ETV Bharat / state

ವಿಶೇಷ ಪೂಜೆಯೊಂದಿಗೆ ಶ್ರೀರಾಮುಲು ಸರ್ಕಾರಿ ಗೃಹ ಪ್ರವೇಶ; ಅಚ್ಚರಿ ಮೂಡಿಸಿದ ವಿಶೇಷ ಅತಿಥಿ! - ಅನರ್ಹ ಶಾಸಕ ಬಿಸಿ ಪಾಟೀಲ್

ಆರೋಗ್ಯ ಸಚಿವ ಶ್ರೀರಾಮುಲು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ವಸತಿ ಗೃಹವನ್ನು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಪ್ರವೇಶಿಸಿದರು.

ಆರೋಗ್ಯ ಸಚಿವರಿಂದ ಸರ್ಕಾರಿ ನಿವಾಸದ ವಿಶೇಷ ಪೂಜೆ
author img

By

Published : Oct 3, 2019, 8:21 PM IST

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ವಸತಿ ಗೃಹವನ್ನು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಪ್ರವೇಶಿಸಿದರು.

ಸಪ್ತ ಸಚಿವರ ನಿವಾಸ (ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್)ನ 6 ನೇ ಸಂಖ್ಯೆಯ ಮನೆಗೆ ಪ್ರವೇಶಿಸಿದ್ದು, ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಕಳೆದ ವಾರ ನಿವಾಸವನ್ನು ತೆರವುಗೊಳಿಸಿದ್ದರು. ಇದಾದ ಬಳಿಕ ಸರ್ಕಾರದಿಂದ ತಮಗೆ ಹಂಚಿಕೆಯಾದ ನಿವಾಸಕ್ಕೆ ಶ್ರೀರಾಮುಲು ಪ್ರವೇಶಿಸಿದ್ದಾರೆ.

ಆರೋಗ್ಯ ಸಚಿವರಿಂದ ಸರ್ಕಾರಿ ನಿವಾಸದ ವಿಶೇಷ ಪೂಜೆ

9.30 ರಿಂದ 10ರ ಸಮಯದಲ್ಲಿ ನಿವಾಸ ಪ್ರವೇಶಿಸಬೇಕಿದ್ದ ಶ್ರೀರಾಮುಲು ಕೊಂಚ ತಡವಾಗಿ ಆಗಮಿಸಿ ಅವಸರವಸರವಾಗಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ಈ ಸಂದರ್ಭ ಸಚಿವರ ಆಪ್ತರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

ಅಚ್ಚರಿ ಮೂಡಿಸಿದ ಬಿಸಿ ಪಾಟೀಲ್

ಶ್ರೀರಾಮುಲು ಸರ್ಕಾರಿ ನಿವಾಸ ಪ್ರವೇಶ ಸಮಾರಂಭಕ್ಕೆ ಆಗಮಿಸುವ ಮೂಲಕ ಹಿರೇಕೆರೂರು ಅನರ್ಹ ಶಾಸಕ ಬಿಸಿ ಪಾಟೀಲ್ ಅಚ್ಚರಿ ಮೂಡಿಸಿದರು. ನಿವಾಸ ಪ್ರವೇಶ ಸಮಯಕ್ಕೆ ಸರಿಯಾಗಿ ಆಗಮಿಸಿ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಸಚಿವರ ಜೊತೆ ಮನೆಯ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು ನಂತರ ಅಲ್ಲಿಂದ ತೆರಳಿದರು.

Intro:newsBody:ಆರೋಗ್ಯ ಸಚಿವರಿಂದ ಸರ್ಕಾರಿ ನಿವಾಸ ಗೃಹಪ್ರವೇಶ, ಶುಭಕೋರಿ ತೆರಳಿದ ಬಿಸಿ ಪಾಟೀಲ್

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ವಸತಿ ಗೃಹವನ್ನು ಪ್ರವೇಶಿಸಿದರು. ವಿಶೇಷ ಪೂಜೆ ಸಲ್ಲಿಸಿ, ಹೊಸ ಮನೆಗೆ ಕಾಲಿಟ್ಟರು.
ಸಪ್ತ ಸಚಿವರ ನಿವಾಸ (ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್)ದ 6 ನೇ ಸಂಖ್ಯೆಯ ಮನೆಗೆ ಪ್ರವೇಶಿಸಿದ್ದು, ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಕಳೆದವಾರ ನಿವಾಸವನ್ನು ತೆರವುಗೊಳಿಸಿದ್ದರು. ಇದಾದ ಬಳಿಕ ಸರ್ಕಾರದಿಂದ ತಮಗೆ ಹಂಚಿಕೆಯಾದ ನಿವಾಸಕ್ಕೆ ಶ್ರೀರಾಮುಲು ಇಂದು ಪ್ರವೇಶಿಸಿದರು.
9.30 ರಿಂದ 10ರ ಸಮಯದಲ್ಲಿ ನಿವಾಸ ಪ್ರವೇಶಿಸಬೇಕಿದೆ ಶ್ರೀರಾಮುಲು ಕೊಂಚ ತಡವಾಗಿ ಆಗಮಿಸಿ ಅವಸರವಸರವಾಗಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ನಿವಾಸ ಪ್ರವೇಶ ಸಮಾರಂಭ ಸಂದರ್ಭ ಶ್ರೀರಾಮುಲು ಅವರ ಆಪ್ತರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದೇ ಸಂದರ್ಭ ಹಾಜರಿದ್ದರು.
ಆಗಮಿಸಿ ಅಚ್ಚರಿ ಮೂಡಿಸಿದ ಬಿಸಿ ಪಾಟೀಲ್
ಶ್ರೀರಾಮುಲು ಸರ್ಕಾರಿ ನಿವಾಸ ಪ್ರವೇಶ ಸಮಾರಂಭಕ್ಕೆ ಆಗಮಿಸುವ ಮೂಲಕ ಹಿರೇಕೆರೂರು ಅನರ್ಹ ಶಾಸಕ ಬಿಸಿ ಪಾಟೀಲ್ ಅಚ್ಚರಿ ಮೂಡಿಸಿದರು. ನಿವಾಸ ಪ್ರವೇಶ ಸಮಯಕ್ಕೆ ಸರಿಯಾಗಿ ಆಗಮಿಸಿ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಶ್ರೀರಾಮುಲು ಜೊತೆ ಮನೆಯ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ನಂತರ ಅಲ್ಲಿಂದ ತೆರಳಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.