ETV Bharat / state

ಒಂದೇ ದಿನ 21 ಕನ್ನಡ ಹಾಡು ಹಾಡಿ ಗಿನ್ನಿಸ್​ ದಾಖಲೆ ನಿರ್ಮಿಸಿದ್ದರು ಎಸ್​ಪಿಬಿ - ಗಾಯಕ ಎಸ್​​ಪಿ ಬಾಲಸುಬ್ರಹ್ಮಣ್ಯಂ

ಕನ್ನಡದಲ್ಲಿ ಒಂದೇ ದಿನ 21 ಹಾಡುಗಳು ಹಾಡಿದ್ದರೆ ಹಿಂದಿಯಲ್ಲಿ 16, ತಮಿಳಿನಲ್ಲಿ 19 ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ರಾಜ್ಯಗಳಿಂದ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಭಾರತೀಯ. ಆಂಧ್ರದ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು 25 ಬಾರಿ ಪಡೆದುಕೊಂಡವರು ನಮ್ಮ ಹೆಮ್ಮೆಯ ಎಸ್​ಪಿಬಿ.

SP Balasubrahmanyam
ಎಸ್​​ಪಿ ಬಾಲಸುಬ್ರಹ್ಮಣ್ಯಂ
author img

By

Published : Sep 25, 2020, 2:19 PM IST

ಗಾಯನದೊಂದಿಗೆ ಕೇಲವು ವಿಶ್ವ ದಾಖಲೆಯಿಂದ ಗಿನ್ನಿಸ್ ರೆಕಾರ್ಡ್‍ನಲ್ಲಿ ಸ್ಥಾನ ನಿರ್ಮಿಸಿದ್ದವರು ಎಸ್​​ಪಿ ಬಾಲಸುಬ್ರಹ್ಮಣ್ಯಂ.

ಕನ್ನಡದಲ್ಲಿ 21 ಹಾಡುಗಳನ್ನು ಒಂದೇ ದಿನದಲ್ಲಿ ಹಾಡಿದ್ದಾರೆ. ಅದೆ ರೀತಿ ಹಿಂದಿಯಲ್ಲಿ 16, ತಮಿಳನಲ್ಲಿ 19 ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ರಾಜ್ಯಗಳಿಂದ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಭಾರತೀಯ. ಆಂಧ್ರದ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು 25 ಬಾರಿ ಪಡೆದುಕೊಂಡಿದ್ದಾರೆ.

ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಗಾಯಕ ಪರೆದಯ ಮೇಲೆ ಅಭಿನಯಿಸುವವರ ಆತ್ಮ ಇದ್ದಂತೆ. ಸಿನಿರಂಗದ ನೂರಾರು ಗಾಯನಾತ್ಮಗಳಲ್ಲಿ 16 ಭಾಷೆಯ ನಲವತ್ತೊಂದು ಸಾವಿರ ಪ್ಲಸ್​ ಹಾಡುಗಳ ಮೂಲಕ ಭಾರತದ ಅನರ್ಘ್ಯ ರತ್ನವಾಗಿ ನಿಲ್ಲುವ ಶ್ರೀಪತಿ ಪಂಡಿತರಾಧ್ಯಲು ಬಾಲಸುಬ್ರಹ್ಮಣಂ ಅವರು ತಮ್ಮ ಗಾನಸುಧೆ ನಿಲ್ಲಿಸಿದ್ದಾರೆ.

ಎಸ್​ಪಿಬಿ ಅವರು ಕಳೆದ ಐದು ದಶಕಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಗಾಯನ ಗಂಗೆಯನ್ನು ದೇಶದೂದಗಲಕ್ಕೂ ಹರಿಸಿದ್ದಾರೆ. ಐದು ನಿಮಿಷದಂತೆ 41,000 ಸಾವಿರ ಹಾಡುಗಳನ್ನು ಲೆಕ್ಕ ಹಾಕಿದರೆ 142 ದಿನಗಳು ಹಾಡುತ್ತಾ ರೆಕಾರ್ಡಿಂಗ್ ರೂಮ್‍ನಲ್ಲೇ ಕಳೆದಿದ್ದಾರೆ. (ಸಾರ್ವಜನಿಕ ಕಾರ್ಯಕ್ರಗಳನ್ನು ಹೊರತುಪಡಿಸಿ). ಇದು ಎಸ್‍ಪಿಬಿಯ ಕಂಠದಲ್ಲಿ ಅಡಗಿರುವ ಶಕ್ತಿಗೆ ಕೈಗನ್ನಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.