ETV Bharat / state

ಕೊಟ್ಟಿಗೆ ತೊಳೆಯಲು, ಹಾಲು ಕರೆಯಲು ಬಂದಿದೆ ಸೋಲಾರ್ ಯಂತ್ರ - ಸೋಲಾರ್ ಮಿಲ್ಕಿಂಗ್ ಮಷಿನ್

ಹೈನುಗಾರಿಕೆ ಮಾಡುವ ರೈತರಿಗೆ ನಿತ್ಯ ಹಾಲು ಕರೆಯುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದೇ ಅತಿ ಹೆಚ್ಚು ಪರಿಶ್ರಮದ ಕೆಲಸ. ಇಂತಹ ರೈತರಿಗೆ ಅನುಕೂಲವಾಗುವಂತೆ ಸೋಲಾರ್‌ ಆಧಾರಿತ ಹಾಲು ಕರೆಯುವ ಮತ್ತು ಕೊಟ್ಟಿಗೆ ಸ್ವಚ್ಛಗೊಳಿಸುವ ಯಂತ್ರ ಬಂದಿದೆ.

Solar machine for barn washing and milking
ಕೊಟ್ಟಿಗೆ ತೊಳೆಯಲು, ಹಾಲು ಕರೆಯಲು ಸೋಲಾರ್‌ ಯಂತ್ರ
author img

By

Published : Nov 6, 2022, 12:14 PM IST

Updated : Nov 6, 2022, 12:35 PM IST

ಬೆಂಗಳೂರು: ಹೈನುಗಾರಿಕೆ ಮಾಡುವ ರೈತರು ಕೆಲ ಸಮಯವನ್ನು ಕೊಟ್ಟಿಗೆ, ದನಕರುಗಳ ಸ್ವಚ್ಛತೆಗೆ ಮೀಸಲಿಡುತ್ತಾರೆ. ಅದು ಅತ್ಯಂತ ಮುಖ್ಯ ಕೂಡಾ. ಕೊಂಚ ಎಡವಿದರೂ ಸಾಕಷ್ಟು ಸಮಸ್ಯೆಗಳು ಸಾಕು ಪ್ರಾಣಿಗಳನ್ನು ಕಾಡುತ್ತವೆ.

ಜಾನುವಾರುಗಳು ಅದರಲ್ಲೂ ಹೈಬ್ರಿಡ್ ತಳಿಯ ಪ್ರಾಣಿಗಳನ್ನು ಸಾಕುವುದು ಸುಲಭದ ಕೆಲಸವಲ್ಲ. ಇವುಗಳಿಗೆ ಸ್ವಚ್ಛತೆ ಬೇಕು. ಇದನ್ನರಿತ ಬೆಂಗಳೂರು ಮೂಲದ ಸ್ಮಾರ್ಟ್ ಆಗ್ರೋ ಮೆಷಿನರೀಸ್ ಕಂಪನಿ ಕೊಟ್ಟಿಗೆ ತೊಳೆಯಲು ಸೋಲಾರ್ ಚಾಲಿತ ಯಂತ್ರವನ್ನು ಆವಿಷ್ಕರಿಸಿದೆ. ಇದು ವಿದ್ಯುತ್ ಉಳಿತಾಯ ಮಾಡುತ್ತದೆ. ರೈತನ ಕೆಲಸವನ್ನು ಸುಲಭಗೊಳಿಸುತ್ತದೆ. ಅಷ್ಟೇ ಏಕೆ?, ತ್ವರಿತವಾಗಿ ಕೊಟ್ಟಿಗೆ ತೊಳೆಯುವ ವಿಶೇಷ ಸಾಧನವೂ ಹೌದು.

ಸೋಲಾರ್ ಮಿಲ್ಕಿಂಗ್ ಮಷಿನ್: ಈ ಯಂತ್ರವನ್ನು ಬೆಂಗಳೂರಿನ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಸ್ಮಾರ್ಟ್ ಅಗ್ರೋ ಮೆಷಿನರಿಸ್ ಸಂಸ್ಥಾಪಕ ನಾಗರಾಜ್ ಎಸ್​.ಟಿ ಎಂಬುವವರು ಅಭಿವೃದ್ಧಿಪಡಿಸಿದ್ದಾರೆ. ವಿದ್ಯುತ್ ಅಥವಾ ಇಂಧನ ಇಲ್ಲದೆಯೂ ಇದನ್ನು ಬಳಸಬಹುದು. ಏಕೆಂದರೆ, ಸೋಲಾರ್ ಚಾಲಿತ ಯಂತ್ರವಿದು. ಹಸು ಹಾಗೂ ಕೊಟ್ಟಿಗೆ ತೊಳೆಯುವ ಜತೆಗೆ ಹಾಲು ಹಿಂಡುವ ಕಾರ್ಯಕ್ಕೂ ಉಪಯೋಗಿಸಬಹುದು. ಒಮ್ಮೆ ಚಾರ್ಜ್ ಮಾಡಿದರೆ ನಿರಂತರ 8 ಗಂಟೆಗಳ ಕಾಲ ಬಳಸಬಹುದಾದ ಬ್ಯಾಟರಿ ಬ್ಯಾಕ್ಅಪ್ ಒಳಗೊಂಡಿದೆ. ಒಂದು ಕ್ಲಸ್ಟರ್, ಎರಡು ಕ್ಲಸ್ಟರ್ ಹಾಗೂ ಲೈಟ್​​ಗಳೊಂದಿಗೂ ದೊರೆಯುತ್ತದೆ.

ಸ್ಮಾರ್ಟ್ ಅಗ್ರೋ ಮೆಷಿನರಿಸ್ ಸಂಸ್ಥಾಪಕ ನಾಗರಾಜ್ ಎಸ್‌ ಟಿ ವಿವರಣೆ

ಏಕಕಾಲಕ್ಕೆ 2 ಹಸುಗಳ ಹಾಲು ಕರೆಯುವ ಸೌಲಭ್ಯ: ಕೊಟ್ಟಿಗೆಯ ಮೇಲೆ ಕೇವಲ ನಾಲ್ಕು ಸೋಲಾರ್ ಪ್ಯಾನಲ್ ಅಳವಡಿಸಿ ಇದನ್ನು ಸಿದ್ಧಪಡಿಸಬಹುದು. 375 ವ್ಯಾಟ್ ಪ್ಯಾನಲ್ ಇದು. 200 ಎಹೆಚ್ ಬ್ಯಾಟರಿಯನ್ನು ಸೌರಶಕ್ತಿ ಯಂತ್ರ ಹೊಂದಿದೆ. ಕೊಟ್ಟಿಗೆ, ಹಸು ತೊಳೆಯುವುದು, ಹಾಲು ಕರೆಯುವುದರ ಜತೆಗೆ ನಾಲ್ಕು ದೀಪವನ್ನು ಉರಿಸುವಷ್ಟು ಶಕ್ತಿ ಇದರಲ್ಲಿರುತ್ತದೆ. ಕೇವಲ 8-10 ನಿಮಿಷದಲ್ಲಿ ಹಸುವಿನ ಹಾಲು ಕರೆದು ಮುಗಿಸಬಹುದು. ಏಕಕಾಲಕ್ಕೆ ಎರಡು ಹಸುಗಳ ಹಾಲನ್ನು ಕರೆಯುವ ಸೌಲಭ್ಯವೂ ಇದರಲ್ಲಿದೆ.

ನಾಗರಾಜ್ ಎಸ್ ​ಟಿ ಈ ಕುರಿತು ಮಾಹಿತಿ ನೀಡಿ, "ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನ ಊರಿಗೆ ತೆರಳಿ ಸ್ವಂತ ಹೈನೋದ್ಯಮ ವೃತ್ತಿ ಆರಂಭಿಸಿದರು. ಅವರಿಗಾಗಿ ನಾವು ಈ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದೇವೆ. ಆರಂಭದಲ್ಲಿ 7 ಸಾವಿರ ರೂ.ಗೆ ಆರಂಭಿಸಿದೆವು. ವಿಶೇಷವಾಗಿ ರೈತರಿಗಾಗಿ ಈ ಯಂತ್ರ ಸಿದ್ಧಪಡಿಸಿದ್ದೇವೆ. ಸದ್ಯ ಇದರ ವೆಚ್ಚ 2.5 ಲಕ್ಷ ರೂ. ಆಗುತ್ತದೆ. ಸರ್ಕಾರದಿಂದ ಸಬ್ಸಿಡಿಗೆ ಅರ್ಜಿ ಸಲ್ಲಿಸಿದ್ದೇವೆ. ಅದು ಸಿಕ್ಕ ತಕ್ಷಣ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. ಜನರ ಬಳಕೆ ಉಳಿತಾಯವಾಗುತ್ತದೆ. ವೇಗವಾಗಿ ಕೆಲಸ ಆಗುತ್ತದೆ. ಬಳಕೆಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ. ಕೃಷಿ ಮೇಳದಲ್ಲಿ ಭಾಗವಹಿಸಿದವರು ರಿಯಾಯಿತಿ ದರದಲ್ಲಿ ಯಂತ್ರ ಕೊಳ್ಳಬಹುದು" ಎಂದು ವಿವರಿಸಿದರು.

ಇದನ್ನೂ ಓದಿ: ಈ ಗಿರಿರಾಜ ಕೋಳಿ ಬೆಲೆ 50 ಸಾವಿರ ರೂ...!

Last Updated : Nov 6, 2022, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.