ETV Bharat / state

ರಾಜ್ಯದಲ್ಲಿ ಸೂರ್ಯಗ್ರಹಣದೊಂದಿಗೆ ಸೂರ್ಯಾಸ್ತ.. ಸೌರ ಕೌತುಕ ಕಂಡುಬಂದಿದ್ದು ಹೀಗೆ.. - solar eclipse in deepavali

ರಾಜ್ಯದಲ್ಲಿ ಜನರು ಸೌರ ಕೌತುಕ ಸೂರ್ಯಗ್ರಹಣ ವೀಕ್ಷಿಸಿ ಖುಷಿಪಟ್ಟರು. ಕಲಬುರಗಿ, ಮಂಗಳೂರು, ರಾಯಚೂರು, ರಾಮನಗರ ಸೇರಿದಂತೆ ಹಲವೆಡೆ ಸೂರ್ಯಗ್ರಹಣ ಗೋಚರಿಸಿತು.

ರಾಮನಗರದಲ್ಲಿ ಗೋಚರಿಸಿದ ಸೂರ್ಯಗ್ರಹಣ
ರಾಮನಗರದಲ್ಲಿ ಗೋಚರಿಸಿದ ಸೂರ್ಯಗ್ರಹಣ
author img

By

Published : Oct 25, 2022, 7:59 PM IST

Updated : Oct 25, 2022, 8:44 PM IST

ಬೆಂಗಳೂರು: 27 ವರ್ಷಗಳ ಬಳಿಕ ದೀಪಾವಳಿಯಂದೇ ಗೋಚರಿಸಿದ ಸೂರ್ಯಗ್ರಹಣವನ್ನು ರಾಜ್ಯದ ಹಲವೆಡೆ ಸೂರ್ಯಾಸ್ತದ ವೇಳೆ ಜನರು ವೀಕ್ಷಿಸಿದರು. ಬರಿಗಣ್ಣಿಂದ ನೋಡಬಾರದೆಂಬ ಕಾರಣಕ್ಕಾಗಿ ಗ್ರಹಣ ಸೌರ ಕನ್ನಡಕ, ಪಿನ್ ಹೋಲ್ ಪ್ರಾಜೆಕ್ಟ್ ಹಾಗೂ ಸೋಲಾರ್ ಫಿಲ್ಟರ್ ಅಳವಡಿಕೆ ಆಗಿರುವ ದೂರದರ್ಶಕಗಳ ಮೂಲಕ ಸೌರ ಕೌತುಕವನ್ನು ಕಣ್ತುಂಬಿಕೊಂಡರು.

ಕಲಬುರಗಿಯಲ್ಲಿ ಸೂರ್ಯಗ್ರಹಣ: ಸುಮಾರು 5.15 ರಿಂದ ಕಲಬುರಗಿ ನಗರದಲ್ಲಿ ಸೂರ್ಯಗ್ರಹಣ ಗೋಚರಿಸಿದ್ದು, 5.30ರ ಸುಮಾರಿಗೆ ಸೂರ್ಯನ ಸುತ್ತ ಕೆಂಪು ಬಣ್ಣ ಆವರಿಸಿದ್ದು ಕಂಡುಬಂತು. ಜಿಲ್ಲಾ ವಿಜ್ಞಾನ ಕೇಂದ್ರ ಸೇರಿದಂತೆ ಹಲವೆಡೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕಲಬುರಗಿಯಲ್ಲಿ ಸೂರ್ಯಗ್ರಹಣ ಕಂಡಿದ್ದು

ಇನ್ನು, ಗ್ರಹಣದ ವೇಳೆ ಆಹಾರ ಸೇವನೆ ಮಾಡಬಾರದು ಅನ್ನೋದು ಮೌಢ್ಯ ಎಂದು ವಾದಿಸಿದ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯಕರ್ತರು ನಗರದ ಜಗತ್ ವೃತ್ತದಲ್ಲಿ ಗ್ರಹಣ ಹಿಡಿದ ಸಂದರ್ಭದಲ್ಲಿ ಆಹಾರ ಸೇವನೆ ಮಾಡಿದರು. ಗ್ರಹಣ ಮೋಕ್ಷದ ನಂತರ ಸಂಜೆ 6-30 ರ ನಂತರ ದೇವಸ್ಥಾನಗಳಲ್ಲಿ ಮರು ಪೂಜೆಗಳು ನಡೆಯಲಿವೆ ಎಂದು ಆಯಾ ದೇವಸ್ಥಾನಗಳ ಅರ್ಚಕರು ತಿಳಿಸಿದ್ದಾರೆ.

ಮಂಗಳೂರಲ್ಲಿ ಸೂರ್ಯಗ್ರಹಣ ಕಂಡಿದ್ದು

ಕಡಲೂರಲ್ಲಿ ಸೂರ್ಯಗ್ರಹಣ ವೀಕ್ಷಣೆ: ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಂದು ಸೂರ್ಯಗ್ರಹಣದೊಂದಿಗೆ ಸೂರ್ಯಾಸ್ತವಾಗಿದೆ.‌ ಈ ಅಪರೂಪದ ಘಟನೆಗೆ ಪಣಂಬೂರು ಬೀಚ್​​ಗೆ ಆಗಮಿಸಿರುವ ಸಮುದ್ರ ವಿಹಾರಿಗಳು ಸಾಕ್ಷಿಯಾದರು.

ಮೈಸೂರಲ್ಲಿ ಸೂರ್ಯಗ್ರಹಣ
ಮೈಸೂರಲ್ಲಿ ಸೂರ್ಯಗ್ರಹಣ

ಸಾಂಸ್ಕೃತಿಕ ನಗರಿಯಲ್ಲಿ ಗ್ರಹಣ: ಮೈಸೂರಿನಲ್ಲೂ ಸೂರ್ಯಗ್ರಹಣವನ್ನು ವಿಶೇಷ ಕನ್ನಡಕಗಳ ಮೂಲಕ ಜನರು ಕಣ್ತುಂಬಿಕೊಂಡ. ಮೈಸೂರಿನಲ್ಲಿ ಸಂಜೆ 5.13 ರಿಂದ 5.51 ವರೆಗೆ ಸೂರ್ಯ ಗ್ರಹಣದ ಸಮಯವಿತ್ತು. ಆದರೆ 5.38 ರ ಸಮಯದ ವರೆಗೆ ಗೋಚರಿಸಿ, ನಂತರ ಮೋಡದ ಮರೆಯಲ್ಲಿ ಸೂರ್ಯ ಮರೆಯಾದನು. ರಾಮನಗರದಲ್ಲೂ ಸೂರ್ಯಗ್ರಹಣ ಗೋಚರಿಸಿತು.

ರಾಮನಗರದಲ್ಲಿ ಗೋಚರಿಸಿದ ಸೂರ್ಯಗ್ರಹಣ
ರಾಯಚೂರಲ್ಲಿ ಸೂರ್ಯಗ್ರಹಣ ಕಂಡಿದ್ದು

ರಾಯಚೂರು: ನಗರದ ಅಂಬೇಡ್ಕರ ಸರ್ಕಲ್​​ನಲ್ಲಿ ರಾಯಚೂರು ಭಾರತೀಯ ಜ್ಞಾನ ವಿಜ್ಞಾನ ಸಮಿತಿಯು ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ವೇಳೆ ಇರುವ ಕೆಲವು ಮೂಢನಂಬಿಕೆಗಳನ್ನು ಹೋಗಲಾಡಿಸಲು ಉಪಹಾರ ಸೇವನೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಸೌರ ಕೌತುಕ ನೋಡಿ ರಾಯಚೂರು ಜನ ಸಂತಸಗೊಂಡರು.

ಕಾರವಾರದಲ್ಲಿ ಸೂರ್ಯಗ್ರಹಣ
ಕಾರವಾರದಲ್ಲಿ ಸೂರ್ಯಗ್ರಹಣ

ಕಾರವಾರ: ಸೂರ್ಯ ಗ್ರಹಣ ಕಾರವಾರದಲ್ಲಿ ಶೇ. 15 ರಷ್ಟು ಗೋಚರವಾಗಿದೆ. ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವೆಡೆ ಜನಸಂಚಾರ ಕಡಿಮೆಯಾಗಿ ಒಂದು ರೀತಿಯ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದರೇ ಇನ್ನು ಕೆಲವೆಡೆ ಎಂದಿನಂತೆ ಜನ ಸಂದಣಿ ಕಂಡುಬಂತು. ನಗರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶಿರಸಿಯ ಆಗಸ 360 ಸಹಯೋಗದಲ್ಲಿ ಕಾಳಿ ನದಿ ಸೇತುವೆ ಬಳಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಪರೂಪದ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಂಡರು.

ಹಾವೇರಿಯಲ್ಲಿ ಸೂರ್ಯಗ್ರಹಣ
ಹಾವೇರಿಯಲ್ಲಿ ಸೂರ್ಯಗ್ರಹಣ

ಯಾಲಕ್ಕಿ ನಗರಿ ಹಾವೇರಿಯಲ್ಲಿ ಸೂರ್ಯಗ್ರಹಣ: ಇಲ್ಲಿನ ಮುನಿಸಿಫಲ್ ಮೈದಾನದಲ್ಲಿ ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಸೋಲಾರ್ ಫಿಲ್ಟರ್ ಬಳಿಸಿ ಸೂರ್ಯಗ್ರಹಣ ವೀಕ್ಷಿಸಿದರು.

Last Updated : Oct 25, 2022, 8:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.