ETV Bharat / state

ಗ್ರಾಮೀಣ ಆರ್ಥಿಕತೆ ಬಲಪಡಿಸಬೇಕು: ಮುಖ್ಯ ನ್ಯಾಯಮೂರ್ತಿ ಓಕ ಸಲಹೆ - ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಗಾಂಧೀಜಿಯವರು ಗ್ರಾಮ ಉದ್ಯೋಗದ ಕಲ್ಪನೆ ಜಾರಿಗೆ ತಂದರು. ಗ್ರಾಮೀಣ ವಲಸೆ ವ್ಯಾಪಕವಾಗಿರುವ ಪ್ರಸ್ತುತ ಕಾಲಮಾನದಲ್ಲಿ ಗಾಂಧೀಜಿ ಅವರ ಕಲ್ಪನೆ ಕುರಿತು ಆರ್ಥಿಕ ತಜ್ಞರು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಓಕ ತಿಳಿಸಿದ್ದಾರೆ.

Chief Justice Oka
ಮುಖ್ಯ ನ್ಯಾಯಮೂರ್ತಿ ಓಕ
author img

By

Published : Oct 2, 2020, 10:41 PM IST

ಬೆಂಗಳೂರು: ಗ್ರಾಮೀಣ ವಲಸೆ ತಡೆಗಟ್ಟಿ ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಆರ್ಥಿಕ ತಜ್ಞರು ಚಿಂತನೆಗಳನ್ನು ನಡೆಸಬೇಕಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ವಿವಿಯ ಜಲ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "2020ರಲ್ಲಿ ಗಾಂಧೀಜಿ ಪ್ರಸ್ತುತ" ವಿಷಯದ ಕುರಿತು ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಗಾಂಧೀಜಿಯವರು ಗ್ರಾಮ ಉದ್ಯೋಗದ ಕಲ್ಪನೆ ಜಾರಿಗೆ ತಂದರು. ಗ್ರಾಮೀಣ ವಲಸೆ ವ್ಯಾಪಕವಾಗಿರುವ ಪ್ರಸ್ತುತ ಕಾಲಮಾನದಲ್ಲಿ ಗಾಂಧೀಜಿ ಅವರ ಕಲ್ಪನೆ ಕುರಿತು ಆರ್ಥಿಕ ತಜ್ಞರು ಗಂಭೀರವಾಗಿ ಚಿಂತಿಸಬೇಕಿದೆ. ಗ್ರಾಮೀಣ ಕೈಗಾರಿಕೆಗಳ ಉತ್ತೇಜನಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಯಶಸ್ಸಿನ ಮೂಲ ಆಧಾರ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ ಮತ್ತು ಸಹಿಷ್ಣುತೆಯ ತತ್ವಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಗಾಂಧೀಜಿ ತಾವು ಪ್ರತಿಪಾದಿಸಿದ ತತ್ವಗಳಂತೆಯೇ ಜೀವನದುದ್ದಕ್ಕೂ ಬದುಕಿದರು. ಟೀಕೆಗಳನ್ನು ಗೆಲ್ಲಲು ಸಹಿಷ್ಣುತೆ ಇರಬೇಕು, ಸಹಿಷ್ಣುತೆಯ ಮೂಲಕವೇ ಟೀಕೆಗಳನ್ನು ಗೆಲ್ಲಬೇಕು. ಸಹಿಷ್ಣುತೆ ಪಾಲಿಸುವ ಸಾಮರ್ಥ್ಯ ಸಿಗಬೇಕಿದ್ದರೆ ಸ್ವಪ್ರತಿಷ್ಠೆ ಬಿಡಬೇಕು ಎಂಬ ಜೀವನ ಮಂತ್ರವನ್ನು ಗಾಂಧೀಜಿಯವರು ಕಲಿಸಿಕೊಟ್ಟರು. ಅವರು ಪ್ರತಿಪಾದಿಸಿದ ಚಿಂತನೆ ಮತ್ತು ತತ್ವಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಮುಖ್ಯ ನ್ಯಾಯಮೂರ್ತಿ ಓಕ ಅಭಿಪ್ರಾಯಪಟ್ಟರು.

ಗಾಂಧೀಜಿ ಸ್ವಾತಂತ್ರ್ಯದ ಬಗ್ಗೆ ತಮ್ಮದೇ ಆದ ಪರಿಕಲ್ಪನೆ ಹೊಂದಿದ್ದರು . ಅದರಂತೆ, ಬೆರಳೆಣಿಕೆಯಷ್ಟು ಬಲಾಢ್ಯರಿಗೆ ಹಕ್ಕುಗಳು ಸಿಕ್ಕರೆ ಅದನ್ನು ಸ್ವಾತಂತ್ರ್ಯ ಎಂದು ಪರಿಗಣಿಸಲಾಗದು. ಸಮಾಜದ ಎಲ್ಲ ಮತ - ಪಂಗಡಗಳ, ಶೋಷಿತ - ದುರ್ಬಲ ವರ್ಗಗಳಿಗೂ ಸಮಾನ ಹಕ್ಕುಗಳು ಸಿಕ್ಕಾಗ ಮಾತ್ರ ಅದನ್ನು ನಿಜವಾದ ಸ್ವಾತಂತ್ರ್ಯ ಎಂದು ನಂಬಿದ್ದರು ಎಂದು ಓಕ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್, ಅಲೋಕ್ ಆರಾಧೆ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎ ಶಿವಶಂಕರ್, ಜಲ ಸಂಸ್ಥೆಯ ನಿರ್ದೇಶಕ ಡಾ. ಎಂ ಇನಾಯತ್ ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.