ETV Bharat / state

ರಾಜ್ಯದಲ್ಲಿ ಮತ್ತೆ ರೂಪಾಂತರಿ ಕೊರೊನಾ ಭೀತಿ: ವಿದೇಶಿ ಪ್ರಜೆಗಳ ಮೇಲೆ ಕಟ್ಟೆಚ್ಚರ

ಬ್ರೆಜಿಲ್-ದಕ್ಷಿಣ ಆಫಿಕ್ರಾದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲಿಂದ ಬರೋ ಪ್ರಯಾಣಿಕರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ನೆಗೆಟಿವ್ ರಿಪೋರ್ಟ್ ಇದ್ದರೂ ಇಲ್ಲಿಗೆ ಆಗಮಿಸಿದ ಬಳಿಕವೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕಿದೆ.

state-facing-of-mutant-corona-virus-from-foreign-citizen
ರಾಜ್ಯದಲ್ಲಿ ಮತ್ತೆ ರೂಪಾಂತರಿ ಕೊರೊನಾ ಭೀತಿ
author img

By

Published : Feb 19, 2021, 8:53 PM IST

ಬೆಂಗಳೂರು: ರಾಜ್ಯದೊಳಗೆ ಮತ್ತೊಮ್ಮೆ ಕೊರೊನಾ ವೈರಸ್ ಭೀತಿ ಎದುರಾಗಿದೆ. ಪಕ್ಕದ ಕೇರಳದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆ ಆಗಿರುವುದು ಸೇರಿದಂತೆ ರಾಜ್ಯದಲ್ಲೂ ಕೇರಳ ವಿದ್ಯಾರ್ಥಿಗಳಿಂದ ಒಮ್ಮೆಲೇ ಉದ್ಯಾನನಗರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

ಇದರ ಜೊತೆಗೆ ಮತ್ತೊಂದು ಆತಂಕವೆಂಬಂತೆ ಬ್ರೆಜಿಲ್ ಮತ್ತು ದಕ್ಷಿಣ ಆಫಿಕ್ರಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿರುವ ಹಿನ್ನೆಲೆ ಈಗಾಗಲೇ ಭಾರತಕ್ಕೂ ಈ ವೈರಸ್ ಕಾಲಿಟ್ಟಿರುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ತ್ರಿಲೋಕ ಕುಮಾರ್

ಇದಕ್ಕಾಗಿ ಬ್ರೆಜಿಲ್-ದಕ್ಷಿಣ ಆಫಿಕ್ರಾದಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲಿಂದ ಬರೋ ಪ್ರಯಾಣಿಕರಿಗೆ ಆರ್​​ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ನೆಗೆಟಿವ್ ರಿಪೋರ್ಟ್ ಇದ್ದರೂ ಇಲ್ಲಿಗೆ ಆಗಮಿಸಿದ ಬಳಿಕವೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕಿದೆ.

ಕೋವಿಡ್ 2ನೇ ಹಂತದ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ತ್ರಿಲೋಕ ಕುಮಾರ್, ಈಗಾಗಲೇ ಕೋವಿಡ್ ಹೊಡೆತದಿಂದ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿರುವುದು ಗೊತ್ತಿದೆ. ಜನರು ಕೂಡ ಸಾಮಾಜಿಕ ಜವಾಬ್ದಾರಿ ಹೊತ್ತು, ಕೋವಿಡ್ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು. ಕೋವಿಡ್ ಸಂಪೂರ್ಣ ನಿರ್ಮೂಲನೆ ಆಗುವವರೆಗೆ ಅದಷ್ಟು ಸುರಕ್ಷತಾ ಕ್ರಮಗಳ ಪಾಲನೆಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ 2ನೇ ಅಲೆಗೆ ಸಿಲುಕಿಕೊಳ್ಳುವ ಎಲ್ಲಾ ಲಕ್ಷಣಗಳು ಇವೆ ಅಂತ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳೋದೇನು?

  • ಗುಂಪು ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವುದು ( ಮದುವೆ ಸೇರಿದಂತೆ ಇತರೆ ಸಮಾರಂಭ ಹಾಗೂ ಮಾರುಕಟ್ಟೆ ಜಾಗ, ಜನ ಸಮೂಹ ಸೇರುವ ಜಾಗದಲ್ಲಿ ಕ್ರಮ ವಹಿಸುವುದು)
  • ದೈಹಿಕ ಅಂತರ ಕಡ್ಡಾಯ ಮಾಡುವುದು
  • ಜನ ಸಮೂಹದಲ್ಲಿರುವಾಗ ಮಾಸ್ಕ್ ಹಾಕುವುದು ಕಡ್ಡಾಯ.
  • ಕೈಗಳನ್ನು ಆಗಾಗ ಸ್ವಚ್ಛಗೊಳಿಸುವುದು.
  • ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳುವುದು.

ಇದನ್ನೂ ಓದಿ: ರಾಜ್ಯಕ್ಕೆ ಕೇರಳ - ಮಹಾರಾಷ್ಟ್ರದಿಂದ ಕೋವಿಡ್ ಹಬ್ಬುವ ಆತಂಕ; ಮುನ್ನೆಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.