ಬೆಂಗಳೂರು: ರಾಜ್ಯ ಸರ್ಕಾರ ಅರೋಗ್ಯ ಮಿತ್ರ ಆ್ಯಪ್ ಅನ್ನು ಮತ್ತೆ ಆರಂಭಿಸಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಳಗ್ಗೆಯಿಂದ ಅನೇಕ ಸಭೆಗಳನ್ನ ಮಾಡಿದ್ದೇವೆ. ಅದರಲ್ಲಿ ಚರ್ಚೆ ಮಾಡಲಾಗಿದೆ. ಕಳೆದ ವರ್ಷ ಈ ಆ್ಯಪ್ ಆರಂಭ ಮಾಡಲಾಗಿತ್ತು. ಆದ್ರೆ ಸೋಂಕಿನ ಪ್ರಮಾಣ ಕಡಿಮೆಯಾದಾಗ ಅದನ್ನ ವಾಪಸ್ ಪಡೆಯಲಾಗಿತ್ತು. ಈಗ ಪುನಃ ಆರಂಭ ಮಾಡಿದ್ದು, ಇದರ ಮೂಲಕ ಸೋಂಕಿತರಿಗೆ ಫೋನ್ ಹೋಗುತ್ತೆ ಎಂದು ವಿವರಿಸಿದರು.
ಪ್ರಾರಂಭದಲ್ಲಿ ಆರೋಗ್ಯ ಆಪ್ತಮಿತ್ರ ಆ್ಯಪ್ ಉಪಯೋಗ ಮಾಡಿದ್ವಿ. ಜನವರಿ ಹಾಗೂ ಫೆಬ್ರವರಿಯಲ್ಲಿ ಅದನ್ನು ಹಿಂದಕ್ಕೆ ತೆಗೆದುಕೊಂಡಿದ್ವಿ. ನಮ್ಮ ಕೆಲಸಗಾರರು ಕಡಿಮೆ ಇದ್ದರಿಂದ ವಾಪಸ್ ಪಡೆದಿದ್ವಿ. ಐಸಿಎಂಆರ್ ನಿಂದ ಪಾಸಿಟಿವ್ ಬಂದ ಮೇಲೆ 3-4 ಗಂಟೆ ಒಳಗೆ ಅವರಿಗೆಲ್ಲ ಈ ಆ್ಯಪ್ ಮೂಲಕ ಫೋನ್ ಹೋಗುತ್ತೆ. ವೈದ್ಯಕೀಯ ಮಾಹಿತಿ ನೀಡಲಾಗುತ್ತದೆ. ವೈದ್ಯಕೀಯ ಪದವೀಧರರು ಮಾಹಿತಿ ನೀಡುತ್ತಾರೆ. 7 ಬಕೆಟ್ ಮಾಡುತ್ತಾರೆ. ರೋಗ ಇರುವವರು ಒಂದು ಬಕೆಟ್. ಇದರಲ್ಲಿ ಅವರಿಗೆ ಇರುವ ಕಾಯಿಲೆ ಬೇರೇ ಏನಾದ್ರೂ ಇದೆಯಾ ಅನ್ನೋದು ಇರುತ್ತೆ. ಆಸ್ಪತ್ರೆಗೆ ಹೋಗಬೇಕು ಅಂದ್ರೆ ಅದು ಮತ್ತೊಂದು ಬಕೆಟ್ಗೆ ಹೋಗುತ್ತೆ. ಮತ್ತೊಂದು ಹೋಮ್ ಐಸೋಲೇಷನ್ಗೆ ಹೋಗುತ್ತೆ. ಮತ್ತೊಂದು ಕೋವಿಡ್ ಕೇರ್ ಸೆಂಟರ್ಗೆ ಹೋಗುತ್ತೆ. ಕೆಲವರು ಫೋನ್ ಸ್ವಿಚ್ಡ್ ಆಫ್ ಮಾಡಿಕೊಳ್ಳುತ್ತಾರೆ. ಅವರು ಟ್ರೇಸ್ಗೆ ಸಿಗಲಿಲ್ಲ ಅಂದ್ರೆ ಅಂತವರ ನಂಬರ್ ಪೊಲೀಸರಿಗೆ ಕೊಡುತ್ತೇವೆ. ಇದು ಶೇ.20-30ರಷ್ಟಿದೆ. ಪ್ರಾರಂಭದಲ್ಲಿ ಶೇ.40 ಇತ್ತು ಈಗ ಶೇ.60 ಆಗಿದೆ. ಎಲ್ಲವನ್ನು ಟ್ರೇಸ್ ಮಾಡುತ್ತೇವೆ ಎಂದರು.
ಶೇ.50 ರಷ್ಟು ಆಪ್ತಮಿತ್ರದಲ್ಲಿ ಟ್ರೇಸ್ ಮಾಡಲು ಆಗಲ್ಲ. ಬೆಂಗಳೂರು ಝೋನಲ್ಗೆ ಈ ನಂಬರ್ ಡಂಪ್ ಆಗುತ್ತೆ. ಅಲ್ಲಿ 200 ಜನ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಾರೆ. ಸ್ಟೆಪ್ ಒನ್ ಆರ್ಗನೈಸೇಷನ್ ಇದೆ, ಅದಕ್ಕೆ ಮನವಿ ಮಾಡಿದ್ದೇವೆ. ಜೊತೆಗೆ ಇನ್ಫೋಸಿಸ್ಗೆ, ಟಿಸಿಎಸ್, ಎಕ್ಸೆಂಚರ್ಗೆ ಕೂಡ ಮನವಿ ಮಾಡಿದ್ದೇನೆ. 6 ರಿಂದ 8 ಸಾವಿರ ಜನ ಸಮಾಲೋಚನೆ ಮಾಡಲು ಬೇಕು ಎಂದರು.
ವಾಸ್ತವ ಸ್ಥಿತಿ ನಾವು ಮಾತಾಡಬೇಕು. ಸಾಂಕ್ರಾಮಿಕ ರೋಗ ಸಂಧರ್ಭದಲ್ಲಿ ನಾವು ಎಚ್ಚರಿಕೆ ಇರಬೇಕು. ಎಟಿರೋ ಡ್ರಗ್ಸ್ನವರು, ಜುಬಿಲೆಂಟ್ 10 ಸಾವಿರ ಕೊಡಬೇಕಿತ್ತು. ಇವರು ಒಂದು ವೈಲ್ ಕೊಟ್ಟಿಲ್ಲ. ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವೆ. ಪಂಜಾಬ್ನಲ್ಲಿ 1 ಲಕ್ಷ 80 ಸಾವಿರ ಇದೆ. ವಿದೇಶದಲ್ಲಿ ಕೂಡ ರೆಮ್ಡಿಸಿವಿರ್ ಇದೆ. ಅದನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ. ಆಕ್ಸಿಜನ್ 800 ಟನ್ ಅವಶ್ಯಕತೆ ಇದೆ. ಇಂದು ಬಹುತೇಕ ಬಳಸಿಕೊಂಡಿದ್ದೇವೆ. 10 ಕೆಎಲ್ ಸಿಲಿಂಡರ್ನಲ್ಲಿ ತುಂಬಿಸಬೇಕು. ಕಂಪನಿಗಳು ಕಡಿಮೆ ತುಂಬಿಸಿ ಕಳುಹಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಎಲ್ಲಾ ಕಡೆ ಹಾಸಿಗೆ ಮೀಸಲಿಟ್ಟಿದ್ದೇವೆ. ಇವತ್ತು 30ರಿಂದ 50ಹಾಸಿಗೆ ಮೇಲ್ಪಟ್ಟು ಮೀಸಲು ಇಡದೇ ಇರುವವರ ಮೇಲೆ ಕ್ರಮಕೈಗೊಳ್ಳ ಬೇಕು ಎಂದು ಹೇಳಿದರು.
ತಾಯಿ ಮತ್ತು ಮಗುವಿನ ಆಸ್ಪತ್ರೆ ನಾವು ಇದನ್ನು ಬಳಸುತ್ತಿಲ್ಲ. ಆದ್ರೆ ಈ ಎರಡು ರೀತಿಯ ಆಸ್ಪತ್ರೆಗಳು ಕೋವಿಡ್ ಸೋಂಕು ಇರುವ ಗರ್ಭಿಣಿಯರನ್ನು ದಾಖಲು ಮಾಡಿಸಿಕೊಳ್ಳಬೇಕು. ಎಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಶೇ.50 ರಿಜೆಕ್ಟ್ ಮಾಡುವಂತಿಲ್ಲ. ಮಕ್ಕಳನ್ನು ಕೂಡ ಅಡ್ಮಿಟ್ ಮಾಡಿಕೊಳ್ಳಬೇಕು. ಹೋಮ್ ಐಸೋಲೇಷನ್ ಬಹಳ ಮುಖ್ಯ. ಬೆಂಗಳೂರಿನಲ್ಲಿ ಪ್ರತಿ ಝೋನ್ಗೆ ಐಎಎಸ್, ಕೆಎಎಸ್ಗೆ ಒಬ್ಬೊಬ್ಬ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆ ರಿಸರ್ವ್ ಮಾಡುವುದಕ್ಕೆ ಆ ಝೋನ್ನಲ್ಲಿ ನೋಡಲ್ ಅಧಿಕಾರಿ ಕೆಲಸ ಮಾಡುತ್ತಾರೆ. ನಾಳೆ ಒಂದು ಪೋರ್ಟಲ್ ಲಾಂಚ್ ಮಾಡುತ್ತೇವೆ.
ಹಲವಾರು ಜನ ನನಗೆ ಅಳಿಲು ಸೇವೆ ಮಾಡುತ್ತೇವೆ ಎಂದು ಕರೆ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಕರೆ ಕೊಡುತ್ತೇವೆ. ನಮ್ಮ ಪೋರ್ಟಲ್, ವೆಬ್ಸೈಟ್ ಆ್ಯಡ್ ಕೊಡುತ್ತೇವೆ. ನೀವು ಫಿಸಿಕಲ್ ಕೆಲಸ ಮಾಡಬೇಕಿಲ್ಲ, ನೀವು ಮನೆಯಲ್ಲಿ ಕೂತು ಮಾಡಬಹುದು. ಮೆಡಿಕಲ್ ಅಟ್ವೈಸ್ ಕೊಡಬಹುದು. ಪದವೀಧರರು, ನಿವೃತ್ತ ಅಧಿಕಾರಿಗಳು, ವಕೀಲರು ಸೇವೆ ಮಾಡಲು ಮುಂದೆ ಬಂದ್ರೆ ಅವರು ಸೇವೆ ಮಾಡಬಹುದು. ಕೋವಿಡ್ ಕೇರ್ ಸೆಂಟರ್ನಲ್ಲಿ ಸೇವೆ ಮಾಡುತ್ತೇವೆ ಎನ್ನುವವರು ಬರಬಹುದು. ಜಿಲ್ಲೆಗಳಲ್ಲಿ ಕೂಡ ಕೆಲಸ ಮಾಡಬಹುದು. ನಮ್ಮ ಪೋರ್ಟಲ್ನಲ್ಲಿ ದಾಖಲು ಮಾಡಬಹುದು. ಅವಶ್ಯಕತೆ ಇದ್ರೆ ನಿಮಗೇನಾದ್ರು ಭತ್ಯ ಅಥವಾ ವಿಶೇಷ ಸರ್ಟಿಫಿಕೇಟ್ ಕೊಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ನಿಮ್ಮ ಸೇವೆ ಮುಖ್ಯ, ನಿಮ್ಮ ನೆನಪಿಗೆ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದವರಿಗೆ ಮುಂದೆ ನೀವು ಕೆಲಸಕ್ಕೆ ಸೇರುವಾಗ ಆಗ ವಿಶೇಷ ಅಂಕ ನೀಡುವ ಕೆಲಸ ಮಾಡುತ್ತೇವೆ. ಇದು ಸರ್ಕಾರದ ಆಲೋಚನೆಯಲ್ಲಿದೆ, ಇನ್ನೂ ತೀರ್ಮಾನ ಆಗಿಲ್ಲ. ಆದ್ದರಿಂದ ಯಾರೆಲ್ಲ ಆಸಕ್ತಿ ಇರುವವರು ಭಾಗಿಯಾಗಬಹುದು. ಅತಿ ಹೆಚ್ಚು ಜನರು ಇದರಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ನಾಳೆ ಬೀದರ್ಗೆ ಪ್ರಯಾಣ ಮಾಡುತ್ತೇನೆ. ನಾಡಿದ್ದು ಕಲಬುರಗಿಯಲ್ಲಿ ಇರುತ್ತೇನೆ. ಎರಡು ದಿನ ಬೆಂಗಳೂರಿನಲ್ಲಿ ಇರಲ್ಲ. ಆಕ್ಸಿಜನ್ ಬೇಕು ಅಂದ್ರೆ ಮುಂದೆ ಆನ್ಲೈನ್ನಲ್ಲಿ ಸಿಗುತ್ತೆ. ಜೊತೆಗೆ ರೆಮ್ಡಿಸಿವಿರ್ ಕೂಡ ಆನ್ಲೈನ್ನಲ್ಲಿ ಸಲ್ಲಿಸಬಹುದು. ಇವತ್ತು ರಾತ್ರಿಯಿಂದ ಸಿಗುತ್ತೆ. ಇಷ್ಟು ಮೀರಿ ತಪ್ಪು ಕೆಲಸ ಮಾಡಿದ್ರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾಳಸಂತೆಯಲ್ಲಿ ಲಾಭ ಪಡೆಯುವವರಿಗೆ ಶಿಕ್ಷೆ ಆಗುತ್ತೆ ಎಂದು ಎಚ್ಚರಿಸಿದರು.