ETV Bharat / state

ಸರ್ಚ್ ವಾರಂಟ್ ಮೊದಲು ಸಮನ್ಸ್ ಜಾರಿ ಎಲ್ಲ ಸಂದರ್ಭದಲ್ಲೂ ಅವಶ್ಯಕವಲ್ಲ: ಹೈಕೋರ್ಟ್ - ಬೆಂಗಳೂರು ಹೈಕೋರ್ಟ್​,

ಸರ್ಚ್ ವಾರಂಟ್ ಮೊದಲು ಸಮನ್ಸ್ ಜಾರಿ ಎಲ್ಲ ಸಂದರ್ಭದಲ್ಲಿ ಅವಶ್ಯಕವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

summons is not necessary, summons is not necessary in all cases before search warrant, high court, Bangalore high court, Bangalore high court news, ಸಮನ್ಸ್​ ಅವಶ್ಯವಲ್ಲ, ಸರ್ಚ್ ವಾರೆಂಟ್ ಮೊದಲು ಸಮನ್ಸ್ ಎಲ್ಲ ಸಂದರ್ಭದಲ್ಲಿ ಅವಶ್ಯವಲ್ಲ,  ಹೈಕೋರ್ಟ್​, ಬೆಂಗಳೂರು ಹೈಕೋರ್ಟ್​, ಬೆಂಗಳೂರು ಹೈಕೋರ್ಟ್​ ಸುದ್ದಿ,
ಸರ್ಚ್ ವಾರಂಟ್ ಮೊದಲು ಸಮನ್ಸ್ ಜಾರಿ ಎಲ್ಲ ಸಂದರ್ಭದಲ್ಲಿ ಅವಶ್ಯವಲ್ಲ
author img

By

Published : Jan 21, 2021, 7:02 AM IST

ಬೆಂಗಳೂರು : ಅಪರಾಧ ಪ್ರಕರಣಗಳ ಸಂಬಂಧ ಎಲ್ಲ ಸಂದರ್ಭದಲ್ಲೂ ಶೋಧನಾ ವಾರಂಟ್​ (ಸರ್ಚ್ ವಾರಂಟ್) ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಶೋಧ ನಡೆಸಲು ವಾರಂಟ್​ ಜಾರಿ ಮಾಡಿದ್ದ ನಗರದ 44ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದ ಪೀಠ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 93(1)(ಎ) ಪ್ರಕಾರ ಶೋಧ ವಾರಂಟ್​ ಜಾರಿ ಮಾಡುವ ಮುನ್ನ ಸಮನ್ಸ್ ನೀಡಬೇಕಾಗುತ್ತದೆ. ಆದರೆ, ಸೆಕ್ಷನ್ 93(1)(ಸಿ) ಪ್ರಕಾರ ಸಮನ್ಸ್ ನೀಡದೇ ಶೋಧ ನಡೆಸಲು ವಾರಂಟ್​ ಜಾರಿಗೊಳಿಸಬಹುದು. ಅದರಂತೆ ಅಪರಾಧ ಪ್ರಕರಣಗಳ ಸಂಬಂಧ ಎಲ್ಲಾ ಸಂದರ್ಭದಲ್ಲೂ ಶೋಧನಾ ವಾರಂಟ್​​ ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ. ವಿಚಾರಣಾ ನ್ಯಾಯಾಲಯಗಳು ಸಂದರ್ಭದಕ್ಕೆ ಅನುಸಾರವಾಗಿ ಶೋಧನಾ ವಾರಂಟ್​ ಜಾರಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಬಹುತೇಕ ಆರೋಪಿಗಳು ಅರ್ಜಿದಾರ ಕಚೇರಿಯ ಪದಾಧಿಕಾರಿಗಳಾಗಿದ್ದಾರೆ. ಲಭ್ಯವಿದ್ದ ಮಾಹಿತಿ ಪ್ರಕಾರ ಗಲಭೆ ವೇಳೆ ಉಪಯೋಗಿಸಿದ್ದ ಆಯುಧಗಳು ಅರ್ಜಿದಾರ ಕಚೇರಿಯಲ್ಲಿ ಸಿಗಬಹುದು ಎಂಬ ಅಂಶ ಪರಿಗಣಿಸಿ ವಿಚಾರಣಾ ನ್ಯಾಯಾಲಯವು ಅರ್ಜಿದಾರ ಕಚೇರಿ ಶೋಧ ನಡೆಸಲು 2020ರ ಆ.31ರಂದು ವಾರಂಟ್​ ಜಾರಿ ಮಾಡಿದೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ತುರ್ತು ಕ್ರಮ ಜರುಗಿಸಬೇಕಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಎಸ್‌ಡಿಪಿಐ ವಿರುದ್ಧದ ಶೋಧ ವಾರಂಟ್​ ರದ್ದುಪಡಿಸಲು ನಿರಾಕರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.