ETV Bharat / state

ನಾಳೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ: ಚುನಾವಣಾ ಪ್ರಚಾರತಂತ್ರದ ಚರ್ಚೆ ಸಾಧ್ಯತೆ - ರಾಜ್ಯ ವಿಶೇಷ ಕಾರ್ಯಕಾರಣಿ ಸಭೆ

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬೆನ್ನಲ್ಲೇ ನಾಳೆ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಣಿ ಸಭೆ ನಿಗದಿಯಾಗಿದೆ.

state BJP special executive meeting
ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆ
author img

By

Published : Feb 3, 2023, 10:59 PM IST

ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬೆನ್ನಲ್ಲೇ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಣಿ ಸಭೆಯನ್ನು ಆಯೋಜಿಸಲಾಗಿದ್ದು, ನಾಳೆ ಜರುಗಲಿರುವ ವಿಶೇಷ ಕಾರ್ಯಕಾರಿಣಿಯಲ್ಲಿ ಚುನಾವಣಾ ಸಿದ್ದತೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭ ನಾಳೆ ಬೆಳಿಗ್ಗೆ 10 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ನಲ್ಲಿ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಕಾಂಗ್ರೆಸ್​ ಬಸ್ ಯಾತ್ರೆ: ಇಂದಿನಿಂದ ಕಾಂಗ್ರೆಸ್​ನ ಬಸ್ ಯಾತ್ರೆ ಆರಂಭಗೊಂಡಿದೆ. ಕಾಂಗ್ರೆಸ್​ನ ಎರಡು ಬಸ್ ಯಾತ್ರೆಗೆ ಪ್ರತಿಯಾಗಿ ರಾಜ್ಯದ ನಾಲ್ಕು ದಿಕ್ಕಿನಿಂದಲೂ ರಥಯಾತ್ರೆಗೆ ಬಿಜೆಪಿ ನಿರ್ಧರಿಸಿದೆ. ಕೋರ್ ಕಮಿಟಿಯಲ್ಲಿ ಕೈಗೊಂಡ ನಿರ್ಧಾರದ ಆಧಾರದಲ್ಲಿ ರಥಯಾತ್ರೆ ಕುರಿತು ಮುಂದುವರೆದ ಚರ್ಚೆ ನಡೆಯಲಿದೆ. ಹಳೆ ಮೈಸೂರು ಭಾಗವನ್ನು ಕೇಂದ್ರೀಕರಿಸಿಕೊಂಡು ರಥಯಾತ್ರೆ ನಕ್ಷೆ ಸಿದ್ದಪಡಿಸಲಾಗುತ್ತದೆ ಎನ್ನಲಾಗಿದೆ.

ಫಲಿತಾಂಶದ ಅವಲೋಕನ: ಈಗಾಗಲೇ ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಬೂತ್ ವಿಜಯ್ ಅಭಿಯಾನ, ವಿಜಯ ಸಂಕಲ್ಪ ಅಭಿಯಾನದ ಫಲಿತಾಂಶದ ಅವಲೋಕನ ನಡೆಸಲಾಗುತ್ತದೆ. ಬೂತ್​ಗಳ ಸ್ಥಿತಿಗತಿ ಪರಾಮರ್ಶೆಯಾಗಲಿದ್ದು, ಪ್ರಮುಖರ ಕಾರ್ಯನಿರ್ವಹಣೆ, ಬೂತ್​ಗಳಲ್ಲಿ ಸಂಘಟನೆ ಗುರಿ ತಲುಪಿದೆಯಾ ಎನ್ನುವುದು ಸೇರಿದಂತೆ ತಳಮಟ್ಟದಿಂದ ಪಕ್ಷ ಬಲವರ್ದನೆ ಕುರಿತು ಪರಾಮರ್ಶೆ ನಡೆಯಲಿದೆ.

ಮೋರ್ಚಾಗಳ ಸಾಮಾವೇಶ: ಬಾಕಿ ಉಳಿದಿರುವ ಮೋರ್ಚಾಗಳ ಸಾಮಾವೇಶ ಆಯೋಜನೆ, ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ನಡೆಸಬೇಕಿರುವ ಜಾಥಾಗಳು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರವಾಸದ ವೇಳೆ ಆಯೋಜನೆ ಮಾಡಬೇಕಿರುವ ಪಕ್ಷದ ಕಾರ್ಯಕ್ರಮಗಳ ಸಿದ್ದತೆ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿದೆ.

ಕೋರ್ ಕಮಿಟಿ ಸಭೆ: ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ನಾಳಿನ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಲಿದ್ದು, ಚುನಾವಣಾ ದೃಷ್ಟಿಯಿಂದ ಕೈಗೊಳ್ಳಬೇಕಿರುವ ಪ್ರಚಾರ ಕಾರ್ಯದ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ನಾಳಿನ ಸಭೆಯಲ್ಲಿ ಕಾರ್ಯಕಾರಿಣಿ ಸದಸ್ಯರಿಗೆ ಹೊಸ ಟಾಸ್ಕ್ ಅನ್ನು ನೀಡಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಮ್ಮ ಭಾಷಣದಲ್ಲಿ ಕಾರ್ಯಕಾರಿಣಿ ಸದಸ್ಯರಿಗೆ ಪಕ್ಷ ನೀಡುತ್ತಿರುವ ಹೊಸ ಗುರಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.