ಬೆಂಗಳೂರು: ಸಾರಿಗೆ ನಿಗಮದ ನೌಕರರಿಗಾಗಿ ವಿಶೇಷ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಕೋವಿಡ್ ಸೋಂಕು ಹರಡುವಿಕೆ ದಿನೇ ದಿನೆ ವ್ಯಾಪಕವಾಗುತ್ತಿದೆ. ಇತ್ತ ರೋಡಿಗಿಳಿದು ಕರ್ತವ್ಯ ನಿರ್ವಹಿಸುವ ಸಾರಿಗೆ ಸಿಬ್ಬಂದಿಗೂ ಕೊರೊನಾ ತಗುಲುತ್ತಿರುವುದು ಗೊತ್ತಿರುವ ವಿಷಯವೇ. ಹೀಗಾಗಿ,ಸಾರಿಗೆ ನಿಗಮದ ನೌಕರರಿಗಾಗಿ ವಿಶೇಷ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಪೀಣ್ಯ ಬಸ್ ನಿಲ್ದಾಣದಲ್ಲಿ ನೌಕರರ ಹಿತದೃಷ್ಟಿಯಿಂದ ಸಾರಿಗೆ ನಿಗಮದಲ್ಲೇ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಕೊರೊನಾ ಸೋಂಕು ಕಾಣಿಸಿಕೊಂಡರೆ ಖಾಸಗಿ ಆಸ್ಪತ್ರೆಗಳ ಬೆಡ್ಗಾಗಿ ಅಲೆದಾಡುವ ಪರಿಸ್ಥಿತಿ ಇನ್ಮುಂದೆ ಇರೋದಿಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ ನಿಗಮದ ನೌಕರರಿಗೆ ಸೋಂಕು ಹರಡುತ್ತಿರುವ ಕಾರಣ, ಮೊದಲ ಬಾರಿಗೆ 200 ಹಾಸಿಗೆಗಳ ಸಾರಿಗೆ ನಿಗಮದ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದೆ. ಈಗಾಗಲೇ ಎಲ್ಲ ತಯಾರಿ ನಡೆದಿದ್ದು, ಆಗಸ್ಟ್ 5 ರಂದು ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ಕೊನೆ ಹಂತದ ತಯಾರಿ ನಡೆಯುತ್ತಿದ್ದು, ನೌಕರರ ಬಳಕೆಗೆ ಸಜ್ಜಾಗಿದೆ.