ETV Bharat / state

ಹೆಚ್ಚುತ್ತಿರುವ ನಿರುದ್ಯೋಗ: ಕೊರೊನಾ ಭಯಕ್ಕೆ ತಣ್ಣಗಾದ ಉದ್ಯೋಗ ವಿನಿಯಮ ಕೇಂದ್ರಗಳು

ಕೊರೊನಾ ಬಳಿಕ ಸಾಕಷ್ಟು ಯುವಕರು ಗಲ್ಫ್ ರಾಷ್ಟ್ರಗಳೂ ಸೇರಿದಂತೆ ಹಲವು ದೇಶಗಳಿಂದ ರಾಜ್ಯಕ್ಕೆ ವಾಪಸಾಗಿದ್ದಾರೆ. ಅಂತೆಯೇ ಇತರೆ ರಾಜ್ಯಗಳಲ್ಲಿ ದುಡಿಯುತ್ತಿದ್ದ ಯುವಕರೂ ಊರಿಗೆ ಮರಳಿದ್ದಾರೆ. ಅವರಲ್ಲಿ ನುರಿತ ಕೆಲಸಗಾರರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಕೌಶಲಾಭಿವೃದ್ದಿ ಇಲಾಖೆ ಮುಂದಾಗಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

unemployment peoples
ನಿರುದ್ಯೋಗಿ ಯುವಕ-ಯುವತಿಯರು
author img

By

Published : Nov 28, 2020, 5:09 PM IST

ಬೆಂಗಳೂರು: ಕೊರೊನಾ ಸೋಂಕು ಆವರಿಸಿದ ಬಳಿಕ ಎಲ್ಲಾ ರಂಗದ ಆರ್ಥಿಕ ಚಟುವಟಿಕೆಗಳು ಮಂಕಾಗಿವೆ. ಉದ್ಯೋಗದಾತರು ನಷ್ಟಕ್ಕೆ ಸಿಲುಕಿ ತಮ್ಮ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ. ಹಾಗೆಂದು ಉದ್ಯೋಗವೇ ಇಲ್ಲವೆಂದಲ್ಲ, ನುರಿತ ಹಾಗೂ ಕೌಶಲಭರಿತ ಕೆಲಸಗಾರರಿಗೆ ಈಗಲೂ ಬೇಡಿಕೆ ಇದೆ. ಆದರೆ, ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಉದ್ಯೋಗ ಕೊಡಿಸುವಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ವಿಫಲವಾಗಿವೆ.

ಉತ್ಪನ್ನ ಮತ್ತು ಸೇವೆಗಳ ಬೇಡಿಕೆಯೂ ಕುಸಿದಿರುವುದರಿಂದ ಉದ್ದಿಮೆ ಹಾಗೂ ಕೈಗಾರಿಕೆಗಳು ಸಹಜವಾಗಿಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಣಾಮವಾಗಿ ಉದ್ಯೋಗಿಗಳ ಸಂಖ್ಯೆ ಹೆಚ್ಚುವ ಬದಲು ಉದ್ಯೋಗ ಕಳೆದುಕೊಳ್ಳುವರ ಸಂಖ್ಯೆಯೇ ಹೆಚ್ಚಾಗಿದೆ. ಈಗಷ್ಟೇ ಕಲಿಕೆ ಪೂರೈಸಿ ಹೊರಬರುವ ಪದವೀಧರರಿಗಂತೂ ಉದ್ಯೋಗ ಕನಸಿನ ಮಾತು ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ...ಮೋದಿಯವರ ಹೂಡಿಕೆ ಸ್ನೇಹಿ ಆಡಳಿತದಿಂದ FDI ಪ್ರಮಾಣ 28.1 ಶತಕೋಟಿ ಡಾಲರ್​ಗೆ ತಲುಪಿದೆ: ಗೋಯಲ್

ಕೊರೊನಾ ಭಯ: ಶೈಕ್ಷಣಿಕ ಅರ್ಹತೆ, ಕುಶಲತೆ, ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ಯುವಕರನ್ನು ನೋಂದಾಯಿಸಿಕೊಂಡು ತರಬೇತಿ ನೀಡಿ ಉದ್ಯೋಗ ಕೊಡಿಸಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ವಿನಿಯಮ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ಹಿಂದೆ ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದ್ದವು. ಸರ್ಕಾರ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತ್ಯೇಕ ಇಲಾಖೆ ಸೃಜಿಸಿದೆ. 2016ರಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಈ ಕೇಂದ್ರಗಳನ್ನು ತಂದು ಯುವಕರ ಶೈಕ್ಷಣಿಕ ಅರ್ಹತೆ ಮೇರೆಗೆ ಅವರ ಕೌಶಲಗಳನ್ನು ಹೆಚ್ಚಿಸಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತಿದೆ.

ಆದರೆ, ಕೊರೊನಾ ಬಂದ ಬಳಿಕ ಈ ಎಲ್ಲ ಕೇಂದ್ರಗಳು ತಣ್ಣಗಾಗಿವೆ. ಸೋಂಕಿನ ಭಯಕ್ಕೆ ಸಿಲುಕಿರುವ ಅಧಿಕಾರಿಗಳು ಮಾರ್ಚ್​ನಿಂದ ಈವರೆಗೂ ಒಂದೇ ಒಂದು ಉದ್ಯೋಗ ಮೇಳವನ್ನೂ ನಡೆಸಿಲ್ಲ. ಹಿಂದಿನ ವರ್ಷಗಳಲ್ಲಿ ಜಿಲ್ಲಾವಾರು ಉದ್ಯೋಗ ವಿನಿಮಯ ಕೇಂದ್ರಗಳು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಮೇಳ ನಡೆಸುತ್ತಿದ್ದವು. ಇದರಲ್ಲಿ ಭಾಗವಹಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳು ತಮ್ಮ ಸಾಮರ್ಥ್ಯಾನುಸಾರ ಕೆಲಸ ಗಿಟ್ಟಿಸುತ್ತಿದ್ದರು. ಆದರೆ, ಪ್ರಸಕ್ತ ವರ್ಷ ಉದ್ಯೋಗದಾತ ಸಂಸ್ಥೆಗಳು ನೇಮಕಾತಿ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ಕೂಡ ನಿಷ್ಕ್ರಿಯವಾಗಿವೆ.

ಇದನ್ನೂ ಓದಿ...2.51 ಶತಕೋಟಿ ಡಾಲರ್​ಗೆ ತಲುಪಿದ ವಿದೇಶಿ ವಿನಿಮಯ ನಿಧಿ: ಚಿನ್ನದ ನಿಕ್ಷೇಪ ಕುಸಿತ

ಅಧಿಕಾರಿಗಳ ಅಸಹಾಯಕತೆ: ಕೋವಿಡ್​​-19 ಸಂದರ್ಭದಲ್ಲಿ ತಮ್ಮ ನೆರವಿಗೆ ಬರಬಹುದು ಎಂಬ ಯುವಕರ ನಿರೀಕ್ಷೆಯನ್ನು ತಲುಪುವಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳು ವಿಫಲವಾಗಿವೆ. ಈ ಕುರಿತು ಜಿಲ್ಲಾ ಹಂತದ ಅಧಿಕಾರಿಗಳನ್ನು ವಿಚಾರಿಸಿದರೆ ಅವರು ಕೊರೊನಾ ಭಯ ವ್ಯಕ್ತಪಡಿಸುತ್ತಾರೆ. ಕೌಶಲಾಭಿವೃದ್ದಿ ಇಲಾಖೆಯ ಜಂಟಿ ನಿರ್ದೇಶಕ ಗೋವಿಂದೇಗೌಡ ಅವರ ಬಳಿ ವಿಚಾರಿಸಿದರೆ, ಗುಂಪು ಕೂಡಿದರೆ ಕೊರೊನಾ ಸೋಂಕು ಹಬ್ಬುತ್ತದೆ ಎನ್ನುವ ಕಾರಣಕ್ಕಾಗಿ ಕಳೆದ ಮಾರ್ಚ್​​​ನಿಂದ ಉದ್ಯೋಗ ಮೇಳ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಕತೆ ವ್ಯಕ್ತಪಡಿಸುತ್ತಾರೆ.

ಅಲ್ಲದೇ, ಉದ್ಯೋಗಾಕಾಂಕ್ಷಿಗಳು ತಮ್ಮ ವಿವರಗಳನ್ನು ವೆಬ್​ಸೈಟ್​ನಲ್ಲಿ ರಿಜಿಸ್ಟರ್​​ಗೆ ಅವಕಾಶ ಕಲ್ಪಿಸಿದ್ದೇವೆ. ಅದರಂತೆ ರಾಜ್ಯದಲ್ಲಿ ಅಂದಾಜು 10 ಸಾವಿರ ಉದ್ಯೋಗಾಕಾಂಕ್ಷಿಗಳು ಹೆಸರು, ವಿವರ ನೋಂದಾಯಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ನೆರವು ನೀಡುವ ಪ್ರಯತ್ನ ಮಾಡಲಿದ್ದೇವೆ. ಸದ್ಯ ಸಣ್ಣ, ಮಧ್ಯಮ ಮತ್ತು ಬೃಹತ್‌ ಪ್ರಮಾಣದ ಕೈಗಾರಿಕೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇದೆ. ಯಾವ ಕೌಶಲ ಹೊಂದಿದ ಕಾರ್ಮಿಕರ ಅವಶ್ಯಕತೆ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ.

ಇದನ್ನೂ ಓದಿ...ಆರ್ಥಿಕತೆ ಚೇತರಿಕೆಯ ವೇಗ ‘ಆಹ್ಲಾದಕರ ಮತ್ತು ಆಶ್ಚರ್ಯ’: ನೀತಿ ಆಯೋಗದ ಉಪಾಧ್ಯಕ್ಷರ ಹರ್ಷ

ತರಬೇತಿ ಕೇಂದ್ರಗಳ ಕೊರತೆ: ಕೌಶಲಾಭಿವೃದ್ದಿ ಇಲಾಖೆಯು ಕೋರ್ಸ್​ಗಳಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಆದರೆ, ನಾನಾ ಕೌಶಲಗಳಿಗೆ ತರಬೇತಿ ನೀಡುವ ಟ್ರೈನಿಂಗ್‌ ಸೆಂಟರ್‌ನ (ತರಬೇತಿ ಕೇಂದ್ರ) ಕೊರತೆ ಪ್ರತಿ ಜಿಲ್ಲೆಯಲ್ಲೂ ಇದೆ. ಪ್ರಸಕ್ತ ವರ್ಷ ₹541 ಕೋಟಿ ಹಣ ಇಲಾಖೆ ಕಾರ್ಯ ನಿರ್ವಹಣೆಗೆ ವ್ಯಯಿಸಲಾಗಿದೆ. ಹಾಗಿದ್ದೂ ಕೊರತೆಗಳು ಮಾತ್ರ ಹಾಗೆಯೇ ಉಳಿದಿವೆ. ಹೀಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗುವ ಕೌಶಲ ಹೊಂದಿದ್ದಂತಹ ಯುವಕರಿಗೆ ಸ್ವಯಂ ಉದ್ಯೋಗ ಸಲಹೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.