ETV Bharat / state

ನಿಮಗೆ ಸಚಿವರಾಗಲು ಕಾನೂನು ಮಾನ್ಯತೆ ಇಲ್ಲ: ಹೆಚ್​ ವಿಶ್ವನಾಥ್​ಗೆ ಶಾಕ್​ ಕೊಟ್ಟ ಸುಪ್ರೀಂ - ಎ ಹೆಚ್​ ವಿಶ್ವನಾಥ್​,

Supreme Court dismisses a plea, BJP MLC A H Vishwanath pela dismisses, A H Vishwanath pela dismisses news, A H Vishwanath, A H Vishwanath news, ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ತಿರಸ್ಕೃತ, ಸುಪ್ರೀಂನಲ್ಲಿ ಬಿಜೆಪಿ ಎಂಎಲ್​ಸಿ ಎ ಹೆಚ್​ ವಿಶ್ವನಾಥ್​ ಅರ್ಜಿ ತಿರಸ್ಕೃತ, ಎ ಹೆಚ್​ ವಿಶ್ವನಾಥ್​, ಎ ಹೆಚ್​ ವಿಶ್ವನಾಥ್​ ಸುದ್ದಿ,
ಸಂಗ್ರಹ ಚಿತ್ರ
author img

By

Published : Jan 28, 2021, 12:30 PM IST

Updated : Jan 28, 2021, 1:00 PM IST

12:22 January 28

ಸುಪ್ರೀಂನಲ್ಲೂ ಹಳ್ಳಿಹಕ್ಕಿ ಅರ್ಜಿಗೆ ಸಿಗಲಿಲ್ಲ ಮಾನ್ಯತೆ!

ನವದೆಹಲಿ: ವಿಶ್ವನಾಥ್​ ಅವರು ಶಾಸಕತ್ವದಿಂದ ಅನರ್ಹಗೊಂಡಿರುವುದರಿಂದ ಮಂತ್ರಿಯಾಗಲು ಬರುವುದಿಲ್ಲ ಎಂದು ಹೈಕೋರ್ಟ್​ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ ನಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನ ವಜಾ ಮಾಡಲಾಗಿದೆ.

ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಸಿಜೆ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ  ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಈ ಮೂಲಕ ಸಚಿವರಾಗುವ ಹಂಬಲದಲ್ಲಿದ್ದ ಎ.ಹೆಚ್.ವಿಶ್ವನಾಥ್ ಗೆ ಇದು ಭಾರಿ ಪೆಟ್ಟು ನೀಡಿತ್ತು. ಅಂತಿಮ ಆದೇಶದಲ್ಲೂ ವಿಶ್ವನಾಥ್​ ಸಚಿವರಾಗುವಂತಿಲ್ಲ ಎಂದು ಆದೇಶ ನೀಡಿತ್ತು. 

ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಸಚಿವರನ್ನ ನೇಮಿಸಬೇಕು. ಮುಖ್ಯಮಂತ್ರಿ ಕೂಡ ಸಂವಿಧಾನದಡಿ ನೇಮಕಗೊಳ್ಳುತ್ತಾರೆ.  ಹೆಚ್.ವಿಶ್ವನಾಥ್ ಶಿಫಾರಸ್ಸಿಗೆ ಮುನ್ನ ಅನರ್ಹತೆಯನ್ನ ಸಿಎಂ ಪರಿಗಣಿಸಬೇಕು ಎಂದು  ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿತ್ತು. 

ಈ ಆದೇಶದ ಹಿನ್ನೆಲೆಯಲ್ಲಿ ಹೆಚ್​ ವಿಶ್ವನಾಥ್​ ಸುಪ್ರೀಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಅನರ್ಹತೆ ಕಾನೂನಿನಂತೆ ನೀವು ಚುನಾವಣೆಗೆ ನಿಂತು ಗೆದ್ದು ಬರುವವರೆಗೂ ಮಂತ್ರಿಯಾಗಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Last Updated : Jan 28, 2021, 1:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.