ಬೆಂಗಳೂರು: ಅಸಭ್ಯ ವರ್ತನೆ ಹಿನ್ನೆಲೆ ವಿಧಾನಸಭೆ ಅಧಿವೇಶನದಿಂದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶಿಸಿದ್ದಾರೆ. ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ್, ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಆರ್.ಅಶೋಕ್, ಉಮನಾತ್ ಕೋಟ್ಯಾನ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಧೀರಜ್ ಮುನಿರಾಜು, ಆರಗ ಜ್ಞಾನೇಂದ್ರ ಅವರನ್ನು ಅಮಾನತು ಮಾಡಿ ಆದೇಶಿಸಿದರು. ವಿಧಾನಸಭೆ ಪೀಠಕ್ಕೆ ವಿಧೇಯಕ ಪ್ರತಿ ಹರಿದು ಬಿಸಾಕಿ ಅಗೌರವ ತೋರಿದ ಹಿನ್ನೆಲೆ 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
ಪ್ರತಿಪಕ್ಷಗಳ ಒಕ್ಕೂಟದ ಸಭೆ ಹಿನ್ನೆಲೆಯಲ್ಲಿ ಗಣ್ಯರನ್ನು ಸ್ವಾಗತಿಸಲು ಹಾಗೂ ಶಿಷ್ಟಾಚಾರ ಪಾಲನೆಗೆ ಐಎಎಸ್ ಅಧಿಕಾರಿಗಳ ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಸದಸ್ಯರು ಇಂದು ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಭೋಜನ ವಿರಾಮದ ಬಳಿಕವೂ ಮುಂದುವರೆಯಿತು. ಕಲಾಪ ಆರಂಭವಾಗುತ್ತಿದ್ದ ಹಾಗೇ ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಸ್ಪೀಕರ್ ಮಾತನಾಡುತ್ತಾ, ತಮ್ಮ ಅಸ್ತಿತ್ವ ಉಳಿಸಲು ಕಲಾಪದ ಸಮಯ ವ್ಯರ್ಥ ಮಾಡುವುದು ಶೋಭೆ ತರುವ ಕೆಲಸ ಅಲ್ಲ. ಹಾಗಾಗಿ ನಿಮ್ಮ ಆಸನಕ್ಕೆ ತೆರಳಿ. ನಿಮ್ಮ ವರ್ತನೆಯನ್ನು ರಾಜ್ಯ ಸಹಿಸಲ್ಲ. ನೀವು ಅಶಿಸ್ತಿನಿಂದ ವರ್ತನೆ ಮಾಡಿದ್ದೀರಿ. ಪ್ರಜಾಪ್ರಭುತ್ವ ದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಧಕ್ಕೆ ತಂದರೆ, ಕಪ್ಪು ಚುಕ್ಕೆ ತಂದರೆ ಪೀಠ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪೀಠಕ್ಕೆ ಅಗೌರವ ತಂದಿರುವುದಕ್ಕೆ ಕ್ರಮ ತೆಗದುಕೊಳ್ಳಬೇಕು. ಆಡಳಿತ ಪಕ್ಷದ ವಿಪ್ ಅಶೋಕ್ ಪಟ್ಟಣ್ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ದಮನಕಾರಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅದರಲ್ಲಿ ನಿಮ್ಮ ಸ್ಥಾನ ದುರುಪಯೋಗ ಮಾಡಲಾಗುತ್ತಿದೆ. ಸ್ಪೀಕರ್ ಅವರು ಸರ್ಕಾರದ ಕೈ ಗೊಂಬೆ ಆಗಿದ್ದೀರಿ. ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಿ. ಸ್ಪೀಕರ್ ಸ್ಥಾನದ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ. ರಾಜಕೀಯ ಬೇಳೆ ಬೇಯಿಸಲು ಅವರನ್ನು ದುರುಪಯೋಗ ಮಾಡಿದ್ದೀರಿ. ನೀವು ನಮ್ಮರಕ್ಷಣೆ ಮಾಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅಮಾನತು ಪ್ರಸ್ತಾವನೆಯನ್ನು ಮಂಡಿಸಿದರು. ತಕ್ಷಣದಿಂದ ಅಧಿವೇಶನ ಮುಗಿಯುವವರೆಗೆ 10 ಶಾಸಕರನ್ನು ಅಮಾನತು ಮಾಡುವಂತೆ ಪ್ರಸ್ತಾವನೆ ಮಂಡಿಸಿದರು. ಸ್ಪೀಕರ್ ಪ್ರಸ್ತಾವನೆಯನ್ನು ಅಂಗೀಕರಿಸಿ, ಅಮಾನತು ಮಾಡಿ ಆದೇಶಿಸಿ, ಕಲಾಪವನ್ನು 10 ನಿಮಿಷ ಕಾಲ ಮುಂದೂಡಿದರು.
ಉಳಿದ ಬಿಜೆಪಿ ಸದಸ್ಯರಿಂದ ತಡೆ: ಉಳಿದ ಬಿಜೆಪಿ ಶಾಸಕರು ಅಮಾನತಾದ ಬಿಜೆಪಿ 10 ಶಾಸಕರ ಸುತ್ತ ನಿಂತು ಹೊರ ಹಾಕದಂತೆ ಮಾರ್ಷಲ್ ಗಳಿಗೆ ತಡೆ ಒಡ್ಡಿದರು. ಆ ಬಳಿಕ ಬಿಜೆಪಿ ಸದಸ್ಯರು ಸ್ಪೀಕರ್ ಚೇಂಬರ್ ಬಳಿ ಪ್ರತಿಭಟನೆಗೆ ಮುಂದಾದರು, ಈ ಸಂದರ್ಭದಲ್ಲಿ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡು ಕುಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿ ಅವರನ್ನು ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡಿ, ಆಸ್ಪತ್ರೆಗೆ ಕಳುಹಿಸಿಕೊಟ್ಟಿತು.
-
#WATCH | Bengaluru: Karnataka Home Minister Dr G Parameshwara on Karnataka Assembly Ruckus, says, "...It is unfortunate. We have laid out some guidelines, some rules in the house. House rules are there. Nobody prevents them to go and protest...But there is some basic discipline… https://t.co/RfySICJfVe pic.twitter.com/txb2fMqGZq
— ANI (@ANI) July 19, 2023 " class="align-text-top noRightClick twitterSection" data="
">#WATCH | Bengaluru: Karnataka Home Minister Dr G Parameshwara on Karnataka Assembly Ruckus, says, "...It is unfortunate. We have laid out some guidelines, some rules in the house. House rules are there. Nobody prevents them to go and protest...But there is some basic discipline… https://t.co/RfySICJfVe pic.twitter.com/txb2fMqGZq
— ANI (@ANI) July 19, 2023#WATCH | Bengaluru: Karnataka Home Minister Dr G Parameshwara on Karnataka Assembly Ruckus, says, "...It is unfortunate. We have laid out some guidelines, some rules in the house. House rules are there. Nobody prevents them to go and protest...But there is some basic discipline… https://t.co/RfySICJfVe pic.twitter.com/txb2fMqGZq
— ANI (@ANI) July 19, 2023
ವಿಧಾನಸಭೆಯ ಗದ್ದಲ ದುರದೃಷ್ಟಕರ : ವಿಧಾನಸಭೆ ಗದ್ದಲದ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿ, ಸದನಕ್ಕೆ ತನ್ನದೇ ಆದ ಕೆಲವು ಮಾರ್ಗಸೂಚಿಗಳು ಮತ್ತು ನಿಯಮಗಳು ಇವೆ, ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ಈ ವೇಳೆಯೂ ಅನುಸರಿಸಬೇಕಾದ ಕೆಲವು ಮೂಲಭೂತ ಶಿಸ್ತುಗಳಿವೆ. ಸ್ಪೀಕರ್ ಕುರ್ಚಿಯತ್ತದಾಳಿ ಮಾಡುವುದನ್ನು ಕರ್ನಾಟಕ ವಿಧಾನಸಭೆಯಲ್ಲಿ ಎಂದು ನೋಡಿರಲಿಲ್ಲ. ಇದು ದುರದೃಷ್ಟಕರವಾಗಿದೆ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ: ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ