ETV Bharat / state

ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರೋಧವೇ ಕಾಂಗ್ರೆಸ್ ಡಿಎನ್ಎ : ರಾಜ್ಯ ಬಿಜೆಪಿ

ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರೋಧವೇ ಕಾಂಗ್ರೆಸ್ ಡಿಎನ್‌ಎ(congress DNA) ರಂದು ರಾಜ್ಯ ಬಿಜೆಪಿ ಕಾಂಗ್ರೆಸ್​ ನಾಯಕರ ವಿರುದ್ಧ ಟ್ವಿಟರ್​ನಲ್ಲಿ(twitter) ಕಿಡಿಕಾರಿದೆ..

state BJP Tweets against congress and jds
ರಾಜ್ಯ ಬಿಜೆಪಿ
author img

By

Published : Nov 13, 2021, 6:45 PM IST

ಬೆಂಗಳೂರು : ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರೋಧವೇ ಕಾಂಗ್ರೆಸ್ ಡಿಎನ್‌ಎ(DNA). ಚುನಾವಣೆ ಬಂದಾಗ ಮಾತ್ರ ತಾವು ಹಿಂದೂಗಳು ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್(State bjp tweet) ಮೂಲಕ ವಾಗ್ದಾಳಿ ನಡೆಸಿದೆ.

ಚುನಾವಣೆ ಹೊರತುಪಡಿಸಿ ಉಳಿದ ಸಮಯದಲ್ಲಿ ಧರ್ಮದ್ವೇಷದಲ್ಲೇ ಕಾಲ ಕಳೆಯುತ್ತಾರೆ. ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ. ಆದರೆ, ಹಿಂದೂ ಧರ್ಮ ಹಾಗೂ ಹಿಂದುತ್ವದ ಮಧ್ಯೆ ವ್ಯತ್ಯಾಸವಿಲ್ಲ. ಆಲೂಗೆಡ್ಡೆಯಿಂದ ಚಿನ್ನ ತೆಗೆಯಲು ಹೊರಟವರಿಗೆ ಮಾತ್ರ ಇಂಥ ವ್ಯತ್ಯಾಸ ಕಾಣಲು ಸಾಧ್ಯ.

ಕಾಂಗ್ರೆಸ್ ಪಕ್ಷದ ಹಿಂದೂ ದ್ವೇಷಕ್ಕೆ ಉದಾಹರಣೆಗಳು. ಟಿಪ್ಪು ಮತಾಂಧನಲ್ಲ - ಸಿದ್ದರಾಮಯ್ಯ(Siddaramaiah). ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ -ರಾಹುಲ್ ಗಾಂಧಿ(Rahul Gandhi). ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದೆ.

ಮಿಷನ್‌ ಕುಟುಂಬ ರಾಜಕಾರಣ : ಜೆಡಿಎಸ್​​ನ(JDS) ಕುಟುಂಬ ರಾಜಕಾರಣ ಬಗ್ಗೆನೂ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ. ಭವಾನಿ ರೇವಣ್ಣ(Bhavani Revanna)ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಪ್ರಸ್ತಾಪವಾಗಿದೆ.

ಕಾರ್ಯಕರ್ತರ ಭಾವನೆಗೆ ಬೆಲೆ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ. ಇದು ಕುಟುಂಬ ರಾಜಕಾರಣದ ಇನ್ನೊಂದು ಮುಖ ಅನಾವರಣವೇ? ಎಂದು ಪ್ರಶ್ನಿಸಿದ್ದಾರೆ.

ಓಲೈಕೆ ರಾಜಕಾರಣ ಕಾಂಗ್ರೆಸ್ ಸಿದ್ಧಾಂತ(Congress principles). ಕುಟುಂಬ ರಾಜಕಾರಣ ಜೆಡಿಎಸ್ ಸಿದ್ಧಾಂತ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ(election) ಈ ಎರಡು ಪಕ್ಷಗಳು ಕುಟುಂಬವಾದಕ್ಕೆ ಮಣೆ ಹಾಕುತ್ತಿರುವುದು ಪ್ರಜಾಪ್ರಭುತ್ವದ ವ್ಯಂಗ್ಯ.

ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ. ರೇವಣ್ಣ, ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ. ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಎಷ್ಟೊಂದು ಸಮೃದ್ಧವಾಗಿವೆ ಎಂದು ವಾಗ್ದಾಳಿ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.