ETV Bharat / state

ರಾಜ್ಯದ ಪ್ರವಾಸೋದ್ಯಮ ಇಲಾಖೆ ಅನುದಾನ ಪಡೆಯಲು ವಿಫಲ: ಕೇಂದ್ರದ ಅಧಿಕಾರಿ

ಇಂದು ನಗರದ ಹೋಟೆಲ್​ನಲ್ಲಿ ನಡೆದ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯಿತು. ಈ ವೇಳೆ ಕೇಂದ್ರ ಪ್ರವಾಸೋದ್ಯದಲ್ಲಿ ಕರ್ನಾಟಕಕ್ಕೆ ಅನುದಾನ ಸಿಗದ ವಿಚಾರವಾಗಿ ಚರ್ಚೆ ನಡೆಯಿತು.

author img

By

Published : Oct 28, 2021, 10:59 PM IST

Southern States Tourism Minister's Conference
ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನ

ಬೆಂಗಳೂರು: ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಎಂದು ಸ್ವದೇಶಿ ಯೋಜನೆಯಡಿ ಒಟ್ಟು ₹ 1,185.15 ಕೋಟಿ ರೂ. ಅನುದಾನ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರ ಸರಿಯಾದ ಪ್ರಸ್ತಾವನೆ ಕಳಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅನುದಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ರೂಪೇಂದ್ರ ಬರಾರ್‌ ಹೇಳಿದರು.

ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಶಾದ್ ಯೋಜನೆಯಡಿ ಚಾಮುಂಡೇಶ್ವರಿ ಅಭಿವೃದ್ಧಿಗೆ ಪ್ಲಾನ್ ಮಾಡಲಾಗಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಅನುದಾನ ಪಡೆಯುವಲ್ಲಿ ವಿಫಲವಾಗಿದೆ. ಅನುದಾನ ಪಡೆಯಲು ಸಲ್ಲಿಸಿದ್ದ ಪ್ರಸ್ತಾವನೆಗೆ ಕೆಲವು ತಾಂತ್ರಿಕ ಕಾರಣಗಳಿಂದ ಈವರೆಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಮ್ಮುಖದಲ್ಲೇ ಆರೋಪಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಈ ಸಂಬಂಧ ಸಭೆ ನಡೆಸಿ ಆದಷ್ಟು ಬೇಗ ಪರಿಹಾರ ನೀಡಲಾಗುವುದು ಎಂದರು.

ಕೇಂದ್ರ ಅಧಿಕಾರಿಗಳ ತಳ್ಳಿ ಹಾಕಿದ ಸಚಿವ ಆನಂದ್ ಸಿಂಗ್​:

ಕೇಂದ್ರ ಅಧಿಕಾರಿಗಳ ತಳ್ಳಿ ಹಾಕಿದ ಸಚಿವ ಆನಂದ್ ಸಿಂಗ್

ಬಳಿಕ ಸಚಿವ ಆನಂದ್ ಸಿಂಗ್ ಮಾತನಾಡಿ ಕೇಂದ್ರ ಅಧಿಕಾರಿಗಳ ಆರೋಪ ತಳ್ಳಿ ಹಾಕಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಎಂಬ ಪದ ಬಳಸಿದ್ದು ಸರಿಯಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಪ್ರಶಾದ್ ಕರ್ನಾಟಕ ವಿಫಲವಾಗಿದೆ ಅಂತ ಅಧಿಕಾರಿ ಹೇಳಬಾರದಿತ್ತು. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ ಎಂದರೆ ನಾನು ವಿಫಲವಾಗಿಲ್ಲ. ಅದಷ್ಟು ಬೇಗ ಪ್ರಸ್ತಾವನೆ ಕಳಿಸುತ್ತೇನೆ.

ಕೇಂದ್ರ ಸಚಿವರು ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಹೆಚ್ಚು ಅನುದಾನ ಬಿಡುಗಡೆ ಆಗಬೇಕು. ನಮ್ಮ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಬೇಕು. ನಮ್ಮ ರಾಜ್ಯ ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿದೆ. ಈ ಬಗ್ಗೆ ಅಧಿಕಾರಗಳ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.

ಇಂಧನ ಬೆಲೆ ಏರಿಕೆ ಪ್ರವಾಸೋದ್ಯಮದ ಪರಿಣಾಮ ಬೀರಲ್ಲ:

ಬೆಲೆ ಏರಿಕೆ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲ್ಲ. ಜನ ಪ್ರವಾಸ ಮಾಡಬೇಕು ಎಂದು ನಿರ್ಧರಿಸಿದರೆ ಎಷ್ಟೇ ಕಷ್ಟ ಇದ್ರೂ ಪ್ರವಾಸ ಮಾಡ್ತಾರೆ. ಬೆಲೆ ಏರಿಕೆ ಅಂತ ಜನ ಪ್ರವಾಸ ಮಾಡದೇ ಇರಲ್ಲ. ಕೊರೊನಾ ಹಿನ್ನೆಲೆಯಲ್ಲಿ ಕಮರ್ಷಿಯಲ್ ಮತ್ತು ಡೊಮೆಸ್ಟಿಕ್ ಪ್ರವಾಸೋದ್ಯಮ ನಿಂತು ಹೋಗಿತ್ತು. ಈಗ ಮತ್ತೆ ಆರಂಭ‌ ಮಾಡಲು ಪ್ರಯತ್ನ ನಡೆಸಿದ್ದೇವೆ. ಪ್ರವಾಸೋದ್ಯಮ ಅಡಿ ಬರುವ ಸೆಕ್ಟರ್ ಜೊತೆ ಮಾತನಾಡಿದ್ದೇವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಹೇಳಿದರು.

ಇದನ್ನೂ ಓದಿ: ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ: ಈ ಅಂಕಿಅಂಶಗಳನ್ನು ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.