ETV Bharat / state

ನಕಲಿ ದಾಖಲಾತಿ ಸಲ್ಲಿಸಿ ಮೆಡಿಕಲ್ ಸೀಟ್ ಪಡೆಯಲು ಯತ್ನ: ಮೂವರು ವಿದ್ಯಾರ್ಥಿಗಳ ಬಂಧನ

ನಕಲಿ ದಾಖಲಾತಿ ಸಲ್ಲಿಸಿ ಮೆಡಿಕಲ್ ಸೀಟ್ ಕೌನ್ಸಿಲಿಂಗ್​ಗೆ ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮಧು, ಪೂಜಾ ಹಾಗೂ ಚೈತ್ರಾ ಬಂಧಿತ ವಿದ್ಯಾರ್ಥಿಗಳು.

Three Students Arrested
ಬಂಧಿತ ವಿದ್ಯಾರ್ಥಿಗಳು
author img

By

Published : Dec 3, 2020, 10:58 PM IST

ಬೆಂಗಳೂರು: ಅಸಲಿ ವಿದ್ಯಾರ್ಥಿಗಳ ಸೋಗಿನಲ್ಲಿ ನಕಲಿ ದಾಖಲಾತಿ ಸಲ್ಲಿಸಿ ಮೆಡಿಕಲ್ ಸೀಟ್ ಕೌನ್ಸಿಲಿಂಗ್​ಗೆ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಮೂವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಮಧು, ಪೂಜಾ ಹಾಗೂ ಚೈತ್ರಾ ಬಂಧಿತ ವಿದ್ಯಾರ್ಥಿಗಳು. ಕಳೆದ ಮಂಗಳವಾರ ರಾಜ್ಯ ಪರೀಕ್ಷಾ ಪ್ರಾಧಿಕಾರದಲ್ಲಿ ಸಿಇಟಿ ಕೌನ್ಸಿಲಿಂಗ್ ನಡೆದಿತ್ತು. ಅಭಯ್, ಮಹೀನ್ ಹಾಗೂ ನವಾಜ್ ಎಂಬ ಮೂವರು ವಿದ್ಯಾರ್ಥಿಗಳಿಗೆ ಬಿಜಿಎಸ್ ಗ್ಲೋಬಲ್ ಇನ್ಸ್​ಟಿಟ್ಯೂಟ್ ಕಾಲೇಜ್​ನಲ್ಲಿ ಮೆಡಿಕಲ್ ಸೀಟ್​ ಸಿಕ್ಕಿತ್ತು. ಆದರೆ, ಕೌನ್ಸಿಲಿಂಗ್​ಗೆ ಇವರ ನಕಲಿ ವಿದ್ಯಾರ್ಥಿಗಳು ಬಂದಿದ್ದರು. ಈ ಬಗ್ಗೆ ಕರ್ನಾಟಕ ಪರೀಕ್ಷಾ‌ ಪ್ರಾಧಿಕಾರದ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಸಂಶಯದ ಬಗ್ಗೆ ಎಲ್ಲಾ ದಾಖಲೆ ಪರಿಶೀಲಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಮಲ್ಲೇಶ್ವರಂ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಅಸಲಿ ವಿದ್ಯಾರ್ಥಿಗಳಿಗೆ ನೊಟೀಸ್ ನೀಡಿದೆ. ಸದ್ಯ ಮೂವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.