ETV Bharat / state

ಅಧಿಕಾರಕ್ಕಾಗಿ ಕೋರ್ಟ್ ಮೆಟ್ಟಿಲೆರೋ ಇವರು ಕಚೇರಿಗೆ ಮಾತ್ರ ಚಕ್ಕರ್? - ಬೆಂಗಳೂರು ಮಹಾನಗರ ಪಾಲಿಕೆ

ಬಿಬಿಎಂಪಿಯ ಸ್ಥಾಯಿ ಸಮಿತಿ ಅಧ್ಯಕ್ಷರು ಸರ್ಕಾರ ನೀಡಿರುವ ಐಶಾರಾಮಿ ಕಾರುಗಳನ್ನು ಸ್ವಂತಕ್ಕಾಗಿ ಬಳಸಿಕೊಂಡು ಕಚೇರಿಗೆ ಚಕ್ಕರ್​ ಹೊಡೆಯುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಬಿಬಿಎಂಪಿಯ ಸ್ಥಾಯಿ ಸಮಿತಿ ಅಧ್ಯಕ್ಷರು
author img

By

Published : Nov 12, 2019, 10:12 PM IST

ಬೆಂಗಳೂರು: ತಮ್ಮ ಅವಧಿ ಮುಗಿದಿಲ್ಲ ಡಿಸೆಂಬರ್ ನಾಲ್ಕರವರೆಗೂ ಅಧಿಕಾರವಿದೆ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿ, ಕಾನೂನು ಹೋರಾಟ ಮಾಡುವ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಕಚೇರಿಗೆ ಚಕ್ಕರ್​ ಹೊಡೆಯುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಬಿಬಿಎಂಪಿಯ ಸ್ಥಾಯಿ ಸಮಿತಿ ಅಧ್ಯಕ್ಷರು

ರಾಜಧಾನಿಗೆ ಮೂಲಸೌಕರ್ಯಗಳನ್ನು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಬದಲಾದಾಗ, ತಮ್ಮ ಅವಧಿ ಇನ್ನೂ ಮುಗಿದಿಲ್ಲ , ಇದನ್ನು ಮೊಟಕುಗೊಳಿಸಬಾರದು ಎಂದು ಪಟ್ಟು ಹಿಡಿದಿದ್ರು. ಆದ್ರೆ ಬಿಬಿಎಂಪಿಯಲ್ಲಿ ಸಾರ್ವಜನಿಕರು ಏನಾದ್ರು ಸಹಕಾರ ಆಗ್ಬೇಕು ಅಂತ ಪಾಲಿಕೆಯ ಸ್ಥಾಯಿ ಸಮಿತಿ ಕಚೇರಿಯ ಬಾಗಿಲು ತೆಗೆದ್ರೆ ಖಾಲಿ ಖಾಲಿ ಕುರ್ಚಿಗಳ ದರ್ಶನವಾಗುತ್ತೆ.

ಒಟ್ಟು ಹನ್ನೆರಡು ಸ್ಥಾಯಿ ಸಮಿತಿಗಳಿಗೆ ತಲಾ ಒಬ್ಬ ಅಧ್ಯಕ್ಷ ಹಾಗೂ ಹನ್ನೊಂದು ಸದಸ್ಯರಿರುತ್ತಾರೆ. ಇವರ್ಯಾರೂ ವಾರದಲ್ಲಿ ಒಂದು ಬಾರಿಯೂ ಕಚೇರಿಗೆ ಬರೋದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇವಲ ಅಧಿಕಾರ ಸ್ವೀಕರಿಸಿದ ಮರುದಿನ ಕಚೇರಿ ಪೂಜೆಗಷ್ಟೇ ಸೀಮಿತವಾಗಿರುವ ಇವರು ಕಚೇರಿ ಕಡೆಗೆ ಮುಖ ಮಾಡಿಲ್ಲ ಎನ್ನಲಾಗುತ್ತಿದೆ. ಶಿಕ್ಷಣ ಸ್ಥಾಯಿ ಸಮಿತಿಯ ಇಮ್ರಾನ್ ಪಾಷಾ ಬಿಟ್ಟರೆ, ಬೇರೆ ಯಾರೂ ಕಚೇರಿಗಳಿವೆ ಬರುತ್ತಿಲ್ಲ. ಸಾಕಷ್ಟು ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ವಾರಕ್ಕೊಂದು ಬಾರಿ ಕಡ್ಡಾಯ ಸಭೆ ನಡೆಸುವ ಅಗತ್ಯವಿದ್ರೂ ಸಭೆಗಳು ನಡೆಯೋದಿಲ್ಲ.

ಈ ಬಗ್ಗೆ ಮಾತನಾಡಿದ ಆರ್ ಟಿ ಐ ಕಾರ್ಯಕರ್ತ ಅಮರೇಶ್, ವಿವಿಧ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಬಿಬಿಎಂಪಿಗೆ ಬರುತ್ತಿರುತ್ತಾರೆ. ವಾರಕ್ಕೊಂದು ಬಾರಿಯಾದರು ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು ಸಭೆ ನಡೆಸಬೇಕು. ಆದ್ರೆ ಒಂದು ಸಭೆಯೂ ನಡೆಯೋದಿಲ್ಲ. ಅವರಿಗೆ ಕೊಡುವ ಐಶಾರಾಮಿ ಕಾರು, ಕಚೇರಿಗಳು ಎಲ್ಲಾ ವ್ಯರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:ಅಧಿಕಾರಕ್ಕಾಗಿ ಕೋರ್ಟ್ ಮೆಟ್ಟಿಲೇರ್ತಾರೆ- ಕಚೇರಿಗೆ ಮಾತ್ರ ಚಕ್ಕರ್!

ಬೆಂಗಳೂರು- ಇದು ನಮ್ಮ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯಗಳನ್ನು ಒದಗಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕಥೆ... ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಬದಲಾದಾಗ, ತಮ್ಮ ಅವಧಿ ಇನ್ನೂ ಮುಗಿದಿಲ್ಲ , ಡಿಸೆಂಬರ್ ನಾಲ್ಕರ ವರೆಗೂ ಅಧಿಕಾರ ಇದೆ. ಇದನ್ನು ಮೊಟಕುಗೊಳಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿ, ಕಾನೂನು ಹೋರಾಟ ಮಾಡಿದ್ರು..
ಆದ್ರೆ ಬಿಬಿಎಂಪಿಯಲ್ಲಿ ಯಾರಾದ್ರು, ಸಾರ್ವಜನಿಕರು ಏನಾದ್ರು ಸಹಕಾರ ಆಗ್ಬೇಕು ಅಂತ ಪಾಲಿಕೆಯ ಸ್ಥಾಯಿ ಸಮಿತಿ ಕಚೇರಿಯ ಬಾಗಿಲು ತೆಗೆದ್ರೆ ಖಾಲಿ ಖಾಲಿ ಕುರ್ಚಿಗಳ ದರ್ಶನವಾಗುತ್ತೆ. ಒಟ್ಟು ಹನ್ನೆರಡು ಸ್ಥಾಯಿ ಸಮಿತಿಗಳಿಗೆ ತಲಾ ಒಬ್ಬ ಅಧ್ಯಕ್ಷ, ಹಾಗೂ ಹನ್ನೊಂದು ಸದಸ್ಯರಿರ್ತಾರೆ.. ಇವರ್ಯಾರೂ ವಾರದಲ್ಲಿ ಒಂದು ಬಾರಿಯೂ ಕಚೇರಿಗೆ ಬರೋದಿಲ್ಲ... ಕೇವಲ ಅಧಿಕಾರ ಸ್ವೀಕರಿಸಿದ ಮರುದಿನ ಕಚೇರಿ ಪೂಜೆಗಷ್ಟೇ ಸೀಮಿತವಾಗಿದ್ದು, ಬಳಿಕ ಕಚೇರಿ ಕಡೆಗೆ ಮುಖ ಮಾಡುವ ಒಬ್ಬರೇ ಒಬ್ಬರು ಅಧ್ಯಕ್ಷರಿಲ್ಲ.. ಶಿಕ್ಷಣ ಸ್ಥಾಯಿ ಸಮಿತಿಯ ಇಮ್ರಾನ್ ಪಾಷಾ ಬಿಟ್ಟರೆ, ಬೇರೆ ಯಾರೂ ಕಚೇರಿಗಳಿವೆ ಬರುತ್ತನೇ ಇಲ್ಲ. ಸಾಕಷ್ಟು ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ವಾರಕ್ಕೊಂದು ಬಾರಿ ಕಡ್ಡಾಯ ಸಭೆ ನಡೆಸುವ ಅಗತ್ಯವಿದ್ರೂ ಸಭೆಗಳು ನಡೆಯೋದಿಲ್ಲ.. ಆದ್ರೆ ಸ್ಥಾಯಿ ಸಮಿತಿ ಅಧ್ಯಕ್ಷರು ಮಾತ್ರ ಸರ್ಕಾರ ನೀಡಿರುವ ಐಶಾರಾಮಿ ಕಾರುಗಳನ್ನು ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ..
ಈ ಬಗ್ಗೆ ಮಾತನಾಡಿದ, ಆರ್ ಟಿ ಐ ಕಾರ್ಯಕರ್ತ ಅಮರೇಶ್ ಮಾತನಾಡಿ, ವಿವಿಧ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಬಿಬಿಎಂಪಿಗೆ ಬರುತ್ತಿರುತ್ತಾರೆ. ವಾರಕ್ಕೊಂದು ಬಾರಿಯಾದರೂ, ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು ಸಭೆ ನಡೆಸಬೇಕು ಆದ್ರೆ ಒಂದು ಸಭೆಯೂ ನಡೆಯೋದಿಲ್ಲ. ಅವರಿಗೆ ಕೊಡುವ ಐಶಾರಾಮಿ ಕಾರು ಕಚೇರಿಗಳು ಎಲ್ಲಾ ವ್ಯರ್ಥ ಎಂದರು.
ಒಟ್ಟಿನಲ್ಲಿ ಒಂದು ವರ್ಷದಲ್ಲಿ ಕಡೇಯ, ಒಂದು ತಿಂಗಳ ಅವಧಿ ಬಾಕಿಯಿದ್ದು, ಇನ್ನಾದ್ರೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಕಮಿಟಿ ಕಚೇರಿ ಕಡೆಗೆ ಮುಖ ಮಾಡ್ತಾರಾ ಕಾದು ನೋಡಬೇಕಿದೆ...

ಸೌಮ್ಯಶ್ರೀ
Kn_bng_03_bbmp_empty_ofc_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.