ETV Bharat / state

ಖಾಸಗಿ ಅನುದಾನರಹಿತ ಶಿಕ್ಷಕರಿಂದ ಪ್ರತ್ಯೇಕ ಪ್ಯಾಕೇಜ್​ಗಾಗಿ ಹೋರಾಟ - ಖಾಸಗಿ ಅನುದಾನರಹಿತ ಶಿಕ್ಷಕರಿಂದ ಹೋರಾಟ

ಶಿಕ್ಷಣ ಸಂಸ್ಥೆಗಳು ಉಳಿದರೆ ಶಿಕ್ಷಕರ ಉಳಿವು ಎಂಬುವುದನ್ನು ಅರಿತು ಶಿಕ್ಷಕರನ್ನು ಉಳಿಸಿಕೊಳ್ಳಲು ಮತ್ತು ಅವರ ಗೌರವಕ್ಕೆ ಹಾಗೂ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಅನಿವಾರ್ಯವಾಗಿ ಹೋರಾಡಲು ನಿರ್ಧರಿಸಲಾಗಿದೆ. ಖಾಸಗಿ ಅನುದಾನರಹಿತ​​​ ಶಾಲೆ ಶಿಕ್ಷಣ ಸಂಸ್ಥೆಗಳ ನೆರವಿಗಾಗಿ ತಕ್ಷಣ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಬೆನ್ನಿಗೆ ನಾವಿದ್ದೇವೆ ಎಂಬ ಧೈರ್ಯ ಹಾಗೂ ಸಹಕಾರವನ್ನು ತಕ್ಷಣ ನೀಡಬೇಕಾಗಿ ಮನವಿ ಮಾಡಿದ್ದಾರೆ.‌

kams
ಕ್ಯಾಮ್ಸ್
author img

By

Published : Oct 24, 2020, 7:39 PM IST

ಬೆಂಗಳೂರು: ಕೋವಿಡ್- 19ರ ಪ್ರಸ್ತುತ ಸಂದರ್ಭದಲ್ಲಿ ಈಗಾಗಲೇ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಮಾರ್ಚ್​ನಿಂದ ಮುಚ್ಚಲ್ಪಟ್ಟಿದ್ದು, ಕಳೆದ ವರ್ಷ ಸರಿ ಸುಮಾರು 25 ರಿಂದ 30 ಪ್ರತಿಶತ, ಪಾಲಕ ಪೋಷಕರು ಶುಲ್ಕ ಕಟ್ಟಿಲ್ಲ. ಇದರಿಂದ ಹೆಚ್ಚಿನ ಪಾಲಕ ಪೋಷಕರು ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸದೇ ನಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ನೂಕಲಾಗಿದೆ ಎಂದು ಕ್ಯಾಮ್ಸ್​​ನ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ 2020-21ರ ಶೈಕ್ಷಣಿಕ ಸಾಲಿನಲ್ಲೂ ಪೋಷಕರು ಪೂರ್ವ ಪ್ರಾರ್ಥಮಿಕ ತರಗತಿಗಳಿಗೆ ಬಹುತೇಕ ಶಾಲೆಗಳಲ್ಲಿ 5 ರಿಂದ 10 ಪ್ರತಿಶತವೂ ಕನಿಷ್ಠ ಶುಲ್ಕ ಕಟ್ಟಿ ದಾಖಲಾತಿ ಮಾಡಿರುವುದಿಲ್ಲ. ಹಾಗೇ ಪ್ರಾಥಮಿಕ ಹಾಗೂ ಪ್ರೌಢ ತರಗತಿಗಳಿಗೂ 20 ರಿಂದ 30 ಪ್ರತಿಶತ ಕನಿಷ್ಠ ಶುಲ್ಕ ನೀಡುವ ಮುಖಾಂತರ ಮತ್ತು ಕೇವಲ 9 ,10ನೇ ತರಗತಿಗಳಲ್ಲಿ ಬಹುತೇಕ ಮಕ್ಕಳ ದಾಖಲಾತಿ ಕನಿಷ್ಠ ಶುಲ್ಕ ಕಟ್ಟುವುದರ ಮುಖಾಂತರ ದಾಖಲಾತಿ ಆಗಿದ್ದು, ಇದರಿಂದ ಹೆಚ್ಚಿನ ಪಾಲಕ ಪೋಷಕರು ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ.

ಖಾಸಗಿ ಅನುದಾನರಹಿತ ಶಿಕ್ಷಕರಿಂದ ಪ್ರತ್ಯೇಕ ಪ್ಯಾಕೇಜ್​ಗಾಗಿ ಹೋರಾಟ

ಸಾರ್ವಜನಿಕ ಶಿಕ್ಷಣ ಇಲಾಖೆ ಜೂನ್ 1ರಿಂದ ಸೆಪ್ಟೆಂಬರ್ 5ರವರಗೆ ಮಕ್ಕಳ ದಾಖಲಾತಿಗಳಿಗೆ ಕಡೆಯ ದಿನ ನಿಗದಿ ಪಡಿಸಿ ಆದೇಶಿಸಿದೆ.‌ ಆದರೂ ಪೋಷಕರು ದಾಖಲಾತಿಗೆ ಮುಂದಾಗದೇ ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಖಾಸಗಿ ಅನುದಾನರಹಿತ ಸಂಸ್ಥೆ ನೂಕಿದಂತಾಗಿದೆ. ಕ್ಯಾಮ್ಸ್ (ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ) ರಾಜ್ಯದ ಅತಿದೊಡ್ಡ ಸಂಘಟನೆಯಾಗಿದ್ದು, ನಮ್ಮ ಸದಸ್ಯ ಶಾಲೆಗಳಿಗೆ ಕಳೆದ ವರ್ಷ RTE ಶುಲ್ಕದ ಶೇ 25 ರಷ್ಟು ಮರು ಪಾವತಿ ಬಿಡುಗಡೆ ಮಾಡಲು ಸತತ ಪ್ರಯತ್ನಗಳ ನಂತರ ಅಲ್ಪ ಹಣ ಬಿಡುಗಡೆ ಮಾಡಲಾಗಿದೆ. ಆ ಹಣ ಶಿಕ್ಷಕರ ಸಂಬಳಕ್ಕೆ ಆದ್ಯತೆ ಎಂದು ಆದೇಶಿಸಿದ್ದು, ಈಗಾಗಲೇ 7ರಿಂದ 8 ತಿಂಗಳು ಕನಿಷ್ಠ ಸಂಬಳ ಹಾಗೂ ಇತರ ಎಲ್ಲ ಖರ್ಚು ವೆಚ್ಚವನ್ನು ಅನಿವಾರ್ಯವಾಗಿ ಮಾಡಬೇಕಾಗಿದೆ.‌‌ ಈ ಹಿನ್ನಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದಾಗಲಿ ಪಾಲಕ ಪೋಷಕರಿಂದಾಗಲಿ ಯಾವುದೇ ಸಕಾರಾತ್ಮಕ ಸ್ಪಂದನೆ ಬಂದಿಲ್ಲ. ಅನಿವಾರ್ಯವಾಗಿ ಬಹುತೇಕ ಶಿಕ್ಷಕರನ್ನು ಶಿಕ್ಷಣ ಸಂಸ್ಥೆಗಳು ಕೆಲಸದಿಂದ ತಾತ್ಕಾಲಿಕವಾಗಿ ತೆಗೆಯಲಾಗಿದ್ದು, ಇಂತಹ ಅತಿ ದೊಡ್ಡ ವರ್ಗ ಇಂದು ಪಾಲಕ ಪೋಷಕರಾಗಲಿ, ಶಿಕ್ಷಣ ಇಲಾಖೆಯಿಂದಾಗಲಿ ಯಾರ ಸಹಕಾರ ಇಲ್ಲದೇ ಅತಂತ್ರದಲ್ಲಿ ಸಿಲುಕಿ ನರಳುವಂತಾಗಿದೆ.

ಶಿಕ್ಷಣ ಸಂಸ್ಥೆಗಳು ಉಳಿದರೆ ಶಿಕ್ಷಕರ ಉಳಿವು ಎಂಬುವುದನ್ನು ಅರಿತು ಶಿಕ್ಷಕರನ್ನು ಉಳಿಸಿಕೊಳ್ಳಲು ಮತ್ತು ಅವರ ಗೌರವಕ್ಕೆ ಹಾಗೂ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಅನಿವಾರ್ಯವಾಗಿ ಹೋರಾಡಲು ನಿರ್ಧರಿಸಲಾಗಿದೆ. ಖಾಸಗಿ ಅನುದಾನರಹಿತ​​​ ಶಾಲೆ ಶಿಕ್ಷಣ ಸಂಸ್ಥೆಗಳ ನೆರವಿಗಾಗಿ ತಕ್ಷಣ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಬೆನ್ನಿಗೆ ನಾವಿದ್ದೇವೆ ಎಂಬ ಧೈರ್ಯ ಹಾಗೂ ಸಹಕಾರವನ್ನು ತಕ್ಷಣ ನೀಡಬೇಕಾಗಿ ಮನವಿ ಮಾಡಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.