ETV Bharat / state

7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರದ ಅನುಮೋದನೆ - ರಾಜ್ಯ ಸರ್ಕಾರ ಅನುಮೋದನೆ

ಈ ಎಲ್ಲ ಯೋಜನೆಗಳಿಂದ ಸುಮಾರು 18,146 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಸಚಿವ ಎಂ ಬಿ ಪಾಟೀಲ್​ ತಿಳಿಸಿದ್ದಾರೆ.

M B Pateel Meeting
ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆ
author img

By ETV Bharat Karnataka Team

Published : Sep 16, 2023, 2:25 PM IST

ಬೆಂಗಳೂರು: ರಾಜ್ಯ ಸರ್ಕಾರ 91 ಯೋಜನೆಗಳ ಒಟ್ಟು 7,660 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ 140ನೇ ಸಭೆಯಲ್ಲಿ 91 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಸುಮಾರು 18,146 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಸಚಿವ ಎಂ.ಬಿ. ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಯ 25 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 5,750.73 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 13,742 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.

ರೂ. 15 ಕೋಟಿಯಿಂದ ರೂ. 50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 57 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ₹1,145 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು ಅಂದಾಜು 4,404 ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದಲ್ಲದೇ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ₹763.85 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ . ಎಂ. ಮಹೇಶ್, ಐಟಿಬಿಟಿ ಇಲಾಖೆಯ ನಿರ್ದೇಶಕ ಎಚ್. ವಿ. ದರ್ಶನ್ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆ:

  • ಪ್ರತಿಭಾ ಪಾಟೀಲ್ ಶುಗರ್ ಇಂಡಸ್ಟ್ರೀಸ್ ಪೈವೇಟ್ ಲಿಮಿಟೆಡ್
    ಸ್ಥಳ: ಕಣ್ಣೂರ್ ಗ್ರಾಮ, ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆ
    ಹೂಡಿಕೆ: ₹489.50 ಕೋಟಿ
    ಉದ್ಯೋಗ: 275
  • ಗುರುದೇವ್ ರಿಫೈನರಿಸ್ & ಅಲೈಡ್ ಇಂಡಸ್ಟ್ರೀಸ್
    ಸ್ಥಳ: ತಡವಳಗ ಪೋಸ್ಟ್, ವಿಜಯಪುರ ಜಿಲ್ಲೆ
    ಹೂಡಿಕೆ: ₹488.49 ಕೋಟಿ
    ಉದ್ಯೋಗ: 255
  • ದೇವಶ್ರೀ ಇಸ್ಪಾತ್ ಪೈವೇಟ್ ಲಿಮಿಟೆಡ್
    ಸ್ಥಳ: ಹಳವರ್ತಿ ಗ್ರಾಮ, ಕೊಪ್ಪಳ ಜಿಲ್ಲೆ
    ಹೂಡಿಕೆ: ₹470 ಕೋಟಿ
    ಉದ್ಯೋಗ: 800
  • ಏಕಸ್ ಕನ್ಸೂಮರ್ ಪ್ರಾಡಕ್ಟಸ್ ಪೈವೇಟ್ ಲಿಮಿಟೆಡ್
    ಸ್ಥಳ: ಇತ್ತಿಗಟ್ಟಿ ಗ್ರಾಮ, ಧಾರವಾಡ ಜಿಲ್ಲೆ
    ಹೂಡಿಕೆ ₹456 ಕೋಟಿ
    ಉದ್ಯೋಗ: 1,187
  • ಇಂಟಿಗ್ರೇಟೆಡ್ ಸೋಲಾರ್ ಪವರ್ ಪೈವೇಟ್ ಲಿಮಿಟೆಡ್
    ಸ್ಥಳ: ಮಿಂಡಹಳ್ಳಿ ಗ್ರಾಮ, ಕೋಲಾರ ಜಿಲ್ಲೆ
    ಹೂಡಿಕೆ: ₹441.08 ಕೋಟಿ
    ಉದ್ಯೋಗ: 720
  • ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್
    ಸ್ಥಳ: ಮೂಸಿನಾಯಕನ ಹಳ್ಳಿ ಗ್ರಾಮ, ಬಳ್ಳಾರಿ ಜಿಲ್ಲೆ
    ಹೂಡಿಕೆ: ₹411 ಕೋಟಿ
    ಉದ್ಯೋಗ: 65
  • ಶಶಿ ಅಲೊಯ್ಸ್ ಪೈವೇಟ್ ಲಿಮಿಟೆಡ್
    ಸ್ಥಳ: ಭೈರನಾಯಕನಹಳ್ಳಿ ಗ್ರಾಮ, ಚಲ್ಲಕೆರೆ ತಾಲೂಕು, ಚಿತ್ರದುರ್ಗ
    ಹೂಡಿಕೆ: ₹380 ಕೋಟಿ
    ಉದ್ಯೋಗ: 400
  • ಎಸ್ ಎಫ್ ಎಸ್ ಗ್ರೂಪ್ ಇಂಡಿಯಾ ಪೈವೇಟ್ ಲಿಮಿಟೆಡ್
    ಸ್ಥಳ: ಬೆಳಗಾವಿ ಜಿಲ್ಲೆ
    ಹೂಡಿಕೆ: ₹ 250 ಕೋಟಿ
    ಉದ್ಯೋಗ: 844
  • ಮೈಸೂರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
    ಸ್ಥಳ: ರಾಯಚೂರು ಜಿಲ್ಲೆ
    ಹೂಡಿಕೆ: ₹240 ಕೋಟಿ
    ಉದ್ಯೋಗ: 157
  • ಲಾಮ್ ರಿಸರ್ಚ್ ಇಂಡಿಯಾ ಪೈವೇಟ್ ಲಿಮಿಟೆಡ್
    ಸ್ಥಳ: ಬೆಂಗಳೂರು
    ಹೂಡಿಕೆ: ₹235.91 ಕೋಟಿ
    ಉದ್ಯೋಗ: 1,724
  • ಟಾಟಾ ಸೆಮಿಕಂಡೆಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ ಪೈವೇಟ್ ಲಿಮಿಟೆಡ್
    ಸ್ಥಳ: ಕೊಲಾರ ಜಿಲ್ಲೆ
    ಹೂಡಿಕೆ: ₹200 ಕೋಟಿ
    ಉದ್ಯೋಗ: 155
  • ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
    ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ
    ಹೂಡಿಕೆ: ₹137 ಕೋಟಿ
    ಉದ್ಯೋಗ: 1,908

ಇದನ್ನೂ ಓದಿ : ಇಂದು ಹೈದರಾಬಾದ್​ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಸಿಎಂ, ಡಿಸಿಎಂ, ಬಿ.ಕೆ. ಹರಿಪ್ರಸಾದ್ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.