ETV Bharat / state

ಅತಿವೃಷ್ಟಿ ನಡುವೆಯೂ ಕಬ್ಬಿನ ಬೆಳೆ ಬಂಪರ್: ಸಿಹಿಯಾಗುವುದೇ ಬೆಳೆಗಾರರ ಬದುಕು? - ಸಿಹಿಯಾಗುವುದೇ ಕಬ್ಬು ಬೆಳೆಗಾರರ ಬದುಕು

ಅತಿವೃಷ್ಟಿ ಹೊಡೆತದ ಮಧ್ಯೆಯೂ ನಿರೀಕ್ಷೆಗೂ ಮೀರಿ ಈ ಸಲ ಕಬ್ಬಿನ ಇಳುವರಿ ಬಂದಿದೆ. ಗದ್ದೆಗಳಲ್ಲಿ ನಳನಳಿಸುತ್ತಿರುವ ಕಬ್ಬು ಈ ಬಾರಿಯಾದರೂ ಸಿಹಿ ತರಬಹುದು ಎಂಬ ನಿರೀಕ್ಷೆ ಕಬ್ಬು ಬೆಳೆಗಾರರಲ್ಲಿದೆ.

Sugarcane crop bumper despite overheating
ಸಿಹಿಯಾಗುವುದೇ ಕಬ್ಬು ಬೆಳೆಗಾರರ ಬದುಕು
author img

By

Published : Oct 16, 2020, 6:32 PM IST

ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಹಾಗೂ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿರುವ ಕೀರ್ತಿಗೆ ಗಡಿ ಜಿಲ್ಲೆ ಬೆಳಗಾವಿ ಪಾತ್ರವಾಗಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಮಾರ್ಕಂಡೇಯ, ಹಿರಣ್ಯಕೇಶಿ, ವೇದಗಂಗಾ ಹಾಗೂ ದೂದಗಂಗಾ ಸೇರಿದಂತೆ ಬೆಳಗಾವಿಯಲ್ಲಿ ಸಪ್ತ ನದಿಗಳಿವೆ. ಈ ನದಿಗಳೆಲ್ಲವೂ ತುಂಬಿ ಹರಿದ ಪರಿಣಾಮ ನದಿ ತೀರದ ಲಕ್ಷಾಂತರ ಹೆಕ್ಟೇರ್​ ಕಬ್ಬಿನ ಗದ್ದೆ ಜಲಾವೃತಗೊಂಡಿತ್ತು. ಆದರೂ, ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಅತ್ಯುತ್ತಮ ಇಳುವರಿ ಬಂದಿದೆ. ಜಿಲ್ಲೆಯಲ್ಲಿ 25 ಸಕ್ಕರೆ ಕಾರ್ಖಾನೆಗಳಿದ್ದು, ಆದರೆ ಕಾಲಕಾಲಕ್ಕೆ ಹಣ ಸಂದಾಯ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಭೀಕರ ಪ್ರವಾಹಕ್ಕೆ ಕಳೆದ ವರ್ಷ ಬೆಳಗಾವಿಯಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. 126 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿತ್ತು. ಪ್ರಸಕ್ತ ವರ್ಷ ಉತ್ತಮ ಮಳೆಯಾದ ಕಾರಣ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಾಗಿದ್ದು, 150 ರಿಂದ 180 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಕಳೆದ ವರ್ಷ ಪ್ರವಾಹಕ್ಕೆ ಅಪಾರ ಪ್ರಮಾಣದ ಕಬ್ಬಿನ ಬೆಳೆ ಕೊಚ್ಚಿ ಹೋಗಿತ್ತು. ಹೀಗಾಗಿ, ಕಬ್ಬಿನ ಅಭಾವದ ಪರಿಣಾಮ ಫೆಬ್ರವರಿ ಆರಂಭದಲ್ಲೇ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ನಿಲ್ಲಿಸಿದ್ದವು. ಇದೀಗ ಉತ್ತಮ ಇಳುವರಿಯಿಂದ ವಾಡಿಕೆಗೆ ಮೊದಲೇ ಕಬ್ಬು ನುರಿಸಲು ಕಾರ್ಖಾನೆಗಳು ಮುಂದಾಗಿದ್ದು, ಏಪ್ರಿಲ್‍ವರೆಗೆ ಕಾರ್ಖಾನೆಗಳು ಕಾರ್ಯನಿರ್ವಹಿಸಲಿವೆ.

ಸಿಹಿಯಾಗುವುದೇ ಕಬ್ಬು ಬೆಳೆಗಾರರ ಬದುಕು

ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಗೋಳು ಕೇಳತೀರದು. ಪ್ರತಿ ವರ್ಷ ಭೀಕರ ಪ್ರವಾಹಕ್ಕೆ ಒಳಗಾಗುತ್ತಲೇ ಇರುವ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರೈತರು ಹಂಗೋ ಹಿಂಗೋ ಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಆದ್ರೆ ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗೆ ಸಾಗಿಸುವ ರೈತರಿಗೆ ಮಾತ್ರ ಕಾಲಕಾಲಕ್ಕೆ ಬಾಕಿ ಹಣ ಸಂದಾಯವಾಗ್ತಿಲ್ಲ. ಅದರಲ್ಲಿ ಕಾರ್ಖಾನೆಗಳ ಮಾಲೀಕರು ಜನಪ್ರತಿನಿಧಿಗಳೇ ಅನ್ನೋದು ಮತ್ತೊಂದು ದುರಂತ.

ಅಕ್ಟೋಬರ್ 25 ರೊಳಗಾಗಿ ಎಲ್ಲ ಬಾಕಿ ಚುಕ್ತಾ ಮಾಡುವಂತೆ ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದ್ದಾರೆ. ಒಂದು ವೇಳೆ ಅಷ್ಟರೊಳಗೆ ಹಣ ಸಂದಾಯ ಮಾಡಲಿಲ್ಲ ಅಂದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. 2019-20ನೇ ಸಾಲಿನ ಪರಿಷತ್ ಪ್ರತಿಪಕ್ಷ ನಾಯಕ ಎಸ್.​​ಆರ್ ಪಾಟೀಲ್​ಗೆ ಸೇರಿದ ಬೀಳಗಿ ಶುಗರ್ಸ್ 17.69 ಕೋಟಿ, ಶಾಸಕ ಆನಂದ ನ್ಯಾಮಗೌಡ ಅವರ ಜಮಖಂಡಿ ಶುಗರ್ಸ್​​ನಿಂದ 10.18 ಕೋಟಿ, ಶಾಸಕ ಮುರುಗೇಶ್ ನಿರಾಣಿ ಅವರ ನಿರಾಣಿ ಶುಗರ್ಸ್ 24.28 ಕೋಟಿ, ಸಂಗಮೇಶ್ ನಿರಾಣಿಯವರ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಿಂದ 10.97 ಕೋಟಿ, ಕುಂದರಗಿಯ ಜೆಮ್ ಶುಗರ್ಸ್ 10.46 ಕೋಟಿ, ಉತ್ತೂರಿನ ಇಂಡಿಯನ್ ಕೇನ್ ಪವರ್ ಲಿಮಿಟೆಡ್​​​ 21.40 ಕೋಟಿ, ಸಿದ್ದಾಪೂರದ ಪ್ರಭುಲಿಂಗೇಶ್ವರ ಶುಗರ್ಸ್ 18.10 ಕೋಟಿ, ರನ್ನನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 5.32 ಕೋಟಿ ಹೀಗೆ ಒಟ್ಟು 118.41 ಕೋಟಿ ರೂ.ಗಳ ಬಾಕಿ ಹಣ ಉಳಿಸಿಕೊಂಡಿವೆ. ಈ ಬಗ್ಗೆ ಶಾಸಕ ಆನಂದ ನ್ಯಾಮಗೌಡ ಸಾಧ್ಯವಾದಷ್ಟು ಬಾಕಿ ಹಣ ತಿರಿಸುವ ಪ್ರಯತ್ನ ಮಾಡೋದಾಗಿ ಹೇಳಿದ್ದು, ಮುರಗೇಶ ನಿರಾಣಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸರಿಯಾದ ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ.

ಕಬ್ಬು ಉತ್ತಮವಾಗಿ ಬೆಳೆದರೂ ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರವನ್ನು ಬಹುತೇಕ ಕಾರ್ಖಾನೆಗಳು ನೀಡುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರ ಆರೋಪ. ಹೀಗಾಗಿ ಪ್ರತಿವರ್ಷವೂ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ವಿರುದ್ಧ ರೈತರ ಆಕ್ರೋಶ ಹಾಗೂ ಹೋರಾಟ ಮಾತ್ರ ನಿಲ್ಲುತ್ತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.