ETV Bharat / state

ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ: ತಿಂಗಳಿಗೆ ಸರಾಸರಿ 2 ಸಾವಿರ ಜನರ ಮೇಲೆ ದಾಳಿ - Etv bharat kannada

ಸಿಲಿಕಾನ್​ ಸಿಟಿಯಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಇವುಗಳಿಂದ ಒಂದೇ ದಿನಕ್ಕೆ 80ಕ್ಕೂ ಹೆಚ್ಚು ಜನ ಕಡಿತಕ್ಕೆ ಒಳಗಾಗುತ್ತಿದ್ದಾರೆ.2020 ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನ ಶ್ವಾನ ಕಡಿತಕ್ಕೆ ಒಳಗಾಗಿದ್ದಾರೆ.

ಬೀದಿನಾಯಿ
ಬೀದಿನಾಯಿ
author img

By

Published : Jul 26, 2022, 3:33 PM IST

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿವೆ. ಒಂದೇ ತಿಂಗಳಲ್ಲಿ ಸುಮಾರು 2 ಸಾವಿರದಷ್ಟು ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕೆಲವರಲ್ಲಿ ರೇಬಿಸ್ ಲಕ್ಷಣಗಳು ಕಂಡು ಬಂದಿವೆ. ಸಿಟಿಯಲ್ಲಿ ಒಂದು ದಿನಕ್ಕೆ 80ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ರಾತ್ರಿ ಹೊತ್ತು ರಸ್ತೆಯಲ್ಲಿ ಮಕ್ಕಳು ಓಡಾಡಲು ಭಯ ಪಡುತ್ತಿದ್ದಾರೆ.

ಸಂತಾನ ಹರಣ ಚಿಕಿತ್ಸೆಗೆ ಮುಂದಾದ ಪಾಲಿಕೆ

ಮನೆಯ ಮುಂದೆ ಮಕ್ಕಳು ಆಟ ಆಡುವಾಗ ಅಟ್ಯಾಕ್ ಮಾಡುತ್ತಿವೆ. ಸಿಟಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. 2020 ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನ ಶ್ವಾನ ಕಡಿತಕ್ಕೆ ಒಳಗಾಗಿದ್ದಾರೆ. 2020 ರ ಫೆಬ್ರವರಿಯಲ್ಲಿ ಓರ್ವ ಮಹಿಳೆ ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ. 31 ವರ್ಷದ ಮಹಿಳೆಗೆ, ನಾಯಿ ಕಚ್ಚಿದ್ದರೂ ಚಿಕಿತ್ಸೆ ಪಡೆದಿರಲಿಲ್ಲ. ನಿಮ್ಹಾನ್ಸ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ರೇಬಿಸ್ ಇರುವುದು ಖಚಿತವಾಗಿತ್ತು.

ಬೀದಿ ನಾಯಿಗಳ ದಾಳಿ ವಿವರ
ಬೀದಿ ನಾಯಿಗಳ ದಾಳಿ ವಿವರ

ಎರಡು ವರ್ಷದಲ್ಲಿ ಬೆಂಗಳೂರಿನ 52 ಸಾವಿರದ 262 ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ತಿಂಗಳಿಗೆ ಸರಾಸರಿ 2,177 ಮಂದಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗಿದ್ದಾರೆ. ಸಂತಾನ ಹರಣ ಚಿಕಿತ್ಸೆಗೆ ಪಾಲಿಕೆ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ, ನಿತ್ಯ 300-400 ನಾಯಿಗಳಿಗೆ ವ್ಯಾಕ್ಸಿನ್ ಗುರಿ : ಪ್ರಭು ಚವ್ಹಾಣ್​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.