ETV Bharat / state

ಆರು ತಿಂಗಳಲ್ಲಿ ಬೆಂಗಳೂರಲ್ಲಿ ದಾಖಲಾದ ಅಪರಾಧ ಪ್ರಕರಣಗಳೆಷ್ಟು..? ಪೊಲೀಸರು ಭೇದಿಸಿದ ಕೇಸ್​ಗಳೆಷ್ಟು?

author img

By

Published : Jul 27, 2021, 7:32 PM IST

ಕೊಲೆ, ಸುಲಿಗೆ ಹಾಗೂ‌ ಡಕಾಯಿತಿ ಪ್ರಕರಣಗಳನ್ನ ಸುಲಭವಾಗಿ ಭೇದಿಸುತ್ತಿರುವ ಪೊಲೀಸರಿಗೆ ವಾಹನ ಕಳವು, ಮನೆ ಕಳವು ಹಾಗೂ ವಂಚನೆ ಪ್ರಕರಣಗಳೇ ತಲೆನೋವಾಗಿ ಪರಿಣಮಿಸಿವೆ. ಕಳೆದ ಆರು ತಿಂಗಳಲ್ಲಿ ನಡೆದ ಅಪರಾಧ ಪ್ರಕರಣ ಮಾಹಿತಿ ಇಲ್ಲಿದೆ.

statistics-of-total-solved-and-pending-cases

ಬೆಂಗಳೂರು: ನಗರದಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾದಂತೆ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗುತ್ತಿದ್ದಾರೆ.‌ ಕೊಲೆ, ಸುಲಿಗೆ ಹಾಗೂ‌ ಡಕಾಯಿತಿ ಪ್ರಕರಣಗಳನ್ನ ಸುಲಭವಾಗಿ ಭೇದಿಸುತ್ತಿರುವ ಪೊಲೀಸರಿಗೆ ವಾಹನ ಕಳವು, ಮನೆ ಕಳವು ಹಾಗೂ ವಂಚನೆ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿಯುವುದೇ ಹೆಚ್ಚು ತಲೆನೋವಾಗಿ ಪರಿಣಮಿಸಿದೆ.

ಕೊರೊನಾ ಭೀತಿಯಲ್ಲೂ ಮಿಂಚಿನ ಕಾರ್ಯಾಚರಣೆ..

ಕೊರೊನಾ ಭೀತಿ ನಡುವೆಯೂ ಕಳೆದ ಜನವರಿಯಿಂದ ಜುಲೈ ಅಂತ್ಯದವರೆಗೆ ಸೈಬರ್ ಅಪರಾಧ ಹೊರತುಪಡಿಸಿ 10,544 ಕೇಸ್​ಗಳು ವರದಿಯಾಗಿವೆ. ಈ ಪೈಕಿ 5,580 ಕೇಸ್​ಗಳನ್ನು ಬೆಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ.

ಹಳೆ ದ್ವೇಷ, ಹಣಕಾಸು ಹಾಗೂ ಕ್ಷುಲ್ಲಕ ಕಾರಣಗಳಿಗಾಗಿ ನಡೆಯುವ ಬಹುತೇಕ ಕೊಲೆ‌ ಪ್ರಕರಣಗಳನ್ನು ಖಾಕಿ ಭೇದಿಸಿದೆ. ನಗರದಲ್ಲಿ ಕಳೆದ ಏಳು ತಿಂಗಳಲ್ಲಿ 82 ಕೊಲೆಗಳ ಪೈಕಿ 80 ಪ್ರಕರಣಗಳನ್ನು ಭೇದಿಸಲಾಗಿದೆ. 22 ಡಕಾಯಿತಿ ಪ್ರಕರಣಗಳ ಪೈಕಿ 21 ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. 87 ಸರಗಳ್ಳತನ‌ ಪ್ರಕರಣಗಳಲ್ಲಿ 64 ಕೇಸ್​ಗಳನ್ನು​ ಭೇದಿಸಿದ್ದು 23 ಪ್ರಕರಣಗಳು ಬಾಕಿ ಉಳಿದಿವೆ.

219 ರಾಬರಿ ಕೇಸ್​ಗಳಲ್ಲಿ 162 ಕೇಸ್​ ಭೇದಿಸಲಾಗಿದ್ದು 57 ಕೇಸ್​ಗಳು ಬಾಕಿಯಿದೆ. ಕಿಡ್ನ್ಯಾಪ್ ಹಾಗೂ ಮಿಸ್ಸಿಂಗ್ 413 ಕೇಸ್​ಗಳಲ್ಲಿ 244 ಪ್ರಕರಣ ಭೇದಿಸಲಾಗಿದ್ದು 169 ಕೇಸ್ ಬಾಕಿಯಿದೆ. ಲೈಂಗಿಕ ಕಿರುಕುಳದಡಿ 304 ಕೇಸ್ ವರದಿಯಾದರೆ, 189 ಕೇಸ್ ಪತ್ತೆಯಾಗಿದ್ದು 115 ಬಾಕಿ ಯಿವೆ. ಆತ್ಯಾಚಾರದಡಿ 59 ಕೇಸ್​ಗಳು ವರದಿಯಾದರೆ 53 ಪ್ರಕರಣಗಳನ್ನು ಮಾತ್ರ ಭೇದಿಸಲಾಗಿದೆ. ಮಹಿಳೆ ಮೇಲೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 207 ಪ್ರಕರಣಗಳ ಪೈಕಿ 178 ಇತ್ಯರ್ಥವಾಗಿದ್ದು 29 ಕೇಸ್ ಬಾಕಿ ಉಳಿದಿವೆ.

ಕಳ್ಳತನ ಪ್ರಕರಣಗಳೇ ಪೊಲೀಸರಿಗೆ ತಲೆನೋವು..

ಪೊಲೀಸರಿಗೆ ಅಸಲಿಗೆ ತಲೆನೋವಾಗಿರೋದು ಕೊಲೆ ಸುಲಿಗೆ ಡಕಾಯಿತಿ ಪ್ರಕರಣಗಳಲ್ಲ. ವಾಹನ ಕಳವು, ಮನೆಕಳವು ಹಾಗೂ ವಂಚನೆ ಪ್ರಕರಣಗಳೇ ಖಾಕಿ ಪಡೆಗೆ ಹೆಚ್ಚು ತಲೆಬಿಸಿಯಾಗಿವೆ. ಏಳು ತಿಂಗಳ ಅಂತರದಲ್ಲಿ ಸಾಮಾನ್ಯ ಕಳವು 521 ಕೇಸ್​ಗಳ ಪೈಕಿ 147 ಪ್ರಕರಣ ಭೇದಿಸಲು ಸಾಧ್ಯವಾಗಿದ್ದು, 374 ಪ್ರಕರಣ ಬಾಕಿ ಉಳಿದಿವೆ. ಅದೇ ರೀತಿ 777 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, 251 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ‌. ವಾಹನ ಕಳವು 2098 ಕೇಸ್ ಪೈಕಿ 1752 ಕೇಸ್​ಗಳಿಗೆ ಮುಕ್ತಿ ನೀಡಿದರೆ ಉಳಿದ 346 ಕೇಸ್ ಪೆಂಡಿಂಗ್ ಇವೆ. ಇನ್ನೂ 1146 ವಂಚನೆ ಪ್ರಕರಣಗಳಲ್ಲಿ 774 ಕೇಸ್​ಗಳನ್ನು ಪತ್ತೆ ಹಚ್ಚಲಾಗಿದೆ.

ಬಹುತೇಕ ಆರೋಪಿಗಳು ರಾಜ್ಯದಿಂದ ಪರಾರಿ..

ಬಹುತೇಕ ವಂಚನೆ‌‌ ಪ್ರಕರಣದಲ್ಲಿ ಆರೋಪಿಗಳು ರಾಜ್ಯ ಬಿಟ್ಟು ಪರಾರಿಯಾಗುತ್ತಿದ್ದಾರೆ. ಅಲ್ಲದೆ ಮೋಸ ಹೋದವರು ದೂರು ಸಲ್ಲಿಸಲು ತಡ ಮಾಡುತ್ತಿರುವುದರಿಂದ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ.

ವಾಹನ ಕಳ್ಳತನ‌ ಪ್ರಕರಣಗಳ ಪೈಕಿ ಕದ್ದ ವಾಹನಗಳನ್ನು ಒಂದು ಗಂಟೆಯೊಳಗೆ ನಗರದಿಂದ ಹೊರ ಜಿಲ್ಲೆಗಳಿಗೆ ಖದೀಮರು ಸಾಗಿಸುತ್ತಿದ್ದಾರೆ. ‌ಕಂಡಿಷನ್​ನಲ್ಲಿರುವ ವಾಹನಗಳನ್ನು ಮಾತ್ರ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ವಾಹನಗಳ ಚಾರ್ಸಿ ನಂಬರ್ ಬದಲಾವಣೆ ಮಾಡುತ್ತಿರುವುದರಿಂದ ವಾಹನ ಪತ್ತೆ ಮಾಡುವುದಕ್ಕೆ ತೊಡಕಾಗುತ್ತಿದೆ. ಕೆಲವು ಕಡೆ ಕದ್ದ ವಾಹನಗಳ ಬಿಡಿ ಭಾಗವನ್ನು ಪ್ರತ್ಯೇಕಗೊಳಿಸಿ ಮಾರಾಟ ಜಾಲ ಸಕ್ರಿಯವಾಗಿದೆ‌. ಇದೆಲ್ಲದರ‌ ನಡುವೆ ಕೊರೊನಾ ಭೀತಿಯಿಂದ ಲಾಕ್​ಡೌನ್​ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.