ETV Bharat / state

ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ: ಕ್ರೀಡಾ ಸಚಿವ ನಾರಾಯಣಗೌಡ - Sports Minister Narayana Gowda

ಕರ್ನಾಟಕದಲ್ಲಿ ಅಥ್ಲೆಟಿಕ್ ಮತ್ತು ಈಜು ವಿಭಾಗದಲ್ಲಿ ಉಜ್ವಲ ಭವಿಷ್ಯ ಇದೆ. ಹೀಗಾಗಿ, ಆ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತೇವೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

sports-minister-narayana-gowda
ಕ್ರೀಡಾ ಸಚಿವ ನಾರಾಯಣಗೌಡ
author img

By

Published : Aug 13, 2021, 5:52 PM IST

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡುತ್ತೇವೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದರು.

ಖಾಸಗಿ ಹೊಟೇಲ್​ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ‌ಮಾತನಾಡಿದರು. ಗುಜರಾತ್​ನಲ್ಲಿ ಇರುವ ಕ್ರೀಡಾಂಗಣ ನೋಡಲು ಶೀಘ್ರವೇ ನಿಯೋಗ ಹೋಗಲಿದೆ. ಅದೇ ಮಾದರಿಯಲ್ಲಿ ಕಂಠೀರವ ಕ್ರೀಡಾಂಗಣ ರೆಡಿ ಮಾಡುತ್ತೇವೆ. ಇನ್ನು ಮುಂದೆ ಬೇರೆ ಕ್ರೀಡೆಗಳಿಗೆ ಕಂಠೀರವ ಕ್ರೀಡಾಂಗಣ ಬಾಡಿಗೆಗೆ ಕೊಡುವುದಿಲ್ಲ ಎಂದರು.

ಕರ್ನಾಟಕದಲ್ಲಿ ಅಥ್ಲೆಟಿಕ್ ಮತ್ತು ಈಜು ವಿಭಾಗದಲ್ಲಿ ಉಜ್ವಲ ಭವಿಷ್ಯ ಇದೆ. ಹೀಗಾಗಿ, ಆ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತೇವೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇರೋದು ನಿಜ. ಖಾಲಿ ಹುದ್ದೆ ಶೀಘ್ರವೇ ತುಂಬುವಂತೆ ಶಿಕ್ಷಣ ಇಲಾಖೆ ಜೊತೆ ಚರ್ಚೆ ಮಾಡಲಾಗಿದೆ. ಪ್ರತಿ ತಾಲೂಕಿನಲ್ಲೂ ಕ್ರೀಡಾಂಗಣ ಸ್ಥಾಪನೆಗೆ ಒತ್ತು ಕೊಡಲಾಗಿದೆ. ಪಿಪಿಇ ಮಾದರಿಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.

ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2021 ಮಾರ್ಚ್ 5, 2022 ರಿಂದ 12 ದಿನಗಳ ಕಾಲ ಕರ್ನಾಟಕದಲ್ಲಿ ನಡೆಯಲಿದೆ. ದೇಶದ ಎಲ್ಲ ವಿವಿಗಳಿಂದ 20 ಕ್ರೀಡೆಗಳ 7000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ. ಪ್ರಧಾನಿಗಳು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ ಎಂದರು.

ಕ್ರೀಡಾ ಸಚಿವ ನಾರಾಯಣಗೌಡ

ಮಿಷನ್ ಒಲಿಂಪಿಕ್ ಯೋಜನೆ ಘೋಷಣೆ: ಪ್ಯಾರಿಸ್​ನಲ್ಲಿ ನಡೆಯುವ 2024 ರ ಒಲಿಂಪಿಕ್​ಗೆ 100 ಜನ ಕರ್ನಾಟಕದವರನ್ನ ಕಳುಹಿಸುವ ಗುರಿ ಇದೆ ಎಂದು ತಿಳಿಸಿದರು.

3 ಸಾವಿರ ಸೈಕಲ್‌ ಯಾನ: ಈಗಾಗಲೇ 35 ಕ್ರೀಡಾ ಪಟುಗಳನ್ನ ಗುರುತಿಸಲಾಗಿದೆ. ಈ ಕ್ರೀಡಾಪಟುಗಳಿಗೆ 5 ಲಕ್ಷ ಪ್ರೊತ್ಸಾಹ ಧನ ನೀಡಲಾಗುತ್ತದೆ. ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಶಿಖರದಿಂದ ಸಾಗರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಿಂದ 5 ಯುವತಿಯರು, ಕಾಶ್ಮೀರದಿಂದ ಒಂದು ಕೊಲ್ಹೋಯ್ ಪರ್ವತ ಹತ್ತುವ ಮೂಲಕ 3 ಸಾವಿರ ಸೈಕಲ್‌ ಯಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಕ್ಕೂರು ವೈಮಾನಿಕ ತರಬೇತಿ: ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಹೊಸ ಕಾಯಕಲ್ಪ ಕೊಡುತ್ತೇವೆ. 4 ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸೆಪ್ಟೆಂಬರ್​​​ನಲ್ಲಿ ಪುನರ್ ಆರಂಭವಾಗಲಿದೆ. ವಾರ್ಷಿಕ 100 ಪೈಲೆಟ್ ತರಬೇತಿ ನೀಡುವ ಕೆಲಸ ಮಾಡುತ್ತೇವೆ. ಪಿಪಿಇ ಮಾದರಿಯಲ್ಲಿ ಜಕ್ಕೂರು ವೈಮಾನಿಕ ತರಬೇತಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಖಾಸಗಿ ಕಂಪನಿಗಳಿಂದ ಬಾಡಿಗೆ ಈಗ ವಸೂಲಿ ಮಾಡಲಾಗ್ತಿದೆ. ಬಾಡಿಗೆ ನೀಡದ ಕಂಪನಿಗಳ ಚಟುವಟಿಕೆಗಳನ್ನ ನಿಷೇಧ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಪೈಲೆಟ್ ತರಬೇತಿ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ2ರಷ್ಟು ಮೀಸಲಾತಿ ಘೋಷಣೆ ಮಾಡಲಾಗಿದೆ. 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪನೆ ಮಾಡಲಾಗುತ್ತದೆ‌. ಕಂಠೀರವ ಕ್ರೀಡಾಂಗಣದಲ್ಲಿ 4.50 ಕೋಟಿ, ಚಿಕ್ಕಮಗಳೂರು, ಹಾಸನದಲ್ಲಿ 7.50 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ. ಮಂಡ್ಯ ಕ್ರೀಡಾಂಗಣ, ಕೋರಮಂಗಲ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

ಒಲಿಂಪಿಕ್ಸ್ ವೀರರಿಗೆ ಗೌರವ: ಒಲಿಂಪಿಕ್ಸ್​ನಲ್ಲಿ ಪದಕ‌ ಗೆದ್ದ ಕ್ರೀಡಾಪಟುಗಳನ್ನು ರಾಜ್ಯಕ್ಕೆ ಕರೆಸಿ, ಗೌರವ ಸಲ್ಲಿಸಲಾಗುತ್ತದೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇವೆ. ಅಂದು ಅವರನ್ನು ರಾಜ್ಯ ಸರ್ಕಾರ ಅಭಿನಂದಿಸಲಿದೆ ಎಂದು ತಿಳಿಸಿದರು.

ಓದಿ: ಸಿ ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.