ETV Bharat / state

ಮತ್ತೆ ಡ್ರಂಕ್​ & ಡ್ರೈವ್​​ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರು! - Case prohibition against drunk drivers

ಮಾರಣಾಂತಿಕ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವುದು ಅನಿವಾರ್ಯ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

stopped-the-case-against-drunk-drivers-by-police
ಪೊಲೀಸ್​‌ ಇಲಾಖೆ‌!
author img

By

Published : Feb 17, 2021, 7:17 PM IST

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸಂಚಾರ ವಿಭಾಗದ ಅಧಿಕಾರಿಗಳು, ಸಿಬ್ಬಂದಿಯ ಸುರಕ್ಷತಾ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕಳೆದ 2020ನೇ ಸಾಲಿನ ಮಾರ್ಚ್ ತಿಂಗಳಿನಿಂದ ಮದ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ದೂರು ದಾಖಲಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಇದೀಗ ಕೋವಿಡ್​ ಮಾರ್ಗಸೂಚಿಗಳೊಂದಿಗೆ ಅದನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ.

stopped the Case  against drunk drivers by police
ಮಾಧ್ಯಮ ಪ್ರಕಟಣೆ
ಆದರೆ, ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವವರ ಸಂಖ್ಯೆ ಹಾಗೂ ಅವರಿಂದ ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತಿರುವುದನ್ನು ಗಮನಿಸಲಾಗಿದ್ದು, ಈ ನಿಟ್ಟಿನಲ್ಲಿ ನಗರ ಸಂಚಾರ ವಿಭಾಗದಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಗೆ ಈ ಕೆಳಕಂಡ ನಿಯಮಗಳನ್ನು ಅನುಸರಿಸುವ ಮುಖಾಂತರ ಶೀಘ್ರದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಾರಣಾಂತಿಕ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡುವುದು ಅನಿವಾರ್ಯವಾಗಿದ್ದು, ಅಪಘಾತಗಳು ತಡೆಗಟ್ಟುವ ದೃಷ್ಟಿಯಿಂದ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು‌ ಪೋಲಿಸ್ ಇಲಾಖೆ ತಿಳಿಸಿದೆ.‌
* ಸ್ಯಾನಿಟೈಸ್ ಆದ ಅಲ್ಲೋಮೀಟರ್‌ಗಳನ್ನು ಪ್ರತ್ಯೇಕ ಜಿಪ್​ ಲಾಕ್​ ಕವರ್​ನಲ್ಲಿರಿಸಿ, ಒಬ್ಬರಿಗೆ ಉಪಯೋಗಿಸಿದ ನಂತರ ಅದೇ Zip Lock Cover ನಲ್ಲಿ ಪ್ರತ್ಯೇಕವಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ.
* ಸಂಭಾಷಣೆ ಮಾಡುವಾಗ ಒಂದು ಉಪಕರಣವನ್ನು ಕೇವಲ ಒಬ್ಬರಿಗೆ ಒಂದು‌ ಬಾರಿ ಮಾತ್ರ ಉಪಯೋಗಿಸಲಾಗುವುದು.
* ಚಾಲಕ-ಸವಾರರ ತಪಾಸಣೆಯನ್ನು ನಡೆಸುವ ವೇಳೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಸ್ಟ್ರಾ ಉಪಯೋಗಿಸಲಾಗುವುದು.
* ತಪಾಸಣೆ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯು ಹ್ಯಾಂಡ್‌ಗ್ಲೌಸ್, ಮಾಸ್ಕ್ ಮತ್ತು ಫೇಸ್ ಶೀಲ್ಡ್ ಬಳಸುವುದರ ಜೊತೆಗೆ ಪ್ರತಿ ಬಾರಿಯೂ ತಪಾಸಣೆ ಮಾಡಿದ ನಂತರ ಹ್ಯಾಂಡ್ ಸ್ಯಾನಿಟೈಸ್ ಮಾಡಲು ತಿಳಿಸಲಾಗಿದೆ.
* ಬಳಸಿದ ಉಪಕರಣವನ್ನು ಸಾನಿಟೈಸ್ ಮಾಡಿ ಕನಿಷ್ಠ 3 ದಿನಗಳ ಮಟ್ಟಿಗೆ ಉಪಯೋಗಿಸದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.
* ತಪಾಸಣೆ ಮಾಡುವಾಗ ಚಾಲಕರ - ಸವಾರರ ಮುಂದೆ ಪ್ರತಿ ಬಾರಿಯು ಸ್ಯಾನಿಟೈಸ್​ ಮಾಡಿಕೊಳ್ಳುವ ಮೂಲಕ ಶುಚಿತ್ವವನ್ನು ಕಾಪಾಡಿಕೊಳ್ಳಲು ಮನವರಿಕೆ ಮಾಡಿಕೊಡಲಾಗುತ್ತದೆ.
* ತಪಾಸಣೆ ಕಾರ್ಯವನ್ನು ಯೋಜನಾಬದ್ಧವಾಗಿ ಕೋವಿಡ್-19ರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಲಾಗುವುದು ಎಂದು ಪೊಲೀಸ್​ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಓದಿ: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ; 10 ಗ್ರಾಂ ಬಂಗಾರದ ಬೆಲೆ ಇದೀಗ ಮತ್ತಷ್ಟು ಇಳಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.