ETV Bharat / state

ವಿದ್ಯುತ್ ನಷ್ಟ ತಪ್ಪಿಸಲು ಸೋಲಾರ್ ಮೊರೆ ಹೋದ ಬೆಂಗಳೂರು ವಿವಿ

author img

By

Published : Sep 30, 2019, 11:38 PM IST

ಬೆಂಗಳೂರು ವಿಶ್ವವಿದ್ಯಾಲಯವು ತನಗೆ ಅಗತ್ಯವಿರುವ ವಿದ್ಯುತ್ ಶಕ್ತಿಯನ್ನು ತಾನೇ ಸೌರಶಕ್ತಿ ಬಳಸಿಕೊಂಡು ಉತ್ಪಾದಿಸುವ ಮೂಲಕ ಹಸಿರು ಶಕ್ತಿಯೆಡೆಗೆ ಮುಖಮಾಡಿದೆ.

ವಿದ್ಯುತ್ ನಷ್ಟ ತಪ್ಪಿಸಲು ಸೋಲಾರ್ ಮೊರೆ ಹೋದ ಬೆಂಗಳೂರು ವಿವಿ

ಬೆಂಗಳೂರು: ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕುಲಪತಿ ಪ್ರೊ. ವೇಣುಗೋಪಾಲ್ ಸೌರಶಕ್ತಿ ಘಟಕದ ಉದ್ಘಾಟನೆ ನೆರವೇರಿಸಿದರು.

ಬೆಂಗಳೂರು ವಿವಿಯು ತನಗೆ ಅಗತ್ಯವಿರುವ ಸುಮಾರು 500 ಕಿಲೋ ವ್ಯಾಟ್ ವಿದ್ಯುತ್ ಶಕ್ತಿಯಲ್ಲಿ 495 ಕಿಲೋ ವ್ಯಾಟ್ ವಿದ್ಯುತ್ ಶಕ್ತಿಯನ್ನು ಸೌರಶಕ್ತಿ ಮೂಲಕ ಉತ್ಪಾದಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದಕ್ಕಾಗಿ, ವಿಶ್ವವಿದ್ಯಾಲಯದ ಮುಖ್ಯ ಕಛೇರಿ ಸೇರಿದಂತೆ ಒಟ್ಟು 6 ಕಟ್ಟಡಗಳ ಮೇಲ್ಛಾವಣಿಯಲ್ಲಿ ಸುಮಾರು 50,000 ಚದರ ಅಡಿಯಲ್ಲಿ ಥಿಂಕ್ ಎನರ್ಜಿ ಸಂಸ್ಥೆಯ ಸಹಯೋಗದಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಲಾಗಿದೆ. ಈ ಸೋಲಾರ್ ಉತ್ಪನ್ನವು ಸ್ವಯಂ ಚಾಲಿತ ಘಟಕವಾಗಿದ್ದು ಮುಂಜಾನೆ ಬೆಳಕಿನ ಹರಿವು ಆರಂಭವಾದ ತಕ್ಷಣ ಸೌರಶಕ್ತಿ ಉತ್ಪಾದನೆ ಕಾರ್ಯವನ್ನು ಪ್ರಾರಂಭಿಸುತ್ತದೆ.

ವಿದ್ಯುತ್ ನಷ್ಟ ತಪ್ಪಿಸಲು ಸೋಲಾರ್ ಮೊರೆ ಹೋದ ಬೆಂಗಳೂರು ವಿವಿ

ವಿಶ್ವವಿದ್ಯಾಲಯ ಬೆಸ್ಕಾಂಗೆ ಪ್ರತಿ ಯುನಿಟ್‍ಗೆ ರೂ. 7.15 ಯನ್ನು ಪಾವತಿಸುತ್ತಿತ್ತು. ಆದರೆ ಈ ಸೌರ ಶಕ್ತಿ ವಿದ್ಯುತ್‍ಗೆ ಪ್ರತಿ ಯುನಿಟ್‍ಗೆ ರೂ. 3.83ನ್ನು ಪಾವತಿ ಮಾಡುವುದರ ಮೂಲಕ ಸುಮಾರು ಶೇ. 50ರಷ್ಟು ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಲಿದೆ. ಸೌರ ಶಕ್ತಿ ಉತ್ಪಾದನೆಯಿಂದಾಗಿ ಪ್ರತಿ ವರ್ಷ ಸುಮಾರು 790 ಟನ್ ಇಂಗಾಲದ ಡೈಆಕ್ಸೈಡ್‍ನ ಪ್ರಮಾಣ ವಾತಾವರಣದಲ್ಲಿ ಕಡಿಮೆ ಆಗಲಿದೆ. ಸುಮಾರು 1112 ಎಕರೆ ಪ್ರದೇಶದಲ್ಲಿರುವ ವಿಶ್ವ ವಿದ್ಯಾಲಯ ಸಂಪೂರ್ಣ ಸೌರ ಶಕ್ತಿಯನ್ನು ಉಪಯೋಗಿಸಲು ಸುಸಜ್ಜಿತವಾಗಿದೆ.

ರೂಫ್ ಟಾಪ್ ಸೋಲಾರ್ ಅಳವಡಿಕೆ ಮಾಡಿದ ಬಳಿಕ ಬೆಂಗಳೂರು ವಿವಿ ಬೆಸ್ಕಾಂ ಬಳಿ ಅನುಮತಿಗೆ ಅರ್ಜಿ ಸಲ್ಲಿಸಿದೆ. ಬೆಂಗಳೂರು ವಿವಿ ಬೆಸ್ಕಾಂ ಗ್ರಾಹಕರಾಗಿರುವ ಕಾರಣ, ಗ್ರಾಹಕರ ಹಿತ ಕಾಯುವ ದೃಷ್ಠಿಯಿಂದ ಕೆಇಆರ್​ಸಿ​ಗೆ ಪತ್ರ ಬರೆಯಲಾಗಿದೆ. ಕೆಇಆರ್​ಸಿ​ ಕರಡು ಸಿದ್ಧಪಡಿಸಿ ಅನುಮತಿ ನೀಡುವಂತೆ ಸೂಚನೆ ನೀಡಿದ ಕೂಡಲೆ ಬೆಂಗಳೂರು ವಿವಿಯ ಸೋಲಾರ್ ಬಳಕೆಗೆ ಅವಕಾಶ ಕೊಡಿಸಲು ಪ್ರಯತ್ನ ಮಾಡಲಾಗುತ್ತೆ. ಈ ಸಂಬಂಧ 15 ದಿನಗಳಲ್ಲಿ ಕೆಇಆರ್​ಸಿ ಸಭೆ ಕರೆದಿದ್ದು, ಇದೇ ರೀತಿ ಥರ್ಡ್ ಪಾರ್ಟಿ ಹೂಡಿಕೆ ಮಾಡಿಸಿರುವ ಬೆಂಗಳೂರು ವಿವಿ, ಜಿಕೆವಿಕೆ ವಿಶ್ವವಿದ್ಯಾಲಯ ಸೇರಿದಂತೆ ನಾಲ್ಕು ಗ್ರಾಹಕರಿಗೆ ಅನುಮತಿ ನೀಡಲು ಬೆಸ್ಕಾಂ ಪ್ರಯತ್ನ ಮಾಡುತ್ತದೆ ಅಂತ ಬೆಸ್ಕಾಂನ ಡಿಮ್ಯಾಂಡ್ ಅಂಡ್ ಸಪ್ಲೈ ಮ್ಯಾನೇಜ್ಮೆಂಟ್ ಜನರಲ್ ಶೀಲಾ ಮಾಹಿತಿ ನೀಡಿದ್ದಾರೆ..

Intro:ವಿದ್ಯುತ್ ನಷ್ಟ ತಪ್ಪಿಸಲು ಸೋಲಾರ್ ಮೊರೆ ಹೋದ ಬೆಂಗಳೂರು ವಿಶ್ವ ವಿದ್ಯಾಲಯ..‌

ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯವು
ಸದಾ ಹಸಿರಿನಿಂದ ಕಂಗೊಳಿಸುವ ಪರಿಸರ ಸ್ನೇಹಿ ವಿದ್ಯಾಲಯ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ತನಗೆ ಅಗತ್ಯವಿರುವ ವಿದ್ಯುತ್ ಶಕ್ತಿಯನ್ನು ತಾನೇ ಸೌರಶಕ್ತಿ ಬಳಸಿಕೊಂಡು ಉತ್ಪಾದಿಸುವ ಮೂಲಕ ಹಸಿರು ಶಕ್ತಿಯೆಡೆಗೆ ಮುಖಮಾಡಿದೆ.

ಹೌದು ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕುಲಪತಿ ಪ್ರೊ. ವೇಣುಗೋಪಾಲ್ ಸೌರಶಕ್ತಿ ಘಟಕದ ಉದ್ಘಾಟನೆ ನೆರವೇರಿಸಿದರು.
ಬೆಂಗಳೂರು ವಿಶ್ವವಿದ್ಯಾಲಯವು ತನಗೆ ಅಗತ್ಯವಿರುವ ಸುಮಾರು 500 ಕಿ ವ್ಯಾಟ್ ವಿದ್ಯುತ್ ಶಕ್ತಿಯಲ್ಲಿ 495 ಕಿ ವ್ಯಾಟ್ ವಿದ್ಯುತ್ ಶಕ್ತಿಯನ್ನು ಸೌರಶಕ್ತಿ ಮೂಲಕ ಉತ್ಪಾದಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಇದಕ್ಕಾಗಿ, ವಿಶ್ವವಿದ್ಯಾಲಯದ ಮುಖ್ಯ ಕಛೇರಿ ಸೇರಿದಂತೆ ಒಟ್ಟು 6 ಕಟ್ಟಡಗಳ ಮೇಲ್ಚಾವಣಿ ಯಲ್ಲಿ ಸುಮಾರು 50,000 ಚದರ ಅಡಿಯಲ್ಲಿ ಥಿಂಕ್ ಎನರ್ಜಿ ಸಂಸ್ಥೆಯ ಸಹಯೋಗದಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಲಾಗಿದೆ.
ಈ ಸೋಲಾರ್ ಉತ್ಪನ್ನವು ಸ್ವಯಂ ಚಾಲಿತ ಘಟಕವಾಗಿದ್ದು ಮುಂಜಾನೆ ಬೆಳಕಿನ ಹರಿವು ಆರಂಭವಾದ ತಕ್ಷಣ ಸೌರಶಕ್ತಿ ಉತ್ಪಾದನೆ ಕಾರ್ಯವನ್ನು ಪ್ರಾರಂಭಿಸುತ್ತದೆ.

ವಿಶ್ವವಿದ್ಯಾಲಯ ಬೆಸ್ಕಾಂಗೆ ಪ್ರತಿ ಯುನಿಟ್‍ಗೆ ರೂ. 7.15 ಯನ್ನು ಪಾವತಿಸುತ್ತಿತ್ತು ಆದರೆ ಈ ಸೌರ ಶಕ್ತಿ ವಿದ್ಯುತ್‍ಗೆ ಪ್ರತಿ ಯುನಿಟ್‍ಗೆ ರೂ. 3.83ನ್ನು ಪಾವತಿ ಮಾಡುವುದರ ಮೂಲಕ ಸುಮಾರು ಶೇ. 50ರಷ್ಟು ವಿದ್ಯುತ್ ಬಿಲ್ ಅನ್ನು ಉಳಿತಾಯ ಮಾಡಲಿದೆ. ಇಲ್ಲಿ ಉತ್ಪತ್ತಿಯಾದ ಸೌರ ಶಕ್ತಿಯನ್ನು ಬೆಸ್ಕಾಂ ಗ್ರಿಡ್‍ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವಿಶ್ವವಿದ್ಯಾಲಯ ಉಪಯೋಗಿಸಿಕೊಳ್ಳುತ್ತದೆ..

ಸೌರ ಶಕ್ತಿ ಉತ್ಪಾದನೆಯಿಂದಾಗಿ ಪ್ರತಿ ವರ್ಷ ಸುಮಾರು 790 ಟನ್ ಇಂಗಾಲದ ಡೈಆಕ್ಸೈಡ್‍ನ ಪ್ರಮಾಣ ವಾತಾವರಣದಲ್ಲಿ ಕಡಿಮೆ ಆಗಲಿದೆ. ಸುಮಾರು 1112 ಎಕರೆ ಪ್ರದೇಶದಲ್ಲಿರುವ ವಿಶ್ವ ವಿದ್ಯಾಲಯ ಸಂಪೂರ್ಣ ಸೌರ ಶಕ್ತಿಯನ್ನು ಉಪಯೋಗಿಸಲು ಸುಸಸಜ್ಜಿತವಾಗಿದೆ.

ಇದಲ್ಲದೆ ಇನ್ನೂ 2 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾದ ಕಟ್ಟಡಗಳ ಮೇಲ್ಛಾವಣಿ ಯನ್ನು ಹೊಂದಿದೆ. ತನ್ನ ವಿದ್ಯುತ್ ಅಗತ್ಯವನ್ನು ಸೌರಶಕ್ತಿ ಮೂಲಕ ಪೂರೈಸಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವುದಲ್ಲದೆ ಸಂಪೂರ್ಣ ಸೌರಶಕ್ತಿಯ ಅಳವಡಿಕೆಯಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯವು ಸೌರ ಶಕ್ತಿ ಅಳವಡಿಸಿಕೊಂಡಿರುವ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೂಫ್ ಟಾಪ್ ಸೋಲಾರ್ ಅಳವಡಿಕೆ ಮಾಡಿದ ಬಳಿಕ ಬೆಂಗಳೂರು ವಿವಿ ಬೆಸ್ಕಾಂ ಬಳಿ ಅನುಮತಿಗೆ ಅರ್ಜಿ ಸಲ್ಲಿಸಿದೆ. ಬೆಂಗಳೂರು ವಿವಿ ಬೆಸ್ಕಾಂ ಗ್ರಾಹಕರಾಗಿರುವ ಕಾರಣ, ಗ್ರಾಹಕರ ಹಿತ ಕಾಯುವ ದೃಷ್ಠಿಯಿಂದ ಕೆಇಆರ್‍ಸಿ ಗೆ ಪತ್ರ ಬರೆಯಲಾಗಿದೆ. ಕೆಇಆರ್‍ಸಿ ಕರಡು ಸಿದ್ದಪಡಿಸಿ ಅನುಮತಿ ನೀಡುವಂತೆ ಸೂಚನೆ ನೀಡಿದ ಕೂಡಲೆ ಬೆಂಗಳೂರು ವಿವಿಯ ಸೋಲಾರ್ ಬಳಕೆಗೆ ಅವಕಾಶ ಕೊಡಿಸಲು ಪ್ರಯತ್ನ ಮಾಡಲಾಗುತ್ತೆ. ಈ ಸಂಬಂಧ 15ದಿನಗಳಲ್ಲಿ ಕೆಇಆರ್‍ಸಿ ಸಭೆ ಕರೆದಿದ್ದು, ಇದೇ ರೀತಿ ಥರ್ಡ್ ಪಾರ್ಟಿ ಹೂಡಿಕೆ ಮಾಡಿಸಿರುವ ಬೆಂಗಳೂರು ವಿವಿ, ಜಿಕೆವಿಕೆ ವಿಶ್ವವಿದ್ಯಾಲಯ ಸೇರಿದಂತೆ ನಾಲ್ಕು ಗ್ರಾಹಕರಿಗೆ ಅನುಮತಿ ನೀಡಲು ಬೆಸ್ಕಾಂ ಪ್ರಯತ್ನ ಮಾಡುತ್ತದೆ ಅಂತ ಬೆಸ್ಕಾಂ‌ನ‌ ಡಿಮ್ಯಾಂಡ್ ಅಂಡ್ ಸಪ್ಲೈ ಮ್ಯಾನೇಜ್ಮೆಂಟ್ ಜನರಲ್ ಶೀಲಾ ಮಾಹಿತಿ ನೀಡಿದ್ದಾರೆ..‌

KN_BNG_3_BANGALORE_VV_SOLAR_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.