ಬೆಂಗಳೂರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿ ನಗರದ ಕೆ.ಪಿ ಅಗ್ರಹಾರದಲ್ಲಿ ಬೆಳ್ಳಂಬೆಳಗ್ಗೆ ನಿವಾಸಿಗಳು ಕುರಿ ಮತ್ತು ಕೋಳಿ ಬಲಿಕೊಟ್ಟಿದ್ದಾರೆ.
ಕೆ.ಪಿ ಅಗ್ರಹಾರ ಬಡಾವಣೆಯ 16 ನೇ ಕ್ರಾಸ್, 6 ನೇ ಕ್ರಾಸ್, 17 ನೇ ಕ್ರಾಸ್,13 ನೇ ಕ್ರಾಸ್ ಸೇರಿ ಹಲವು ಕಡೆಗಳಲ್ಲಿ ಜನರು ಏಕಕಕಾಲಕ್ಕೆ ಪೂಜೆ ಸಲ್ಲಿಸಿದ್ದಾರೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪನೆ ಮಾಡಿದ್ದು ಬೀದಿಗಳಲ್ಲಿ ರಂಗೋಲಿ ಇಟ್ಟು ಕೊರೊನಾ ತೊಲಗುವಂತೆ ಪ್ರಾರ್ಥಿಸಿದರು.