ಕೇಂದ್ರ ಯುವ ಮತ್ತು ಕ್ರೀಡಾ ಇಲಾಖೆಯ ಸ್ವಾಯುತ್ತ ಸಂಸ್ಥೆಯಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಿವಿಧ ಪದವೀಧರ ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬೆಂಗಳೂರಿನಲ್ಲಿ ಖಾಲಿ ಇರುವ ಯಂಗ್ ಪ್ರೋಫೆಷನಲ್ ಮತ್ತು ಜ್ಯೂನಿಯರ್ ಕನ್ಸಲಟೆಂಟ್ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಯಂಗ್ ಪ್ರೊಫೆಷನಲ್ (ಪಿಅಂಡ್ಎ) 1, ಯಂಗ್ ಪ್ರೊಫೆಷನಲ್ (ಎಆರ್ಎಂ) 2, ಜ್ಯೂನಿಯರ್ ಕನ್ಸಲಂಟೆಂಟ್ (ಪಿಎಂ) 1 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಯಂಗ್ ಪ್ರೊಫೆಷನಲ್ (ಪಿಅಂಡ್ಎ)- ಬಿಟೆಕ್, ಎಂಬಿಎ, ಪಿಜಿಡಿಎಂ
ಯಂಗ್ ಪ್ರೊಫೆಷನಲ್ (ಎಆರ್ಎಂ)- ಪದವಿ, ಎಂಬಿಎ, ಪಿಜಿಡಿಎಂ
ಜ್ಯೂನಿಯರ್ ಕನ್ಸಲಂಟೆಂಟ್ (ಪಿಎಂ)- ಸಿಎ, ಎಲ್ಎಲ್ಬಿ, ಬಿಇ ಅಥವಾ ಬಿಟೆಕ್, ಎಂಬಿಬಿಎಸ್
ಅನುಭವ: ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯ ವಿವಿಧ ಮಧ್ಯಸ್ಥಗಾರರೊಂದಿಗೆ ಸಂಪರ್ಕ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರಗಳು ಸೇರಿದಂತೆ, ಖಾಸಗಿ ಅಕಾಡೆಮಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ಕಾರ್ಯ ನಿರ್ವಹಣೆ ಸೇರಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಒಂದು ಅಥವಾ ಎರಡು ವರ್ಷದ ಅನುಭವವನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಕಗೆ ಗರಿಷ್ಠ ವಯೋಮತಿ 40 ವರ್ಷ ಆಗಿದೆ.
ವೇತನ: ಯಂಗ್ ಪ್ರೊಫೆಷನಲ್ (ಪಿಅಂಡ್ಎ), ಯಂಗ್ ಪ್ರೊಫೆಷನಲ್ (ಎಆರ್ಎಂ) ಹುದ್ದೆಗೆ 50,000 ದಿಂದ 70,000 ಮತ್ತು ಜ್ಯೂನಿಯರ್ ಕನ್ಸಲಂಟೆಂಟ್ (ಪಿಎಂ) 80,250-1,00,000 ವೇತನ ನಿಗದಿ ಪಡಿಸಲಾಗಿದೆ.
ಹುದ್ದೆ ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಹುದ್ದೆ ಅನುಭವ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಹುದ್ದೆಗಳಿಗೆ ಅಭ್ಯರ್ಥಿಗಳು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ ನಿಗದಿತ ಅರ್ಜಿಯನ್ನು ನೀಡಲಾಗಿದ್ದು, ಈ ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ರೆಸ್ಯೂಮ್ ಅನ್ನು ಈ ವಿಳಾಸಕ್ಕೆ ಜುಲೈ 19ಕ್ಕೆ ಸಲ್ಲಿಸಬಹುದಾಗಿದೆ. ಇಮೇಲ್ ವಿಳಾಸ: jobs.saibangalore@gmail.com
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕೃತ ಜಾಲತಾಣ sportsauthorityofindia.nic.in ಕ್ಕೆ ಭೇಟಿ ನೀಡಬಹುದಾಗಿದೆ.
ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿ:
ಈ ಹುದ್ದೆ ಅಧಿಸೂಚನೆಗೆ ಮುನ್ನ ಭಾರತೀಯ ಕ್ರೀಡಾ ಪ್ರಾಧಿಕಾರ ಇಡೀ ದೇಶಾದ್ಯಂತ ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 25 ಹುದ್ದೆಗಳ ನೇಮಕಾತಿ ನಡೆಸಲಾಗುವುದು. 35 ವರ್ಷ ವಯಸ್ಸು ಮೀರಿರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರ ಲೋಕಸೇವಾ ಆಯೋಗ 2022ರಲ್ಲಿ ನಡೆಸಿದ ನಾಗರೀಕ ಸೇವಾ ಪರೀಕ್ಷೆಯ ಸಂದರ್ಶನದಲ್ಲಿ ಭಾಗಿಯಾದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಕ್ರೀಡಾ ಪ್ರಾಧಿಕಾರದ ಗ್ರೂಪ್ ಎ ಪೋಸ್ಟ್ಗಳು ಇದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 4 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕೃತ ಜಾಲತಾಣ sportsauthorityofindia.nic.in ಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Air Force Recruitment: ಭಾರತೀಯ ವಾಯುಪಡೆಯಲ್ಲಿ ನೇಮಕಾತಿ.. ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಹಾಕಿ