ETV Bharat / state

Oommen Chandy passed away: ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾಂಗ್ರೆಸ್​​ ನಾಯಕರು

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅಂತಿಮ ದರ್ಶನ ಪಡೆದ ಕಾಂಗ್ರೆಸ್​​ ನಾಯಕರು.

ಉಮ್ಮನ್ ಚಾಂಡಿ  ಅಂತಿಮ ದರ್ಶನ ಪಡೆದ ಕಾಂಗ್ರೆಸ್​​ ನಾಯಕರು

author img

By

Published : Jul 18, 2023, 12:01 PM IST

Updated : Jul 18, 2023, 12:42 PM IST

ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಇಂದು ಮುಂಜಾನೆ ವಿಧಿವಶರಾದ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟ್ಯಾಲಿನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಪಡೆದಿದ್ದಾರೆ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಕಾಂಗ್ರೆಸ್ ನಾಯಕರು ಅಂತಿಮ ದರ್ಶನ ಪಡೆದರು.

ಪಕ್ಷದ ಹಿರಿಯ ನಾಯಕನ ಅಂತಿಮ ದರ್ಶನ ಪಡೆದ ಬಳಿಕ‌ ಮಾತನಾಡಿದ ಸಿಎಂ ಸಿದ್ದರಾಮಯ್ಯ "ಉಮ್ಮನ್ ಚಾಂಡಿ ಒಬ್ಬ ಮುತ್ಸದ್ಧ ರಾಜಕಾರಣಿ, ದೇಶದ ರಾಜಕಾರಣಕ್ಕೆ ಅವರ ಸೇವೆ ಅಪಾರ. ಒಂದೇ ಕ್ಷೇತ್ರದಿಂದ ಹನ್ನೆರಡು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಕೇರಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಅವರೊಬ್ಬ ಜನಪ್ರಿಯ ನಾಯಕರಾಗಿದ್ದರು. ಬಂಡೀಪುರ ಮತ್ತು ಗುಂಡ್ಲುಪೇಟೆ ಅರಣ್ಯದ ವಿಚಾರವಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ನೀಡಲಿ" ಎಂದು ಸಂತಾಪ ಸೂಚಿಸಿದರು.

ಉಮ್ಮನ್​ ಚಾಂಡಿ ಪಾರ್ಥಿವ ಶರೀರ
ಉಮ್ಮನ್​ ಚಾಂಡಿ ಪಾರ್ಥಿವ ಶರೀರ

ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ 'ಐವತ್ತು ವರ್ಷ ಸುದೀರ್ಘ ರಾಜಕಾರಣ ಮಾಡಿದವರು ಉಮ್ಮನ್ ಚಾಂಡಿ. ಕೇರಳದಲ್ಲಿ ಅಷ್ಟೇ ಅಲ್ಲದೇ ನಮ್ಮ ರಾಜ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ನಮಗೂ ಮಾರ್ಗದರ್ಶಕರು ಆಗಿದ್ದವರು. ಅತ್ಯಂತ ಜನಪ್ರಿಯ ರಾಜಕಾರಣಿ, ಒಂದೇ ಕ್ಷೇತ್ರದಲ್ಲಿ ಹನ್ನೆರಡು ಬಾರಿ ಗೆದ್ದಿದ್ದಾರೆ. ನಾನು ಕೇರಳದಲ್ಲಿ ಹೋಗಿ ಚುನಾವಣಾ ಪ್ರಚಾರ ಮಾಡಿದಾಗ ಅವರ ಮಾನವೀಯತೆ ಗುಣಗಳನ್ನ ನೋಡಿದ್ದೇನೆ. ಅಂತಹ ವ್ಯಕ್ತಿ ಮತ್ತೊಬ್ಬರು ಇಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದರು.

ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ

ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಲ್ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿ, ಚಾಂಡಿ ಓರ್ವ ಮಾಸ್ ಲೀಡರ್. ಜನರ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದವರು. ಅವರ ಸಾವು ದೇಶಕ್ಕೆ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ಕೂಡ ಸಂತಾಪ ಸೂಚಿಸಿದ್ದು, ಉಮ್ಮನ್ ಚಾಂಡಿ ಅವರ ನಿಧನದ ಸುದ್ದಿ ಬೇಸರ ತರಿಸಿದೆ. ಎರಡು ಬಾರಿ ಕೇರಳದ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಿ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಾಂಡಿ ನಿಧನ ಕೇರಳ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಉಮ್ಮನ್ ಚಾಂಡಿ ಪಾರ್ಥಿವ ಶರೀರದ ಅಂತಿಮ ದರ್ಶನ; 11 ಗಂಟೆಗೆ ತಿರುವನಂತಪುರಂಗೆ ರವಾನೆ

Last Updated : Jul 18, 2023, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.