ಬೆಂಗಳೂರು: ರಾಜ್ಯದಲ್ಲಿಂದು 1,01,778 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 322 ಮಂದಿಗೆ ವೈರಸ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,96,470ಕ್ಕೆ ಏರಿಕೆ ಆಗಿದೆ. ಇತ್ತ 162 ಮಂದಿ ಡಿಸ್ಚಾರ್ಜ್ ಆಗಿದ್ದು 29,51,654 ಜನ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,213 ಕ್ಕೆ ಏರಿಕೆ ಆಗಿದೆ.
ಸದ್ಯ ಸಕ್ರಿಯ ಪ್ರಕರಣಗಳು 6,574 ರಷ್ಟು ದಾಖಲಾಗಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.31 ರಷ್ಟಿದ್ದರೆ, ಸಾವಿನ ಪ್ರಮಾಣ 0.62 ರಷ್ಟು ಕಂಡು ಬಂದಿದೆ.
ಬೆಂಗಳೂರಿನಲ್ಲಿ 165 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,56,617ಕ್ಕೆ ಏರಿಕೆ ಆಗಿದೆ. 72 ಜನರು ಗುಣಮುಖರಾಗಿದ್ದು, 12,35,353 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,338 ರಷ್ಟಿದೆ. ಇನ್ನು 4,925 ಸಕ್ರಿಯ ಪ್ರಕರಣ ದಾಖಲಾಗಿದೆ.
ಡೆಲ್ಟಾ ಸೋಂಕು ಮತ್ತೆ ಹೆಚ್ಚಳ
ಡೆಲ್ಟಾ ಸೋಂಕು 1698ದಿಂದ 2095ಕ್ಕೆ ಏರಿಕೆ ಆಗಿದೆ. ಒಂದೇ ಸಲ 397 ರಷ್ಟು ಡೆಲ್ಟಾ ದೃಢಪಟ್ಟಿದೆ. ಡೆಲ್ಟಾ ಸಬ್ ಲೈನ್ಏಜ್ 300 ಇದ್ದಿದ್ದು, 558ಕ್ಕೆ ಏರಿದೆ. ಇದರಿಂದ 258 ಹೊಸ ಪ್ರಕರಣ ಪತ್ತೆಯಾದಂತಾಗಿದೆ.
ಅಲ್ಫಾ- 155
ಬೇಟಾ- 08
ಡೆಲ್ಟಾ- 2095
ಡೆಲ್ಟಾ ಸಬ್ ಲೈನ್ಏಜ್- 558
ಕಪ್ಪಾ- 160
ಈಟಾ- 01