ETV Bharat / state

ಕೇಂದ್ರ ಸರ್ಕಾರದಿಂದ ಬರಬೇಕಿರುವ ಜಿಎಸ್​ಟಿ ಹಣದಲ್ಲಿ 1,500 ಕೋಟಿ ಕಡಿತ : ಬೊಮ್ಮಾಯಿ

ಈ ಮಧ್ಯೆ ಕಳೆದ ತ್ರೈಮಾಸಿಕದಲ್ಲಿ ಜಿಎಸ್​ಟಿ ಹಣದ ಸಂಗ್ರಹ ಪ್ರಮಾಣ ಹೆಚ್ಚಳವಾಗಿದ್ದು, ಇದು ಕೇಂದ್ರ ಸರ್ಕಾರದ ಕೈಬಲಪಡಿಸಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಯಶವಂತರಾಯಗೌಡ, ಕೇಂದ್ರದಿಂದ ನಮಗೆ ಬರಬೇಕಿರುವ ಜಿಎಸ್​ಟಿ ಪಾಲು ಸಮರ್ಪಕವಾಗಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚು ಹಣ ಪಡೆಯಬೇಕು..

Basavaraj Bommai
ಬಸವರಾಜ ಬೊಮ್ಮಾಯಿ
author img

By

Published : Feb 2, 2021, 2:34 PM IST

ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್​ಟಿ ಹಣದಲ್ಲಿ 1500 ಕೋಟಿ ರೂ. ಗಳಷ್ಟು ಕಡಿತವಾಗಬಹುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷ ಕೇಂದ್ರ ಸರ್ಕಾರದಿಂದ ನಮಗೆ 12,047 ಕೋಟಿ ರೂಪಾಯಿಗಳಷ್ಟು ಪಾಲು ನಿಗದಿಯಾಗಿದೆ. ಈ ಹಣದ ಪೈಕಿ ಮೊದಲ ಕಂತಿನಲ್ಲಿ ಮೂರು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಬಂದಿದೆ ಎಂದರು.

ವಿಧಾನಸಭೆ ಪ್ರಶ್ನೋತ್ತರ ಅವಧಿ

ಉಳಿದಂತೆ ಬರಬೇಕಿರುವ ಹಣವನ್ನು ಸಾಲದ ರೂಪದಲ್ಲಿ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಅದರನುಸಾರ ಸುಮಾರು ಆರು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಂದಿದೆ. ಉಳಿದಂತೆ ಇನ್ನೂ 3,427 ಕೋಟಿ ರೂ. ಬರಬೇಕಿದ್ದು, ಅದು ಕೂಡ ಲಭ್ಯವಾಗುವ ನಿರೀಕ್ಷೆ ಇದೆ. ಇಷ್ಟಾದರೂ ನಮಗೆ ಲಭ್ಯವಾಗಬೇಕಿರುವ ಜಿಎಸ್​ಟಿ ಪಾಲಿನಲ್ಲಿ ಒಂದರಿಂದ ಒಂದೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕಡಿಮೆಯಾಗಬಹುದು.

ಆದರೆ, ಈ ಹಿಂದೆ ಜಿಎಸ್​ಟಿ ಬಾಬ್ತಿನಲ್ಲಿ ನಮಗೆ ಏನು ಪಾಲು ಬರಬೇಕಿತ್ತೋ? ಅವೆಲ್ಲ ಬಂದಿದೆ. 2018-19ರಲ್ಲಿ 18,340 ಕೋಟಿ ರೂ. ಗಳನ್ನು ನಮಗೆ ನಿಗದಿ ಪಡಿಸಲಾಗಿತ್ತು. ಆ ಹಣ ಪಾವತಿಯಾಗಿದೆ. ಇದೇ ರೀತಿ 2019-20ರಲ್ಲಿ 20,702 ಕೋಟಿ ರೂ. ಗಳಷ್ಟು ಹಣ ನಿಗದಿಪಡಿಸಲಾಗಿತ್ತು. ಆ ಹಣವೂ ನಮಗೆ ಬಂದಿದೆ ಎಂದು ಅವರು ವಿವರಿಸಿದರು.

ಕೋವಿಡ್ ಸಂಕಷ್ಟದ ಹಿನ್ನೆಲೆ ಜಿಎಸ್​ಟಿ ಪಾಲು ಬರುವ ಬಗ್ಗೆ ಶಂಕೆ ಇತ್ತಾದರೂ ಈಗ ಆ ಶಂಕೆ ದೂರವಾಗಿದೆ. ಕೇಂದ್ರ ಸರ್ಕಾರ ನಮಗೆ ನೀಡಬೇಕಿರುವ ಹಣವನ್ನು ಸಾಲದ ರೂಪದಲ್ಲಿ ಪಡೆಯಲು ಅನುಮತಿ ನೀಡಿದ್ದರಿಂದ ತೊಂದರೆಯಾಗಿಲ್ಲ. ಹೀಗೆ ಜಿಎಸ್​ಟಿ ಪಾಲಿನ ಹಣವನ್ನು ಸಾಲದ ರೂಪದಲ್ಲಿ ಪಡೆದರೂ ಅದಕ್ಕೆ ನಾವು ಅಸಲು,ಬಡ್ಡಿಯನ್ನು ಕಟ್ಟಬೇಕಿಲ್ಲ. ಅದನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಈ ಮಧ್ಯೆ ಕಳೆದ ತ್ರೈಮಾಸಿಕದಲ್ಲಿ ಜಿಎಸ್​ಟಿ ಹಣದ ಸಂಗ್ರಹ ಪ್ರಮಾಣ ಹೆಚ್ಚಳವಾಗಿದ್ದು, ಇದು ಕೇಂದ್ರ ಸರ್ಕಾರದ ಕೈಬಲಪಡಿಸಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಯಶವಂತರಾಯಗೌಡ, ಕೇಂದ್ರದಿಂದ ನಮಗೆ ಬರಬೇಕಿರುವ ಜಿಎಸ್​ಟಿ ಪಾಲು ಸಮರ್ಪಕವಾಗಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಹೆಚ್ಚು ಹಣ ಪಡೆಯಬೇಕು ಎಂದು ಒತ್ತಾಯಿಸಿದರು.

ಜಿಎಸ್​ಟಿ ತೆರಿಗೆಯನ್ನು ಪಡೆಯುವ ಕೇಂದ್ರ ಸರ್ಕಾರ ನಮಗೆ ನಿಗದಿ ಮಾಡಿರುವ ಹಣದ ಪ್ರಮಾಣ ಕಡಿಮೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇದು ರಾಜ್ಯಕ್ಕೆ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸದ್ಯದಲ್ಲೇ ನಾವು ಕೂಡ ರಾಜ್ಯದ ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಅದಕ್ಕೆ ಹಣದ ಕೊರತೆ ಕಡಿಮೆಯಾಗಬಾರದು. ಕೇಂದ್ರದಿಂದ ನಮಗೆ ಬರಬೇಕಿರುವ ಜಿಎಸ್​ಟಿ ಹಣದ ಪಾಲಿನಲ್ಲಿ ಕೊರತೆಯಾಗಬಾರದು. ಹೀಗಾಗಿ, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ನಮಗೆ ಬರಬೇಕಿರುವ ಪಾಲನ್ನು ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.