ಬೆಂಗಳೂರು: ರಾಜ್ಯದ 224 ಶಾಸಕರು ಏಕ ಪತ್ನಿವ್ರತಸ್ಥರಾ? ಎಂಬ ಹೇಳಿಕೆ ವಿಚಾರವಾಗಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಆರೋಗ್ಯ ಸಚಿವರ ಹೇಳಿಕೆ ಅತ್ಯಂತ ಖಂಡನೀಯ. ಸಚಿವರಾಗಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ತಮ್ಮ ಸಿಡಿ ಪ್ರಸಾರವಾಗಬಾರದು ಎಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿರೋ ಸುಧಾಕರ್‌ಗೆ ತಮ್ಮ ಚಾರಿತ್ರ್ಯದ ಬಗ್ಗೆಯೇ ಅನುಮಾನವಿದ್ದಂತಿದೆ ಎಂದಿದ್ದಾರೆ.
-
ಎಲ್ಲ 224 ಶಾಸಕರು ಏಕ ಪತ್ನಿವ್ರತಸ್ಥರಾ ಅನ್ನೋದು ತನಿಖೆಯಾಗಲಿ ಎಂದು ಆರೋಗ್ಯ ಸಚಿವ@mla_sudhakarಹೇಳಿಕೆ ನೀಡಿರೋದು ಅತ್ಯಂತ ಖಂಡನೀಯ. ಸಚಿವರಾಗಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ತಮ್ಮ ಸಿ.ಡಿ ಪ್ರಸಾರವಾಗಬಾರದು ಎಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿರೋ ಸುಧಾಕರ್ ಅವರಿಗೆ ತಮ್ಮ ಚಾರಿತ್ರ್ಯದ ಬಗ್ಗೆಯೇ ಅನುಮಾನವಿದ್ದಂತಿದೆ.1/4
— S R Patil (@srpatilbagalkot) March 24, 2021 " class="align-text-top noRightClick twitterSection" data="
">ಎಲ್ಲ 224 ಶಾಸಕರು ಏಕ ಪತ್ನಿವ್ರತಸ್ಥರಾ ಅನ್ನೋದು ತನಿಖೆಯಾಗಲಿ ಎಂದು ಆರೋಗ್ಯ ಸಚಿವ@mla_sudhakarಹೇಳಿಕೆ ನೀಡಿರೋದು ಅತ್ಯಂತ ಖಂಡನೀಯ. ಸಚಿವರಾಗಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ತಮ್ಮ ಸಿ.ಡಿ ಪ್ರಸಾರವಾಗಬಾರದು ಎಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿರೋ ಸುಧಾಕರ್ ಅವರಿಗೆ ತಮ್ಮ ಚಾರಿತ್ರ್ಯದ ಬಗ್ಗೆಯೇ ಅನುಮಾನವಿದ್ದಂತಿದೆ.1/4
— S R Patil (@srpatilbagalkot) March 24, 2021ಎಲ್ಲ 224 ಶಾಸಕರು ಏಕ ಪತ್ನಿವ್ರತಸ್ಥರಾ ಅನ್ನೋದು ತನಿಖೆಯಾಗಲಿ ಎಂದು ಆರೋಗ್ಯ ಸಚಿವ@mla_sudhakarಹೇಳಿಕೆ ನೀಡಿರೋದು ಅತ್ಯಂತ ಖಂಡನೀಯ. ಸಚಿವರಾಗಿದ್ದುಕೊಂಡು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ತಮ್ಮ ಸಿ.ಡಿ ಪ್ರಸಾರವಾಗಬಾರದು ಎಂದು ಕೋರ್ಟ್ನಿಂದ ತಡೆಯಾಜ್ಞೆ ತಂದಿರೋ ಸುಧಾಕರ್ ಅವರಿಗೆ ತಮ್ಮ ಚಾರಿತ್ರ್ಯದ ಬಗ್ಗೆಯೇ ಅನುಮಾನವಿದ್ದಂತಿದೆ.1/4
— S R Patil (@srpatilbagalkot) March 24, 2021
ಇಂಥ ಬೇಜವಾಬ್ದಾರಿ ಹೇಳಿಕೆ ನೀಡೋ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ತಮ್ಮ ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ಕೂಡಲೇ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ಜನಪ್ರತಿನಿಧಿಗಳನ್ನು ಪರೋಕ್ಷವಾಗಿ ವ್ಯಭಿಚಾರಿಗಳು ಎಂದು ಕರೆದಿರೋ ಸುಧಾಕರ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಹಕ್ಕಿಲ್ಲ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಯಾರೋ ನಕಲಿ ಸಿಡಿ ಸೃಷ್ಟಿ ಮಾಡಿದ್ದಾರೆ ಎಂದು ಕೋರ್ಟ್ಗೆ ಹೋಗಿ ಸುಧಾಕರ್ ತಡೆಯಾಜ್ಞೆ ತಂದು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೋಂಡಿದ್ದಾರೆ. 6 ಸಚಿವರನ್ನು ಬಿಟ್ಟು ಬೇರೆಯವರ ಹೆಸರಲ್ಲಿ ನಕಲಿ ಸಿಡಿ ಸೃಷ್ಟಿಯಾಗಲಿಲ್ಲವೇ? ಬಿ.ಎಸ್. ಯಡಿಯೂರಪ್ಪ ಸರ್ಕಾರದ ಉಳಿದ ಮಂತ್ರಿಗಳೇಕೆ ಕೋರ್ಟ್ಗೆ ಹೋಗಲಿಲ್ಲ?
ತಮ್ಮ ಸಿಡಿ ಮಾಧ್ಯಮಗಳಲ್ಲಿ ಪ್ರಸಾರವಾಗಬಾರದು ಎಂದು ಕೋರ್ಟ್ನಿಂದ ತಡೆ ತಂದಿರುವ 6 ಮಂತ್ರಿಗಳು ಸಂಪುಟದಲ್ಲಿ ಮುಂದುವರಿಯುವ ಯಾವುದೇ ನೈತಿಕತೆಯಿಲ್ಲ. ಇಂಥವರು ಈಗ ಶ್ರೀರಾಮಚಂದ್ರನ ಬಗ್ಗೆ ಮಾತನಾಡುತ್ತಿದ್ದಾರೆ. ನಿಮಗೆ ಶ್ರೀರಾಮನ ಹೆಸರು ಹೇಳಲು ಯಾವ ನೈತಿಕತೆಯೂ ಇಲ್ಲ ಎಂದು ಪಾಟೀಲ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಪುನಾರಚನೆ: ಲಿಂಬಾವಳಿ, ಉದಾಸಿಗೆ ಕೊಕ್