರು ಇವರ ನೆರವಿಗೆ ಬಂದಿಲ್ಲ ಹಾಗೂ ಸಮರ್ಪಕವಾಗಿ ಆಹಾರ ಪೂರೈಕೆಯಾಗಿಲ್ಲ ಎನ್ನುವುದನ್ನು ಮನಗಂಡು ಸೂಕ್ತ ವ್ಯವಸ್ಥೆಗೆ ಅನುವು ಮಾಡಿಕೊಡುವ ಭರವಸೆ ನೀಡಿದರು.
ಸಂಸದ ಡಿ.ಕೆ.ಸುರೇಶ್ ಆರೋಪದಲ್ಲಿ ಹುರುಳಿಲ್ಲ: ಪಾದರಾಯನಪುರ ಆರೋಪಿಗಳನ್ನು ಹಸಿರು ವಲಯ ರಾಮನಗರ ಜೈಲಿಗೆ ಕಳಿಸುವ ಮುಖಾಂತರ ದ್ಷೇಷದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುರೇಶ್ ಮುಮಾರ್, ಇಂತಹ ವಿಚಾರಕ್ಕೆ ಪ್ರತಿಕ್ರಿಯಿಸಲಾರೆ. ನಮ್ಮದು ದ್ವೇಷ ರಾಜಕಾರಣವಲ್ಲ, ದೇಶದ ರಾಜಕಾರಣ ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದರು.
ಮೇ 3ರ ಗಡುವಿನ ನಂತರ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ನಿರ್ಧಾರ: ಮೇ. 3ರ ನಂತರ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚಿಂತಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕಟ್ಟಡ ಕಾರ್ಮಿಕರ ಸಂಕಷ್ಟಕ್ಕಾಗಿ ಬೆಂಗಳೂರು ಹೊರ ಭಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗುವಂತಾಗಿ ಜೀವನ ಸುಧಾರಣೆಯಾಗಲಿ ಎಂದರು.