ETV Bharat / state

ಮಗನ ತುಂಟಾಟಕ್ಕೆ ಬೇಸತ್ತು ಬೆಲ್ಟ್​ನಲ್ಲಿ ಹೊಡೆದು ಸಾಯಿಸಿದ ಮಲತಂದೆ - ಭಿನ್ನಮಂಗಲ ಮಗುವನ್ನು ಹೊಡೆದು ಸಾಯಿಸಿದ ಮಲತಂದೆ

ಮೋಹಕ್ಕೆ ಬಿದ್ದು ಗಂಡನನ್ನ ತೊರೆದು ಮತ್ತೊಬ್ಬನನ್ನು ಮದುವೆಯಾಗಿದ್ದ ನೇತ್ರಾಗೂ ಸತ್ಯದರ್ಶನವಾಗಿದೆ. ಆದ್ರೆ ಬದುಕಿ ಬಾಳಬೇಕಿದ್ದ ಮಗೂ ಮಸಣದ ಹಾದಿ ಹಿಡಿದಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರ್ತಿಕ್​ನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ..

step-father-killed-his-son-in-bhinnamanangala
ಮಗನನ್ನು ಸಾಯಿಸಿದ ಮಲತಂದೆ
author img

By

Published : May 15, 2021, 9:03 PM IST

ನೆಲಮಂಗಲ : ತಾಯಿ ಕೆಲಸಕ್ಕೆ ಹೋಗಿದ್ದಾಗ ಮಗನನ್ನು ನೋಡಿಕೊಳ್ಳುತ್ತಿದ್ದ ಮಲತಂದೆ ಬಾಲಕನ ತುಂಟಾಟಕ್ಕೆ ಬೇಸತ್ತು ಬೆಲ್ಟ್​ನಲ್ಲಿ ಹೊಡೆದು ಸಾಯಿಸಿದ ಘಟನೆ ನೆಲಮಂಗಲದ ಭಿನ್ನಮಂಗಲ ಗ್ರಾಮದಲ್ಲಿ ನಡೆದಿದೆ.

6 ವರ್ಷದ ಬಾಲಕ ಹರ್ಷವರ್ಧನ್ ಮೃತ ಬಾಲಕ. ಕೊಲೆಗೈದ ಆರೋಪಿ ಕಾರ್ತಿಕ್ ಪೊಲೀಸರ ವಶದಲ್ಲಿದ್ದಾನೆ. ನೇತ್ರಾ ಎಂಬ ಮಹಿಳೆ ಒಂದೂವರೆ ವರ್ಷದ ಹಿಂದೆ ಗಂಡ ಶಿವಕುಮಾರ್​ನನ್ನ ತೊರೆದು ಮಗನ ಜೊತೆ ವಾಸವಾಗಿದ್ದಳು.

ಒಂಟಿಯಾಗಿದ್ದ ನೇತ್ರಾ ತನಗಿಂತ ಕಿರಿಯವನಾದ ಆರೋಪಿ ಕಾರ್ತಿಕ್ ಜೊತೆ ಮದುವೆ ಮಾಡಿಕೊಂಡು ಭಿನ್ನಮಂಗಲದಲ್ಲಿ ವಾಸವಾಗಿದ್ದಳು.

ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಮಗನನ್ನು ಕಾರ್ತಿಕ್ ಜೊತೆ ಬಿಟ್ಟು ಹೋಗಿದ್ದಳು. ಮಧ್ಯಾಹ್ನದ ಹೊತ್ತಿಗೆ ನೇತ್ರಾಗೆ ಪೋನ್ ಮಾಡಿದ ಕಾರ್ತಿಕ್, ಹರ್ಷವರ್ಧನ್ ಬಾಯಿ ಕಚ್ಚಿಕೊಳ್ಳುತ್ತಿದ್ದಾನೆ ಬಾ ಎಂದು ಪೋನ್ ಮಾಡಿದ್ದಾನೆ.

ಮಗನ ತುಂಟಾಟಕ್ಕೆ ಬೇಸತ್ತು ಬೆಲ್ಟ್​ನಲ್ಲಿ ಹೊಡೆದು ಸಾಯಿಸಿದ ಮಲತಂದೆ

ಗಾಬರಿಗೊಂಡ ತಾಯಿ ಮಗನಿಗೆ ಮೂರ್ಛೆ ರೋಗ ಬಂದಿರಬಹುದೆಂದು ನಂಬಿ ನೇತ್ರಾ ಆಸ್ಪತ್ರೆಗೆ ಕರೆತರುವಂತೆ ಹೇಳಿದ್ದಾಳೆ. ಆದ್ರೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಶವವಾಗಿದ್ದ ಕರುಳಬಳ್ಳಿಯನ್ನು ನೋಡಿದಾಗ ನಿಜ ತಿಳಿದಿದೆ.

ಆಸೆಗಾಗಿ ನೇತ್ರಾಳನ್ನು ಮದುವೆಯಾಗಿದ್ದ ಕಾರ್ತಿಕ್​ಗೆ ಅವಳ ಮಗ ಬೇಕಿರಲಿಲ್ಲ. ನಿನ್ನೆ ಹರ್ಷವರ್ಧನ್​ ವಯೋ ಸಹಜವಾಗಿ ತುಂಟಾಟ ಮಾಡಿದ್ದಾನೆ. ಇದರಿಂದ ಬೇಸತ್ತ ಕ್ರೂರಿ ಬೆಲ್ಟ್​​ನಿಂದ ಹೊಡೆದು ಸಾಯಿಸಿದ್ದಾನೆ.

ಮೋಹಕ್ಕೆ ಬಿದ್ದು ಗಂಡನನ್ನ ತೊರೆದು ಮತ್ತೊಬ್ಬನನ್ನು ಮದುವೆಯಾಗಿದ್ದ ನೇತ್ರಾಗೂ ಸತ್ಯದರ್ಶನವಾಗಿದೆ. ಆದ್ರೆ ಬದುಕಿ ಬಾಳಬೇಕಿದ್ದ ಮಗೂ ಮಸಣದ ಹಾದಿ ಹಿಡಿದಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರ್ತಿಕ್​ನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.