ಬೆಂಗಳೂರು: ಸಿಲಿಕಾನ್ ಸಿಟಿ ನಾಗರಿಕರೇ ನಾನ್‌ವೆಜ್ ಚಪ್ಪರಿಸುವ ಮುನ್ನ ಎಚ್ಚರದಿಂದಿರಿ. ಯಾಕೆಂದರೆ ನೀವು ತಿನ್ನೋ ಮೇಕೆ ಮಾಂಸ ಯೋಗ್ಯವಲ್ಲದ್ದು ಇರಬಹುದು.
ಹೌದು, ಅನುಮತಿಯಿಲ್ಲದೇ ಮೇಕೆ ಮಾಂಸ ರಾಷ್ಟ್ರ ರಾಜಧಾನಿಯಿಂದ ರೈಲಿನ ಮೂಲಕ ನಗರಕ್ಕೆ ಸರಬರಾಜು ಆಗುತ್ತಿದೆ. ಅನುಮತಿಯಿಲ್ಲದೇ ದೆಹಲಿಯಿಂದ ಕಂಟೈನರ್ ಮೂಲಕ ನಗರದ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿರುವುದು ಪರಿಶೀಲನೆ ವೇಳೆ ರೈಲ್ವೆ ಪೊಲೀಸರು ಕಂಡುಕೊಂಡಿದ್ದಾರೆ.
ರೈಲು ಇಲಾಖೆಗೆ ಮೀನು ಎಂದು ಕಂಟೈನರ್ಗಳಲ್ಲಿ ಬರೆದುಕೊಳ್ಳಲಾಗುತ್ತೆ. ವಾಸ್ತವ ಪರಿಶೀಲಿಸಿದಾಗ ಮೂಟೆಗಳಲ್ಲಿ ತಲೆ, ಕಾಲಿನ ಮಾಂಸ ಇರುವುದು ಪತ್ತೆಯಾಗಿದೆ. ವಿವಿಧ ಕಾರಣಗಳಿಂದಾಗಿ ದೆಹಲಿಯಲ್ಲಿ ಮಾಂಸ ಮಾರಾಟ ಕುಸಿದಿದೆ. ಮಾಂಸ ಪೂರೈಕೆ ಹೆಚ್ಚಾದ ಹಿನ್ನೆಲೆಯಲ್ಲಿ ರೈಲುಗಳ ಮೂಲಕ ತಲೆ ಹಾಗೂ ಕಾಲುಗಳನ್ನು ಸರಬರಾಜು ಮಾಡುತ್ತಿದ್ದು, ನಗರದ ಹೋಟೆಲ್ಗಳಿಗೆ ಸಪ್ಲೈ ಆಗಲಿದೆ ಎಂದು ಹೇಳಲಾಗುತ್ತಿದೆ.
ತಾಜಾ ಇರುವ ಮಾಂಸ ಮಾತ್ರ ಗ್ರಾಹಕರಿಗೆ ಕೊಡಬೇಕು. ಈ ರೀತಿಯಾಗಿ ಅಕ್ರಮವಾಗಿ ಮಾಂಸ ಸರಬರಾಜು ಮಾಡೋದು ಎಷ್ಟು ಸರಿ. ಸಪ್ಲೈ ಆಗಿರುವ ಮಾಂಸ ಎಷ್ಟು ದಿನದ್ದು ಎಂಬುದರ ಬಗ್ಗೆ ರೈಲ್ವೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.