ETV Bharat / state

ಮುಗಿಯದ ‘ಶಿಕ್ಷಣದ ಹಕ್ಕು’ ಗೊಂದಲ: ಕೋಟ್ಯಂತರ ಆರ್​ಟಿಇ ಶುಲ್ಕ ಮರುಪಾವತಿ ಬಾಕಿ..! - ಆರ್​​​​​​ಟಿಇ ಶುಲ್ಕ

ಆರ್​​ಟಿಇ ಕಾಯ್ದೆಯಡಿಯಲ್ಲಿ ಶಿಕ್ಷಣ ನೀಡಿದ ಶಾಲೆಗಳಿಗೆ, ಕಾಲ ಕಾಲಕ್ಕೆ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕು. ಆದ್ರೆ ಸರ್ಕಾರ ಕೋಟ್ಯಂತರ ರೂ. ಅನುದಾನವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡದೇ ಬಾಕಿ ಉಳಿಸಿಕೊಂಡಿದೆ.

RTE reimbursement
ಕೋಟ್ಯಂತರ ಆರ್​ಟಿಇ ಶುಲ್ಕ ಮರುಪಾವತಿ ಬಾಕಿ
author img

By

Published : Nov 10, 2020, 5:16 PM IST

ಬೆಂಗಳೂರು: ‘ಶಿಕ್ಷಣದ ಹಕ್ಕು’ ಎಂದು ಕನ್ನಡದಲ್ಲಿ ಹೇಳುವುದಕ್ಕಿಂತ ಇಂಗ್ಲಿಷ್‌ನಲ್ಲಿ ಆರ್.ಟಿ.ಇ. ಎಂದು ಹೇಳಿದರೆ ಜನರಿಗೆ ಬೇಗ ಅರ್ಥವಾಗುತ್ತದೆ. ಯಾಕಂದ್ರೆ ನಾನಾ ವಿಚಾರಗಳಿಂದ ಆರ್.ಟಿ.ಇ. ಸದ್ದು ಮಾಡುತ್ತಿರುತ್ತದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಲು, ಸರ್ಕಾರವು ಆರ್​​​​ಟಿಇ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿಯಲ್ಲಿ ಶಿಕ್ಷಣ ನೀಡಿದ ಶಾಲೆಗಳಿಗೆ, ಕಾಲ ಕಾಲಕ್ಕೆ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕು. ಆದ್ರೆ ಸರ್ಕಾರ ಕೋಟ್ಯಂತರ ರೂ. ಅನುದಾನವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡದೇ ಬಾಕಿ ಉಳಿಸಿಕೊಂಡಿದೆ.

ಪೋಷಕರು ದಾಖಲಾತಿ ಶುಲ್ಕ ಕಟ್ಟುತ್ತಿಲ್ಲ, ಸರ್ಕಾರವೂ ಬಾಕಿಯಿರುವ ಆರ್​​​ಟಿಇ ಶುಲ್ಕ ಮರುಪಾವತಿ ಮಾಡುತ್ತಿಲ್ಲ. ಶಿಕ್ಷಕರ ಬವಣೆಯು ನೀಗುತ್ತಿಲ್ಲ. ‌ನಮ್ಮ ಕಷ್ಟ ಯಾರಿಗೆ ಹೇಳೋಣ ಅಂತಿವೆ ಖಾಸಗಿ ಅನುದಾನ ರಹಿತ ಶಾಲೆಗಳು. ಕಳೆದ ಎರಡು ವರ್ಷದಿಂದ ಸರಿಯಾಗಿ ಶುಲ್ಕ ಪಾವತಿ ಮಾಡುತ್ತಿಲ್ಲ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಬವಣೆ ನೀಗಿಸುವ ಅವಶ್ಯಕತೆ ಇದೆ.

ಕೋಟ್ಯಂತರ ಆರ್​ಟಿಇ ಶುಲ್ಕ ಮರುಪಾವತಿ ಬಾಕಿ

ಆರ್​​ಟಿಇ ಬಾಕಿ ಶುಲ್ಕವನ್ನು ಪಾವತಿಸಲು ಬಾಕಿಯಿರುವ 275 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಹಾಗೂ ಕಳೆದ ಸಾಲಿನ ಬಾಕಿ ಪಾವತಿಗೆ ಸಂಬಂಧಿಸಿದ 520 ಕೋಟಿ ರೂ.ಗಳನ್ನು ಈ ಸಾಲಿನ‌ ಪೂರಕ ಅಂದಾಜಿನಲ್ಲಿ ಮಂಜೂರು ಮಾಡಬೇಕೆಂದು ಕೋರಿದ್ದರು. ಈ ನಿಟ್ಟಿನಲ್ಲಿ ಈಗಾಗಲೇ ಒಂದೇ ಕಂತಿನಲ್ಲಿ 275 ಕೋಟಿಗಳ ಅನುದಾನ‌ ಬಿಡುಗಡೆ ಮಾಡಿಲಾಗಿದೆ. ಇನ್ನು 137 ಕೋಟಿಯಷ್ಟು ಆರ್​​​​​​ಟಿಇ ಶುಲ್ಕ ಬಾಕಿಯಿದ್ದು, ಅದು ಬಿಡುಗಡೆಯಾಗಬೇಕಾದರೆ ಈಗ ಬಿಡುಗಡೆಯಾಗಿರುವ ಹಣ ಖರ್ಚು ಆಗಬೇಕು. ಈ ವರ್ಷಕ್ಕೆ ಯಾವುದೇ ಮೊತ್ತದ ಪ್ರಕ್ರಿಯೆ ಶುರುವಾಗಿಲ್ಲ.

ರಾಯಚೂರು ಜಿಲ್ಲೆಯಲ್ಲಿ 2019 - 20ನೇ ಸಾಲಿನಲ್ಲಿ 410 ಸೀಟುಗಳು ಭರ್ತಿಗೆ ಅವಕಾಶವಿತ್ತು. ಅದರಂತೆ ಆರ್​​​​ಟಿಇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು, ಲಾಟರಿ ಮೂಲಕ ಆಯ್ಕೆ ಮಾಡಿ ಪ್ರವೇಶಾತಿಯನ್ನು ಕಲ್ಪಿಸಲಾಗಿದೆ. ಒಟ್ಟು ಸೀಟುಗಳಲ್ಲಿ 116 ವಿದ್ಯಾರ್ಥಿಗಳು ಮಾತ್ರ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಆರ್​​​​ಟಿಇ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗಾಗಿ 19 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ ಮೊದಲಿಗೆ 9 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಇತ್ತೀಚೆಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇನ್ನು 5 ಕೋಟಿ ರೂಪಾಯಿ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಬೇಕಾಗಿರುವುದು ಬಾಕಿ ಉಳಿದಿದೆ.

ಕೊರೊನಾ ನಂತರದ ಸಂದರ್ಭಗಳು, ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಸಂಪೂರ್ಣ ಏರುಪೇರಾಗಿಸಿದೆ. ಈ ಸಾಲಿನಲ್ಲಿ ಸರ್ಕಾರದ ವಿವಿಧ‌ ಕಾರ್ಯಕ್ರಮಗಳನ್ನು ಅಡೆತಡೆಯಿಲ್ಲದೇ‌ ಅನುಷ್ಠಾನಗೊಳಿಸುವುದು, ಸರ್ಕಾರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಈ ಸಾಲಿನ ಶುಲ್ಕ ಹೆಚ್ಚಳಕ್ಕೆ ಮುಂದಾಗದಿರುವುದು, ಶಾಲೆಯ ಸಿಬ್ಬಂದಿಗೆ ಸಕಾಲದಲ್ಲಿ ವೇತನ‌ ಪಾವತಿಸುವುದೂ ಸೇರಿದಂತೆ ಸರ್ಕಾರದ ಸದಾಶಯವನ್ನು ಅರ್ಥೈಸಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.