ETV Bharat / state

19ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಎಸ್‍ಟಿ ಸಮಾವೇಶ: ಬಂಗಾರು ಹನುಮಂತು

author img

By ETV Bharat Karnataka Team

Published : Jan 18, 2024, 1:08 AM IST

Updated : Jan 18, 2024, 6:35 AM IST

19 ರಂದು ನಡೆಯುವ ರಾಜ್ಯ ಮಟ್ಟದ ಎಸ್‍ಟಿ ಸಮಾವೇಶವದಲ್ಲಿ ವಾಲ್ಮೀಕಿ ಸಮಾಜ ಸೇರಿ ಸುಮಾರು 52 ಎಸ್‍ಟಿ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಬಂಗಾರು ಹನುಮಂತು ತಿಳಿಸಿದರು.

ಬಂಗಾರು ಹನುಮಂತು
ಬಂಗಾರು ಹನುಮಂತು

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ 19ರಂದು ರಾಜ್ಯ ಮಟ್ಟದ ಎಸ್‍ಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್​ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ವಾಲ್ಮೀಕಿ ಸಮಾಜ ಸೇರಿ ಸುಮಾರು 52 ಎಸ್‍ಟಿ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್​​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿಟಿ ರವಿ, ರಮೇಶ್ ಜಾರಕಿಹೊಳಿ ಮತ್ತಿತರರು ಭಾಗವಹಿಸುತ್ತಾರೆ. ಸ್ಥಳೀಯ ಮುಖಂಡರೂ ಪಾಲ್ಗೊಳ್ಳಲಿದ್ದಾರೆ ಎಂದರು.

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಾಲ್ಮೀಕಿ ಸಮಾಜದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದಾಗಿಯೂ ಅವರು ಹೇಳಿದರು. ಇದೇ ವೇಳೆ ಪಕ್ಷವು ತಮಗೆ ಈ ಜವಾಬ್ದಾರಿ ನೀಡಿದ್ದಕ್ಕೂ ಧನ್ಯವಾದ ಳಿಸಿದರು.

ಕಾಂಗ್ರೆಸ್ಸಿಗರ ಹೇಳಿಕೆಯಿಂದ ರಾಮಭಕ್ತರಿಗೆ ನೋವು: ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ಮುಖಂಡರು ತಮ್ಮ ಹೇಳಿಕೆಗಳಿಂದ ಕೋಟ್ಯಂತರ ರಾಮಭಕ್ತರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ತಿಳಿಸಿದರು.

ನಗರದ ಮಲ್ಲೇಶ್ವರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾರತದ ಭಕ್ತಿ ಪರಂಪರೆಯಡಿ ಎಲ್ಲರಲ್ಲೂ ದೈವತ್ವವನ್ನು ನಾವು ಕಾಣುತ್ತೇವೆ. ನಿಸರ್ಗದಲ್ಲಿ ದೈವತ್ವವನ್ನು ನೋಡುವುದು ನಮ್ಮ ಪರಂಪರೆ ಎಂದು ವಿಶ್ಲೇಷಿಸಿದರು. ಗೊಂಬೆಗಳು, ಟೆಂಟ್ ಎನ್ನುವುದು ಇವರ ಮನಸ್ಥಿತಿ ಮತ್ತು ಸಂಸ್ಕಾರಕ್ಕೆ ಹಿಡಿದಿರುವ ಕನ್ನಡಿಯಾಗಿದೆ. ಬಹಳಷ್ಟು ಜನ ಭಕ್ತರು ಆ ಮಾತಿನಿಂದ ನೊಂದಿದ್ದಾರೆ. ಇಂಥವರೂ ನಮ್ಮನ್ನು ಆಳುತ್ತಿದ್ದಾರಲ್ಲ ಎಂಬ ನೋವನ್ನು ಅವರು ಅನುಭವಿಸಿದ್ದಾರೆ ಎಂದು ತಿಳಿಸಿದರು.

ನಾಲಿಗೆ ಒಬ್ಬ ವ್ಯಕ್ತಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಒಂದು ಪಕ್ಷದ ಮುಖಂಡ, ಆತನ ಮಾತು, ನಡವಳಿಕೆಗಳು ಪಕ್ಷದ ಸಂಸ್ಕಾರವನ್ನು ತೋರಿಸುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆಯೊಂದಿಗೆ ರಾಮಲಲ್ಲಾ ಪಟ್ಟಾಭಿಷೇಕದ ವಿಧಿವಿಧಾನ ಆರಂಭ

ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಅವರ ಜೀವನ ಸಮರ್ಪಣೆ (ರಾಮಲಲ್ಲಾ ಕರ್ಮಕುಟಿ ಪೂಜೆ) ನಡೆಯಲಿದ್ದು ಇದಕ್ಕೂ ಮುನ್ನ ಆರು ದಿನಗಳ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆ ಮಂಗಳವಾರದಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.

Last Updated : Jan 18, 2024, 6:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.