ETV Bharat / state

ಕಿಡಿಗೇಡಿಗಳಿಂದ "ಸೋಂಕಿತ ಸರ್ಕಾರ" ಹೆಸರಲ್ಲಿ ರಾಜ್ಯ ಸರ್ಕಾರದ ಪೋಸ್ಟರ್ ಪ್ರದರ್ಶನ

ಹಲವೆಡೆ ಈ ಪೋಸ್ಟರ್​ಗಳನ್ನು ಗೋಡೆಗಳಿಗೆ ಅಂಟಿಸಲಾಗಿದೆ. ಅಲ್ಲದೇ ಸಚಿವರ ಹೆಸರುಗಳನ್ನು ವ್ಯಂಗ್ಯವಾಗಿ ಬಳಸಲಾಗಿದೆ. ಕೊರೊನಾ ವಾರಿಯರ್ಸ್ ಹೆಸರಲ್ಲಿ ಲೂಟಿ ಮಾಡಿದ ಭ್ರಷ್ಟ ಸರ್ಕಾರ. 2 ಸಾವಿರ ಕೋಟಿ ರೂ. ಲೂಟಿ ಹೊಡೆದು ರಾಜ್ಯವನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರದ ಕಥೆ ಎಂದು ಬರೆಯಲಾಗಿದೆ.

ವ್ಯಂಗ್ಯ ಪೋಸ್ಟರ್
author img

By

Published : Sep 23, 2020, 12:14 AM IST

ಬೆಂಗಳೂರು: ಕಿಡಿಗೇಡಿಗಳು ರಾಜ್ಯ ಸರ್ಕಾರದ ವಿರುದ್ಧ "ಸೋಂಕಿತ ಸರ್ಕಾರ" ಎಂಬ ಶೀರ್ಷಿಕೆಯ ಪೋಸ್ಟರ್ ಪ್ರಿಂಟ್ ತೆಗೆದು, ನಗರದ ಹಲವೆಡೆ ಗೋಡೆಗಳಿಗೆ ಅಂಟಿಸಿ ಪ್ರದರ್ಶನ ಮಾಡಿದ್ದಾರೆ.

ನಗರದ ಟಿವಿ ಟವರ್, ಮೇಖ್ರಿ ಸರ್ಕಲ್, ಆರ್ ಟಿ ನಗರ, ರಾಜಾಜಿನಗರ ಸೇರಿದಂತೆ ಹಲವೆಡೆ ಈ ಪೋಸ್ಟರ್​ಗಳನ್ನು ಗೋಡೆಗಳಿಗೆ ಅಂಟಿಸಲಾಗಿದೆ. ಅಲ್ಲದೇ ಸಚಿವರ ಹೆಸರುಗಳನ್ನು ವ್ಯಂಗ್ಯವಾಗಿ ಬಳಸಲಾಗಿದೆ. ಕೊರೊನಾ ವಾರಿಯರ್ಸ್ ಹೆಸರಲ್ಲಿ ಲೂಟಿ ಮಾಡಿದ ಭ್ರಷ್ಟ ಸರ್ಕಾರ. 2 ಸಾವಿರ ಕೋಟಿ ರೂ. ಲೂಟಿ ಹೊಡೆದು ರಾಜ್ಯವನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರದ ಕಥೆ ಎಂದು ಬರೆಯಲಾಗಿದೆ.

ಚಿತ್ರಕಥೆ- ಸಾಮ್ರಾಟ ಅಸೋಕ , ಅಸ್ವಸ್ಥ ನಾರಾಯಣ, ಅಂದ್ರೆಗಿನ ರಾಮುಲು , ಸ್ವಿಮ್ಮಿಂಗ್ ಸುಧಾಕರ, ಡೈಲಾಗ್ - ಚಿಕ್ನಳ್ಳಿ ಜೆಸಿಎಂ, ಈಸೂರಪ್ಪ, ಸಂಕಲನ- ಆಕ್ಸಿಡೆಂಟ್ ರವಿ , ಬಿಲ್ಡಪ್ ಬೊಮ್ಮಾಯಿ, ನಿರ್ಮಾಪಕರು- ಸಿಎಂ ಸಂತೋಷ್ ಎಂದು ಸಚಿವರ ಹೆಸರುಗಳನ್ನು ಬಳಸಲಾಗಿದೆ. ನಗರದಲ್ಲಿ ಪೋಸ್ಟರ್, ಬ್ಯಾನರ್, ಫ್ಲೆಕ್ಸ್ ನಿಷೇಧದ ನಡುವೆಯೂ ಪೋಸ್ಟರ್ ಅಂಟಿಸಿರುವುದರಿಂದ ಬಿಬಿಎಂಪಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.