ETV Bharat / state

ಕಾಂಗ್ರೆಸ್‌ಗೆ ಹೋಗಲ್ಲ, ಕೊನೆಯ ಉಸಿರಿನವರೆಗೂ ಬಿಜೆಪಿಯಲ್ಲೇ ಇರುವೆ: ಶ್ರೀರಾಮುಲು - Sriramulu clarified

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ಪರ ಹೇಳಿಕೆ: ಸ್ಪಷ್ಟೀಕರಣ ನೀಡಿದ ಶ್ರೀರಾಮುಲು

author img

By

Published : Aug 17, 2022, 3:09 PM IST

ಬೆಂಗಳೂರು: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಕುರಿತು ಹೇಳಿಕೆ ನೀಡಿ ಕೇಸರಿ ಪಾಳಯದ ಆಕ್ರೋಶಕ್ಕೆ ಸಿಲುಕಿದ್ದ ಸಚಿವ ಬಿ. ಶ್ರೀರಾಮುಲು ತಮ್ಮ ಹೇಳಿಕೆ ಕುರಿತು ಪಕ್ಷಕ್ಕೆ ಸೃಷ್ಟೀಕರಣ ನೀಡಿದ್ದಾರೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್​​ಗೆ ಹೋಗಲ್ಲ, ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ನನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯಲ್ಲಿರುತ್ತೇನೆ ಎಂದಿದ್ದಾರೆ.

ಸಿದ್ದರಾಮಯ್ಯ ಬಿಜೆಪಿಗೆ: ರಾಜ್ಯಾಧ್ಯಕ್ಷರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮುಲು, ಸಿದ್ದರಾಮಯ್ಯ ಬಗ್ಗೆ ನೀಡಿದ್ದ ಹೇಳಿಕೆ ವಿಚಾರ ಕುರಿತು ಎಲ್ಲಾ ಸ್ಪಷ್ಟೀಕರಣವನ್ನು ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇನೆ. ದೇಶದ ಎಲ್ಲೆಡೆ ಪ್ರವಾಸ ಮಾಡಿದ್ದ ಪ್ರಧಾನಿ ಮೋದಿ ರಾಜ್ಯಕ್ಕೆ ಕೂಡ ಬಂದಿದ್ದರು. ಮೋದಿ ಬಂದಾಗ ವಿರೋಧ ಮಾಡಿದ್ದವರೂ ಈಗ ಬಿಜೆಪಿಗೆ ಬಂದಿದ್ದಾರೆ. ನಾನು ಸಮಯ ಕೊಟ್ಟಾಗ ಹಿಂದುಳಿದ ಜಾತಿಗಳು ಒಂದಾಗಬೇಕು. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸೋ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ನನ್ನ ಸಲಹೆ ಅಂದರೆ ಬೇರೆ ಬೇರೆ ಪಕ್ಷದ ವಿರೋಧಿಗಳು, ಕಾಂಗ್ರೆಸ್ ತೊರೆದು ಬಿಜೆಪಿ ಬರುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯಗೆ ಕಿರಿ ಕಿರಿ ಎದುರಾಗಿದೆ.ಅದನ್ನ ನೋಡಿದರೆ ಮುಂದೊಂದು ದಿನ ಸಿದ್ದರಾಮಯ್ಯ ಬಿಜೆಪಿಗೆ ಬರ್ತಾರೆ ಅನ್ನೋ ಮನೋಭಾವದಿಂದ ಮಾತನಾಡಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಜಗಳ ನೋಡಿ ಇಲ್ಲಿಗೆ ಬರಬಹುದು ಅಂತ ಹೇಳಿದೆ ಎಂದರು.

ಹಿಂದುಳಿದ ಜಾತಿಗಳೆಲ್ಲಾ ಒಗ್ಗೂಡಿಸಬೇಕು. ಬಿಜೆಪಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಿಸಿದೆ. ಸಿದ್ದರಾಮಯ್ಯ ಸಿಎಂ ಆಗಲಿ ಅನ್ನೋ ಹೇಳಿಕೆ ನನ್ನ ಅರ್ಥ ಅದಲ್ಲ. ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದು. ಬಿಜೆಪಿ ಎಲ್ಲಿವರೆಗೂ ಇರುತ್ತೋ, ಎಲ್ಲಿವರೆಗೂ ಮೋದಿ ಪ್ರಧಾನಿ ಇರ್ತಾರೋ ಅಲ್ಲಿವರೆಗೂ ಕಾಂಗ್ರೆಸ್ ಅವರು ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ಗೆ ಹೋಗೋಲ್ಲ: ಬಾದಾಮಿಗೆ ನಾನು ಹೋಗೋದು ತಡವಾಯಿತು, ಹಾಗಾಗಿ ಅವರು ಗೆದ್ದರು. ನಾನು ಕಾಂಗ್ರೆಸ್​​ಗೆ ಹೋಗಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ನನ್ನ ಜೀವ ಇರೋವರೆಗೂ ನಾನು ಭಾರತೀಯ ಜನತಾ ಪಾರ್ಟಿಯಲ್ಲೇ ಇರ್ತೀನಿ. ಹೊಂದಾಣಿಕೆ ರಾಜಕಾರಣ ನನ್ನ ಜಾಯಮಾನದಲ್ಲಿ ಮಾಡಿಲ್ಲ. ಎಲ್ಲರನ್ನೂ ರಾಜಕೀಯವಾಗಿ ಹೆದರಿಸಿಕೊಂಡು ರಾಜಕಾರಣ ಮಾಡಿದವನು ಎಂದು ಹೇಳಿದರು.

ಇದನ್ನೂ ಓದಿ :ಸಿದ್ಧರಾಮಯ್ಯ ಮುಂದಿನ ದಿನಗಳಲ್ಲಿ ಬಿದ್ದರಾಮಯ್ಯ ಆಗ್ತಾರೆ: ಶ್ರೀರಾಮುಲು ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.