ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಜೈಲಿನಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಜೈಲಿನ ಅಧಿಕಾರಿಗಳು ಹಾಗೂ ನೂರಾರು ಕೈದಿಗಳು ಪಾಲ್ಗೊಂಡ್ರು. ಕೃಷ್ಣನ ವೇಷ ಧರಿಸಿ ಕೆಲ ಜೈಲುಹಕ್ಕಿಗಳು ಸಂಭ್ರಮಿಸಿದ್ರು.
ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೂತನ ಕಾರ್ಯಕ್ರಮಗಳು ನಡೆಯುತ್ತಿದ್ದು, ಕೈದಿಗಳ ಮನಪರಿವರ್ತನೆಗಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಹಿಂದೆ ಜೈಲಿನ ಸಿಬ್ಬಂದಿಗೆ ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಗುರೂಜಿ ಆಶ್ರಮದ ವತಿಯಿಂದ ಹಲವು ದಿನಗಳ ಕಾಲ ಯೋಗಾ ತರಬೇತಿ ನೀಡಲಾಗಿತ್ತು. ಆ ನಂತರ ಜೈಲಿನ ಸಿಬ್ಬಂದಿ, ಕೈದಿಗಳಿಗೆ ಹತ್ತು ದಿನಗಳ ಕಾಲ ಯೋಗಾ ತರಬೇತಿ ನೀಡಿದರು.
ಆಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ಸೆಂಟ್ರಲ್ ಜೈಲಿನ ಸಜಾಬಂಧಿಗಳಿಗೆ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆಗೆ ನಿಮಿತ್ತ ಸೆಂಟ್ರಲ್ ಜೈಲಿನಲ್ಲಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿ, ಚಿತ್ರಕಲೆ, ಗಾಯನ ಸೇರಿದಂತೆ ಪ್ರತಿಭಾಕಾರಂಜಿ ಸ್ಪರ್ಧೆಗಳನ್ನ ಏರ್ಪಡಿಸಲಾಗಿತ್ತು.
ಇದನ್ನೂ ಓದಿ:COVID: 2ನೇ ಅಲೆಯಲ್ಲಿ ಮೊದಲ ಬಾರಿಗೆ ಗಣನೀಯ ಇಳಿಕೆ ಕಂಡ ಸೋಂಕಿತರ ಸಂಖ್ಯೆ