ಬೆಂಗಳೂರು: ರಾಜ್ಯ ಸರ್ಕಾರ ರಚನೆಯಾದ ಬಳಿಕ ದೊಡ್ಡಮಟ್ಟದಲ್ಲಿ 211 ಜನ ಇನ್‌ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ನಿನ್ನೆ ಆದೇಶ ಹೊರಡಿಸಿದ್ದು, 24 ಗಂಟೆಯಾಗುವಷ್ಟರಲ್ಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವರ್ಗವಾಗಿದ್ದ 16 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ ಆದೇಶ ಸಿಕ್ಕಿದೆ.
ಆಡಳಿತಾತ್ಮಕ ಕಾರಣ ನೀಡಿ ಮಂಗಳವಾರ ಸಂಜೆ 211 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ಹೊರಡಿಸಿತ್ತು. ಬುಧವಾರ ಬೆಳಗ್ಗೆ 16 ಮಂದಿ ಇನ್‌ಸ್ಪೆಕ್ಟರ್ ಗಳ ಆದೇಶಕ್ಕೆ ತಡೆ ನೀಡಿದೆ. ಬೆಂಗಳೂರು ನಗರ ವ್ಯಾಪ್ತಿ 16 ಮಂದಿ ಇನ್‌ಸ್ಪೆಕ್ಟರ್ ಗಳ ವರ್ಗಾವಣೆ ಬಗ್ಗೆ ವೈರ್ ಲೆಸ್ ಮೂಲಕ ಆಯಾ ಡಿಸಿಪಿ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ.
ವರ್ಗಾವಣೆ ತಾತ್ಕಾಲಿಕ ರದ್ದಾಗಿದ್ದು ನಗರ ವ್ಯಾಪ್ತಿಯಲ್ಲಿ ವರ್ಗಾವಣೆಯಾಗಿರುವ ಇನ್ಸ್ಪೆಕ್ಟರ್ಗಳು ನಿಯುಕ್ತಿಯಾಗಿದ್ದ ಠಾಣೆಗಳಿಗೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬಾರದು. ಯಾರು ಸಹ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಿಂದ ಬಿಡುಗಡೆಯಾಗಕೂಡದು ಎಂದು ಇನ್ಸ್ಪೆಕ್ಟರ್ಗಳಿಗೆ ಸೂಚಿಸಲಾಗಿದೆ.
ಇದನ್ನೂಓದಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ