ಬೆಂಗಳೂರು : ಕೊರೊನಾ ಪರಿಣಾಮ ಹಲವು ತಿಂಗಳಿಂದ ಸ್ಥಗಿತಗೊಂಡಿದ್ದ ಫಿಸಿಕಲ್ ಫೈಲಿಂಗ್ ಪ್ರಕ್ರಿಯೆಗೆ ಹೈಕೋರ್ಟ್ ಮತ್ತೆ ಅವಕಾಶ ಕಲ್ಪಿಸಿದೆ.
ಬೆಂಗಳೂರು ಪ್ರಧಾನ ಪೀಠದಲ್ಲಿ ಇನ್ನು ಮುಂದೆ ವಕೀಲರು ಫಿಸಿಕಲ್ ಫೈಲಿಂಗ್ ಮೂಲಕವೇ ಅರ್ಜಿಗಳನ್ನು ದಾಖಲಿಸಬೇಕು. ಇನ್ನು ಮುಂದೆ ರಿಜಿಸ್ಟ್ರಾರ್ (ನ್ಯಾಯಾಂಗ) ಇಮೇಲ್ ವಿಳಾಸಕ್ಕೆ ಕಳುಹಿಸಿದಲ್ಲಿ ಅವುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಮೆಮೊಗಳು, ಪೂರಕ ದಾಖಲೆಗಳು, ವಕಾಲತ್ತು ಅರ್ಜಿಗಳು, ಪ್ರಮಾಣಪತ್ರಗಳು, ಲಿಖಿತ ಹೇಳಿಕೆಗಳನ್ನು ಇನ್ನು ಮುಂದೆ ನೇರವಾಗಿ ಫಿಸಿಕಲ್ ಫೈಲಿಂಗ್ ಮೂಲಕವೇ ದಾಖಲಿಸಬೇಕು. ಅದಕ್ಕಾಗಿ ಗೇಟ್ ಸಂಖ್ಯೆ 5ರ ಬಳಿ ವಿಶೇಷ ಕೌಂಟರ್ಗಳನ್ನು ಪ್ರಾರಂಭಿಸಲಾಗಿದೆ. ಹಾಗೆಯೇ, ಸರ್ಕಾರಿ ವಕೀಲರಿಗೆ- ಎಸ್ ಪಿಪಿ ಗಳಿಗೂ ಅರ್ಜಿ ಪ್ರತಿಯನ್ನು ಸಲ್ಲಿಸಬಹುದು. ಇದಕ್ಕಾಗಿ ಈ ಹಿಂದಿನಂತೆ ಮುಂಚಿತವಾಗಿ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲಅರ್ಜಿ ಸ್ವೀಕರಿಸುವ ವಿಶೇಷ ಕೌಂಟರ್ ಗಳು ಎಲ್ಲಾ ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ವರೆಗೂ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೂ ತೆರೆದಿರಲಿವೆ ಎಂದು ಹೈಕೋರ್ಟ್ ತನ್ನ ನೋಟಿಸ್ ನಲ್ಲಿ ಸ್ಪಷ್ಟಪಡಿಸಿದೆ.