ETV Bharat / state

ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ತರಬೇತುದಾರರು: ಕ್ಯಾರೆ ಎನ್ನದ ಕ್ರೀಡಾ ಇಲಾಖೆ

ಕಳೆದ 4 ದಿನಗಳಿಂದ ಧರಣಿ ನಡೆಸಿರುವ ತರಬೇತಿದಾರರು, ಯುವ ಸಬಲೀಕರಣ ಹಾಗೂ ‌ಕ್ರೀಡಾ ಇಲಾಖೆಯಿಂದ ಅನ್ಯಾಯ ನೆಡೆದಿದೆ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

state-collections-trainers-contract-terminated-protest
ನಾಲ್ಕು ದಿನಗಳಿಂದ ಪ್ರತಿಭಟನೆ ನೆಡೆಸುತ್ತಿರುವ ತರಬೇತುದಾರರು
author img

By

Published : Jan 5, 2021, 9:34 PM IST

ಬೆಂಗಳೂರು: ನಗರದ ಮೌರ್ಯ ವೃತ್ತದಲ್ಲಿ ಕರ್ನಾಟಕ ಸ್ಪೋರ್ಟ್ಸ್ ಅಂಡ್ ಗೇಮ್ ಕೋಚ್ ಅಸೋಸಿಯೇಷನ್​ನ ತರಬೇತುದಾರರು 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ತರಬೇತುದಾರರನ್ನು ಸರ್ಕಾರ ಬೀದಿಪಾಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ದಿನಗಳಿಂದ ಪ್ರತಿಭಟನೆ ನೆಡೆಸುತ್ತಿರುವ ತರಬೇತುದಾರರು

ಕಳೆದ 4 ದಿನಗಳಿಂದ ಧರಣಿ ನಡೆಸಿರುವ ತರಬೇತಿದಾರರು, ಯುವ ಸಬಲೀಕರಣ ಹಾಗೂ ‌ಕ್ರೀಡಾ ಇಲಾಖೆಯಿಂದ ಅನ್ಯಾಯ ನಡೆದಿದೆ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಓದಿ: ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಂಪೂರ್ಣ ಸಿದ್ಧ: ಸಚಿವ ಸುಧಾಕರ್

ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದ ತರಬೇತಿದಾರರನ್ನು ಯಾವುದೇ ಕಾರಣ ನೀಡದೆ ತೆಗೆದಿರುವ ರಾಜ್ಯ ಕ್ರೀಡಾ ಇಲಾಖೆ, 73 ಮಂದಿ ಯಾವುದೇ ನೋಟಿಸ್ ಕೂಡ ನೀಡಿಲ್ಲ. ಕ್ರೀಡಾ ಇಲಾಖೆಯ ಆಯುಕ್ತರು ಯಾವುದೇ ಉದ್ಯೋಗ ಭದ್ರತೆ ಹಾಗೂ ತರಬೇತುದಾರರ ಭವಿಷ್ಯದ ಬಗ್ಗೆ ಯೋಚಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ತರಬೇತುದಾರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಂಟಿ ಆಯುಕ್ತರಿಗೆ ಮತ್ತೆ ಇಲಾಖೆ 73 ಜನರನ್ನು ಕರ್ತವ್ಯದಲ್ಲಿ ಮುಂದುವರೆಸಬೇಕೆಂದು ಹೋರಾಟಗಾರರು ಮನವಿ ಮಾಡಿದ್ದಾರೆ.

ನಾಲ್ಕು ದಿನಗಳಿಂದ ಮೌರ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಕ್ರೀಡಾ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸಂಪರ್ಕ ಮಾಡಿಲ್ಲದಿರುವುದು. ಕ್ರೀಡಾ ಇಲಾಖೆಯಲ್ಲಿರುವ ಅಧಿಕಾರಿಗಳ ದಬ್ಬಾಳಿಕೆಯನ್ನ ತೋರುತ್ತಿದ್ದೆ ಎಂದು ಪ್ರತಿಭಟನಾಕಾರರು ದೂರಿದರು.

ಇಂದು ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನಾಕಾರರ ಪರವಾಗಿ ನಿಂತಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಮುಂದೆ ಭಿಕ್ಷೆ ಎತ್ತುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.