ಬೆಂಗಳೂರು: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಈ ಪ್ರಶಸ್ತಿಗಾಗಿ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಒಬ್ಬ ವಿಶೇಷ ಶಿಕ್ಷಕರೂ ಒಳಗೊಂಡಂತೆ) ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರುಗಳಿಗೆ ತಲಾ ರೂ. 10,000 ರಂತೆ ಒಟ್ಟು 3,10,000 ಗಳ ನಗದು ಪುರಸ್ಕಾರ ನೀಡಲು ಮತ್ತು ಅವರ ಶಾಲಾಭಿವೃದ್ಧಿಗೆ ಪ್ರತಿ ಶಾಲೆಗೆ ತಲಾ ರೂ. 50,000 ರಂತೆ ರೂ 15,50,000 ಗಳನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ವೆಚ್ಚ ಭರಿಸಿ ಪಾವತಿಸಲು ಸರ್ಕಾರ ಅನುಮತಿ ನೀಡಿದೆ.
ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು:
- ಉಮೇಶ್ ಟಿ.ಪಿ- ಚಿತ್ರದುರ್ಗ
- ಹೇಮಾ ಪಿ.ಅಂಗಡಿ- ಬೆಳಗಾವಿ
- ಚಂದ್ರು ವಾಯ್- ರಾಯಚೂರು
- ಪರಮೇಶ್ವರಯ್ಯ-ಬಳ್ಳಾರಿ ಜಿಲ್ಲೆ
- ಮಾರುತಿ ಹನುಮಪ್ಪ ಭಜಂತ್ರಿ- ಧಾರವಾಡ
- ಪ್ರಕಾಶ್ ಕೆ.ಎಸ್- ಶಿವಮೊಗ್ಗ
- ಶಿವಶಂಕರಯ್ಯ - ತುಮಕೂರು
- ಪಂಚಯ್ಯ ರಾಚಯ್ಯ - ಗದಗ
- ಶಿವಲಿಂಗ - ಬೀದರ್ಸದಾಶಿವಯ್ಯ
- ಕೊಡಗು ಶ್ರೀಕಾಂತ ರಾಮ ಪಟಗಾರ- ಶಿವಮೊಗ್ಗ
- ಎಂ.ಎಸ್.ನಟರಾಜು- ತುಮಕೂರು
- ಸಪನಾ ಶ್ರೀಶೈಲ ಅನಿಗೋಳ- ಬಾಗಲಕೋಟೆ
- ಬಸವರಾಜ ಶರಣಪ್ಪ- ವಿಜಯಪುರ
- ಸಂಗೀತಾ.ಕೆ - ಮೈಸೂರು