ಬೆಂಗಳೂರು: ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ಗೆ ದೂರು ನೀಡಲಾಗಿದೆ.
![Banglore](https://etvbharatimages.akamaized.net/etvbharat/prod-images/3878061_bang.jpg)
ಬಿಜೆಪಿ ಮುಖಂಡ ಲಕ್ಷ್ಮಣ ಸವದಿಯವರು ಶ್ರೀಮಂತ ಪಾಟೀಲ್ ಅವರನ್ನು ನಿನ್ನೆ ಕಿಡ್ನಾಪ್ ಮಾಡಿದ್ದಾರೆ. ಅವರು ಇಂದು ಸದನಕ್ಕೆ ಹಾಜರಾಗಬೆಕಿತ್ತು. ಹೀಗಾಗಿ ತಕ್ಷಣ ಹುಡುಕಿಕೊಂಡುವಂತೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ಗೆ ಕಾಂಗ್ರೆಸ್ ಪಕ್ಷದ ಸೆಕ್ರೆಟರಿ ನಟರಾಜ್ ಗೌಡ ಹಾಗೂ ಕೆಲ ಕಾರ್ಯಕರ್ತರು ದೂರು ನೀಡಿದ್ದಾರೆ.