ETV Bharat / state

ಬನ್, ಚಾಕೊಲೇಟ್ ಅಷ್ಟೇ ಏಕೆ ಕೊತ್ತಂಬರಿ ಸೊಪ್ಪಲ್ಲೂ ಕಂಗೊಳಿಸುವ ಗಣಪ... ಈ ದೇಗುಲದ ಅಲಂಕಾರವೇ ವಿಭಿನ್ನ! - Special decoration for Ganapathy

ನವರಾತ್ರಿ ಪ್ರಯುಕ್ತ ಮಾಗಡಿ ರಸ್ತೆಯ 8ನೇ ಕ್ರಾಸ್​ನ ಭುವನೇಶ್ವರಿ ನಗರದ ಪ್ರಸನ್ನ ಮಹಾ ಗಣಪತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Ganesha
ಗಣಪತಿ
author img

By

Published : Oct 24, 2020, 8:58 PM IST

ಬೆಂಗಳೂರು: ಮೋದಕ ಪ್ರಿಯ, ಕಡುಬು‌ ಸೇವಕ ಎಂದೆಲ್ಲ ಕರೆಯುವ ಗಣಪನಿಗೆ ಈ ದೇಗುಲದಲ್ಲಿ ಪ್ರತಿ ವರ್ಷ ನವರಾತ್ರಿಯ ಸಮಯ ನಿತ್ಯ ಸೇವಿಸುವ ಆಹಾರಗಳ ಮೂಲಕವೇ ಅಲಂಕಾರ ಮಾಡಲಾಗುತ್ತಿದೆ.

ಮಾಗಡಿ ರಸ್ತೆಯ 8 ನೇ ಕ್ರಾಸ್​ನ ಭುವನೇಶ್ವರಿ ನಗರದ ಪ್ರಸನ್ನ ಮಹಾ ಗಣಪತಿ ದೇಗುಲದಲ್ಲಿ ಕಳೆದ 7-8 ವರ್ಷಗಳಿಂದ ವಿಶೇಷ, ವಿಶಿಷ್ಟ ರೀತಿಯಲ್ಲಿ ವಿನಾಯಕನಿಗೆ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ.‌

ಗಣಪತಿಗೆ ವಿಶೇಷ ಅಲಂಕಾರ

ಈ ಬಾರಿ ಕೊತ್ತಂಬರಿ - ಕರಿಬೇವಿನ ಸೊಪ್ಪಿನ‌ ಅಲಂಕಾರ, ಬನ್ ಅಲಂಕಾರ, ಚಾಕೊಲೇಟ್ ಅಲಂಕಾರ, ಚಾಮುಂಡೇಶ್ವರಿ ಅಲಂಕಾರ, 48 ವಿವಿಧ ಹೂಗಳ ಅಲಂಕಾರ, ಹಣ್ಣುಗಳ ಅಲಂಕಾರವನ್ನು ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಈ ಕುರಿತು ದೇಗುಲದ ಪ್ರಧಾನ ಅರ್ಚಕರಾದ ಕೆ.ನರಸಿಂಹಮೂರ್ತಿಶಾಸ್ತ್ರಿ ಮಾಹಿತಿ ನೀಡಿದ್ದು, ದೇವರು ಅಲಂಕಾರ- ಅಭಿಷೇಕ ಪ್ರಿಯ, ದೇವರನ್ನು ಭಯ- ಭಕ್ತಿ, ಶ್ರದ್ಧೆಯಷ್ಟೇ ಸಂತಸದಿಂದ ಕಾಣಬೇಕು, ಧ್ಯಾನಿಸಬೇಕು. ಭಕ್ತರ ಇಚ್ಛೆಯ ಮೇರೆಗೆ ಅಲಂಕಾರಗಳನ್ನು ಮಾಡಲಾಗುತ್ತಿದೆ. ಗಣೇಶ ಚತುರ್ಥಿ ಹಾಗೂ ನವರಾತ್ರಿ ವೇಳೆಯಲ್ಲಿ ಮಹಾಗಣಪತಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಪೂಜಿಸಲಾಗುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.