ETV Bharat / state

ಲಂಕಾ ದುರಂತ: ಬೆಂಗಳೂರಿಗೆ ಆಗಮಿಸಿದ ಮೃತದೇಹಗಳು... ಅಂತಿಮ ದರ್ಶನ ಪಡೆದ ಹೆಚ್​ಡಿಕೆ-ಹೆಚ್​ಡಿಡಿ - ಮೃತದೇಹ

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ನೆಲಮಂಗಲದ 7 ಜೆಡಿಎಸ್ ಮುಖಂಡರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ನೆಲಮಂಗಲ ಟೌನ್ ನಿವಾಸಿಗಳಾದ ಮೃತ ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾಡಲಾಗಿತ್ತು.

ಅಂತಿಮ ದರ್ಶನ
author img

By

Published : Apr 24, 2019, 4:37 PM IST

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದ ರಾಜ್ಯದ ಎಂಟು ಜನರ ಮೃತದೇಹಗಳು ಕೊಲಂಬೊದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.

ನಂತರ ವಿಮಾನ ನಿಲ್ದಾಣದಿಂದ ಮೃತದೇಹಗಳನ್ನು ಮೃತರ ಸ್ವಗ್ರಾಮಗಳಿಗೆ ಜೀರೊ ಟ್ರಾಫಿಕ್ ಮೂಲಕ ತೆಗೆದುಕೊಂಡು ಹೋಗಲಾಯಿತು. ನಿನ್ನೆ ರಾತ್ರಿ ನಾಗರಾಜ್ ರೆಡ್ಡಿ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬರಲಾಗಿತ್ತು. ಇನ್ನು ಇಂದು ಬೆಳಗ್ಗೆ 2 ಗಂಟೆಗೆ 4 ಪಾರ್ಥಿವ ಶರೀರಗಳನ್ನು ಕೆಐಎಎಲ್​ಗೆ ತೆಗೆದುಕೊಂಡು ಬರಲಾಗಿತ್ತು. ಇದೀಗ ಮೂರು ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಕೆಐಎಎಲ್​ಗೆ ತೆಗೆದುಕೊಂಡು ಬರಲಾಗಿದೆ.

ಲಂಕಾ ದುರಂತ... ಬೆಂಗಳೂರಿಗೆ ಆಗಮಿಸಿದ ಮೃತ ದೇಹಗಳು

ತುಮಕೂರು ನಿವಾಸಿ ರಮೇಶ್ ಅಡಕಮಾರನಹಳ್ಳಿ ಮಾರೇಗೌಡ ಮತ್ತು ಹಾರೋ ಕ್ಯಾತನಹಳ್ಳಿ ಪುಟ್ಟರಾಜು ಅವರ ಮೃತದೇಹವನ್ನು ಕೆಐಎಎಲ್​ನಿಂದ ಆಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ರವಾನೆ ಮಾಡಲಾಯಿತು.

ಅಂತಿಮ ದರ್ಶನ ಪಡೆದ ಹೆಚ್​ಡಿಕೆ ಮತ್ತು ಹೆಚ್​ಡಿಡಿ:

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಜೆಡಿಎಸ್ ಮುಖಂಡರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪಡೆದರು.

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ನೆಲಮಂಗಲದ 7 ಜೆಡಿಎಸ್ ಮುಖಂಡರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ನೆಲಮಂಗಲ ಟೌನ್ ನಿವಾಸಿಗಳಾದ ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್ ಅವರ ಅಂತಿಮ ದರ್ಶನದ ವ್ಯವಸ್ಥೆಯನ್ನು ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾಡಲಾಗಿತ್ತು.

ಮೃತ ಜೆಡಿಎಸ್ ಮುಖಂಡರ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಆಗಮಿಸಿದರು. ಮೃತದೇಹಕ್ಕೆ ಹೂಗುಚ್ಛ ಇಟ್ಟು ಮುಖಮಂತ್ರಿಗಳು ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅಂತಿಮ ನಮನ ಸಲ್ಲಿಸಿದರು.

ಅಂತಿಮ ದರ್ಶನ ಪಡೆದ ಎಂಟಿಬಿ ನಾಗರಾಜ್:

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಜೆಡಿಎಸ್ ಮುಖಂಡರ ಅಂತಿಮ ದರ್ಶನವನ್ನು ಪಡೆದ ವಸತಿ ಸಚಿವ ಎಂಟಿಬಿ ನಾಗರಾಜ್, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಮಾತನಾಡಿದ ವಸತಿ ಸಚಿವ ಎಂಟಿಬಿ ನಾಗರಾಜ್, ಈ ದುರಂತ ಸಾವು ಮಾನಸಿಕವಾಗಿ ನೋವು ತಂದಿದೆ. ಚುನಾವಣೆ ಮುಗಿಸಿ ವಿಶ್ರಾಂತಿ ಪಡೆಯಲು ತೆರಳಿದ್ದವರು ದುರಂತವಾಗಿ ಸಾವನ್ನಪ್ಪಿದ್ದಾರೆ. ಇವರೆಲ್ಲರ ಸಾವು ಪಕ್ಷಕ್ಕೆ ಮತ್ತು ಕುಟುಂಬದವರಿಗೆ ತುಂಬಲಾರದ ನೋವುಂಟುಮಾಡಿದೆ. ಇಂತಹ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕೆಂದರು. ದೇವರು ಮೃತರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದರು.

ಮುಗಿಲು ಮುಟ್ಟಿದ ಆಕ್ರಂದನ:

ಮೃತ ದೇಹಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು‌ ಮುಟ್ಟಿತ್ತು.

Intro:ಮೃತರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ವರಿಷ್ಠ ದೇವೇಗೌಡBody:ನೆಲಮಂಗಲ : ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಜೆಡಿಎಸ್ ಮುಖಂಡರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಪಡೆದರು.

ಶ್ರೀಲಂಕಾಕ್ಕೆ ಪ್ರವಾಸ ತೆರಳಿದ ನೆಲಮಂಗಲದ 7 ಜೆಡಿಎಸ್ ಮುಖಂಡರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು. ನೆಲಮಂಗಲ ಟೌನ್ ನಿವಾಸಿಗಳಾದ ಮೃತ ಲಕ್ಷ್ಮೀನಾರಾಯಣ ಮತ್ತು ಶಿವಕುಮಾರ್ ಅಂತಿಮ ದರ್ಶನದ ವ್ಯವಸ್ಥೆಯನ್ನು ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಮೃತ ಜೆಡಿಎಸ್ ಮುಖಂಡರ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಆಗಮಿಸಿದರು. ಮೃತದೇಹಕ್ಕೆ ಹೂಗುಚ್ಚ ಇಟ್ಟು ಮುಖಮಂತ್ರಿಗಳು ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅಂತಿಮ ನಮನ ಸಲ್ಲಿಸಿದರು.

ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ. ನಾಲ್ವರ ಮೃತದೇಹಗಳು ಬಂದಿವೆ ,ಇನ್ನೂ ಮೂರು ಮೃತದೇಹಗಳು ಬರಬೇಕಿದೆ.
ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದು ದುರದೃಷ್ಟಕರ. ಎಲ್ಲಾ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟಬೇಕಿದೆ.
ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಮೃತ ನೆಲಮಂಗಲದ ಏಳು ಜನ ಪಕ್ಷದ ಆಧಾರಸ್ತಂಭವಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿಯೆಂದು ಹೇಳಿದರು.

ಮೃತರ ಅಂತಿಮ ದರ್ಶನ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಎಂಟಿಬಿ ನಾಗರಾಜ್.

ನೆಲಮಂಗಲ : ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನೆಲಮಂಗಲದ ಜೆಡಿಎಸ್ ಮುಖಂಡರ ಅಂತಿಮ ದರ್ಶನವನ್ನು ಪಡೆದ ವಸತಿ ಸಚಿವ ಎಂಟಿಬಿ ನಾಗರಾಜ್ ಮೃತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತ ಪಟ್ಟ ನೆಲಮಂಗಲ ನಿವಾಸಿಗಳು ಜೆಡಿಎಸ್ ಮುಖಂಡರಾದ ಮೃತ ಶಿವಕುಮಾರ್ ಮತ್ತು ಲಕ್ಷ್ಮಿ ನಾರಾಯಣ ಅಂತಿಮ ದರ್ಶನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಎಂಟಿಬಿ ನಾಗರಾಜ್ ಪಡೆದರು. ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು . ವಸತಿ ಸಚಿವರು ಕ್ರೀಡಾಂಗಣಕ್ಕೆ ಮೃತರ ಅಂತಿಮ ದರ್ಶನ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು

ಇದೇ ವೇಳೆ ಮಾತನಾಡಿದ ವಸತಿ ಸಚಿವ ಎಂಟಿಬಿ ನಾಗರಾಜ್. ಈ ದುರಂತ ಸಾವು ಮಾನಸಿಕ ನೋವು ತಂದಿದೆ, ಚುನಾವಣೆ ಮುಗಿಸಿ ವಿಶ್ರಾಂತಿ ಪಡೆಯಲು ತೆರಳಿದ್ದವರು ದುರಂತವಾಗಿ ಸಾವನ್ನಪ್ಪಿದ್ದಾರೆ.ಇವರೆಲ್ಲರ ಸಾವು ಪಕ್ಷಕ್ಕೆ ಮತ್ತು ಕುಟುಂಬದವರಿಗೆ ತುಂಬಲಾರದ ನೋವುಂಟುಮಾಡಿದೆ.ಇಂತಹ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕೆಂದರು.
ದೇವರು ಮೃತರ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದರು

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.