ETV Bharat / state

ಮುಗಿಯದ ಯುವ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಗೊಂದಲ; ಹೈಕಮಾಂಡ್ ಮೆಟ್ಟಿಲೇರಿದ ಸಮಸ್ಯೆ - ರಾಜ್ಯ ಯುವ ಕಾಂಗ್ರೆಸ್ ಚುನಾವಣೆ

ರಾಜ್ಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತವನ್ನು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಪಡೆದಿದ್ದರು. 64 ಸಾವಿರ ಮತ ಪಡೆದ ಇವರ ಸ್ಫರ್ಧೆಯನ್ನು ಪಕ್ಷದ ಹೈಕಮಾಂಡ್ ತಡೆ ಹಿಡಿದು 57 ಸಾವಿರ ಮತ ಗಳಿಸಿದ್ದ ಅಭ್ಯರ್ಥಿ ರಕ್ಷಾ ರಾಮಯ್ಯ ಅಧ್ಯಕ್ಷ ಎಂದು ಘೋಷಿಸಿತ್ತು.

YOUTH_CONGRESS
YOUTH_CONGRESS
author img

By

Published : Feb 14, 2021, 4:27 AM IST

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದ್ದು, ಇದೀಗ ಹೈಕಮಾಂಡ್ ಇದಕ್ಕೊಂದು ಪರಿಹಾರ ಹುಡುಕುವ ಅನಿವಾರ್ಯತೆ ಎದುರಾಗಿದ್ದು ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.

ಚುನಾವಣೆ ವೇಳೆ ಮತದಾನವಾದ ಒಟ್ಟು ಮತಗಳಲ್ಲಿ 48 ಸಾವಿರ ಮತಗಳು ಅಪಮೌಲ್ಯಗೊಂಡಿದ್ದವು. ಇದನ್ನೀಗ ಮರು ಎಣಿಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಇದೇ ತಿಂಗಳ 21 ಮತ್ತು 22ರಂದು ಈ ಪ್ರಕ್ರಿಯೆ ದಿಲ್ಲಿಯಲ್ಲಿ ನಡೆಲಿದೆ.

ರಾಜ್ಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತವನ್ನು ಮೊಹಮ್ಮದ್ ನಲಪಾಡ್ ಹ್ಯಾರಿಸ್ ಪಡೆದಿದ್ದರು. 64 ಸಾವಿರ ಮತ ಪಡೆದ ಇವರ ಸ್ಫರ್ಧೆಯನ್ನು ಪಕ್ಷದ ಹೈಕಮಾಂಡ್ ತಡೆ ಹಿಡಿದು 57 ಸಾವಿರ ಮತ ಗಳಿಸಿದ್ದ ಅಭ್ಯರ್ಥಿ ರಕ್ಷಾ ರಾಮಯ್ಯ ಅಧ್ಯಕ್ಷ ಎಂದು ಘೋಷಿಸಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ಕರ್ನಾಟಕದ ಸಿಂಹ: ಸಾಹಿತಿ ಕೋಣಂದೂರು ಲಿಂಗಪ್ಪ ಬಣ್ಣನೆ

15 ಸಾವಿರ ಮತ ಪಡೆದ ಎಚ್.ಎಸ್. ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಅಧ್ಯಕ್ಷ ಸ್ಥಾನ ತಮಗೆ ಸಿಗಬೇಕೆಂದು ಹೈಕಮಾಂಡ್ ಮೇಲೆ ನಲಪಾಡ್ ಪತ್ತಡ ತರುವ ಯತ್ನ ಮಾಡಿದ್ದಾರೆ. ಇನ್ನೊಂದೆಡೆ ನನ್ನ ಆಯ್ಕೆ ಆಗಿದೆ. ಈಗ ಬದಲಾವಣೆಗೆ ಮುಂದಾದರೆ ಪಕ್ಷಕ್ಕೆ ಮುಜುಗರ ಎಂದು ರಕ್ಷಾ ರಾಮಯ್ಯ ಪ್ರತಿಯಾಗಿ ದೂರು ಸಲ್ಲಿಸಿದ್ದಾರೆ.

ಒಟ್ಟಾರೆ ಮುಂದಿನ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಹೈಕಮಾಂಡ್ಗೆ ನೋವಿನ ಸಂಗತಿಯಾಗಿದೆ. ಒಂದೆಡೆ ಡಿಕೆಶಿ ಸೇರಿದಂತೆ ಹಲವು ರಾಜ್ಯ ನಾಯಕರ ಒಲವು ನಲಪಾಡ್ ಮೇಲಿದೆ. ಸಿದ್ದರಾಮಯ್ಯ ಸೇರಿದಂತೆ ಮತ್ತೆ ಕೆಲವರ ಒಲವು ರಕ್ಷಾ ಮೇಲಿದೆ. ಒಟ್ಟಾರೆ ಹೈಕಮಾಂಡ್​​ಗೆ ಇದರ ನಡುವೆ ಸಿಲುಕಿ ತೊಳಲಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅಂತಿಮವಾಗಿ 48 ಸಾವಿರ ಅಪಮೌಲ್ಯಗೊಂಡ ಮತಗಳ ಎಣಿಕೆಗೆ ಮುಂದಾಗಿದೆ. ಹೇಗಾರದೂ ನಲಪಾಡ್ ಗೆ ಮತ್ತೆಮಣೆ ಹಾಕುವ ಕಾರ್ಯ ಆಗಬಹುದು ಎಂದು ಹಲವರು ಹೇಳುತ್ತಿದ್ದಾರೆ.

ಸದ್ಯ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಮೊಹಮ್ಮದ್ ನಲಪಾಡ್ ಪಕ್ಷದ ಆಂತರಿಕ ಚುನಾವಣಾ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ. ರಕ್ಷಾ ರಾಮಯ್ಯ ಮತ್ತು ನಲಪಾಡ್ ಇಬ್ಬರೂ ತಮಗೆ ಹೆಚ್ಚು ಮತಗಳು ಬರಬೇಕೆಂದು ಪ್ರತಿಪಾದಿಸುತ್ತಿದ್ದಾರೆ.

ಅನರ್ಹಗೊಂಡಿರುವ 27 ಸಾವಿರ ಮತಗಳಲ್ಲಿ ನಮಗೆ ಬರಬೇಕಾದ ಮತಗಳ ಸಂಖ್ಯೆ ಹೆಚ್ಚಿದೆ ಎಂಬುದು ಇಬ್ಬರ ವಾದ. ಹೀಗಾಗಿ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಸಮಿತಿ ಹಾಗೂ ಹಿರಿಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7ಮಂದಿಯನ್ನು ಫೆ.20 ಹಾಗೂ 21ರಂದು ದೆಹಲಿಗೆ ಆಹ್ವಾನಿಸಿದೆ. ಅಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಮತ್ತೊಂದು ಟ್ವಿಸ್ಟ್ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಯುವ ಕಾಂಗ್ರೆಸ್ ನ ಬ್ಲಾಕ್ ಘಟಕದ ಚುನಾವಣೆಯಲ್ಲಿ ಜನವರಿ 31 ರಂದು ಒಂದು ಫಲಿತಾಂಶ, ಫೆಬ್ರವರಿ 4 ರಂದು ಮತ್ತೊಂದು ರೀತಿಯ ಫಲಿತಾಂಶ ಪ್ರಕಟವಾಗಿದೆ ಎಂದು ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಹೈಕಮಾಂಡ್ ಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಜನವರಿ 31 ರಂದು ಒಟ್ಟು 470 ಬ್ಲಾಕ್ ಘಟಕಗಳ ಫಲಿತಾಂಶದಲ್ಲಿ 270 ಕ್ಷೇತ್ರಗಳಲ್ಲಿ ನನ್ನ ನಾಯಕತ್ವದಲ್ಲಿ ಗೆಲುವು ದಾಖಲಾಗಿತ್ತು. ಆದರೆ ಫೆಬ್ರವರಿ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಈ ಪೈಕಿ 150 ಬೆಂಬಲಿಗರು ಮಾತ್ರ ಆಯ್ಕೆಯಾಗಿ, ಉಳಿದ 120 ವಾರ್ಡ್ ಗಳ ಅಧ್ಯಕ್ಷರು ಪರಾಭಗೊಂಡಿದ್ದಾರೆ. ಇವರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಯಾವ ಕಾರಣಕ್ಕೆ ಡಿಲೀಟ್ ಮಾಡಲಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ನನ್ನ ಜತೆಗಾರರು ದೂರುತ್ತಿದ್ದಾರೆ.

ಈಗಾಗಲೇ ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿದ್ದು, ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ, ಅವರ ಬೆಂಬಲಿಗ ಅಧ್ಯಕ್ಷರ ಆಯ್ಕೆ ಸಾಕಷ್ಟು ಗೊಂದಲಕ್ಕೆ ಒಳಗಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಇದಕ್ಕೆ ಪಕ್ಷ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎನ್ನುವುದು ತಿಳಿಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.