ETV Bharat / state

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಖಿನ್ನತೆ... ರಸ್ತೆಯಲ್ಲಿ ಕಾರು ನಿಲ್ಲಿಸಿ ಟೆಕ್ಕಿ ಆತ್ಮಹತ್ಯೆ - ETV Bharath Kannada news

ಕಾಯಿಲೆ ಬಗ್ಗೆ ಹೆದರಿ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದಾಗುವ ಪರಿಣಾಮದ ಬಗ್ಗೆ ಸರ್ಚ್ ಮಾಡಿ ಮಾಹಿತಿ ಪಡೆದು, ಖಿನ್ನತೆಗೆ ಒಳಗಾಗಿದ್ದರು.

software engineer commits suicide due to heart disease
ಹೃದಯ ಸಂಬಂಧಿ ಖಾಯಿಲೆಗೆ ಬೇಸತ್ತು ಟೆಕ್ಕಿ ಆತ್ಮಹತ್ಯೆ
author img

By

Published : Dec 21, 2022, 12:22 PM IST

Updated : Dec 21, 2022, 1:39 PM IST

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗೆ ಬೇಸತ್ತ ಸಾಫ್ಟ್‌ವೇರ್ ಎಂಜಿನಿಯರ್ ವಿಚಿತ್ರ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಜಂಕ್ಷನ್​ನಲ್ಲಿ ನಡೆದಿದೆ. ಮುಖಕ್ಕೆ ಕವರ್ ಹಾಕಿಕೊಂಡು, ತನ್ನದೇ ಕಾರಿನಲ್ಲಿ ವಿಜಯ್ ಕುಮಾರ್ (51) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಯಿಲೆ ಬಗ್ಗೆ ತಿಳಿದಷ್ಟೂ ಖಿನ್ನತೆ: ನಗರದ ಪ್ರತಿಷ್ಠಿತ ಕಂಪನಿಯಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಹೃದಯ ಸಂಬಂಧಿ ವ್ಯಾಧಿಯಿಂದ ಬಳಲುತ್ತಿದ್ದರು. ತನಗಿರುವ ಕಾಯಿಲೆ, ಅದರ ಪರಿಣಾಮಗಳ ಬಗ್ಗೆ ಹೆಚ್ಚು ಸರ್ಚ್​ ಮಾಡಿ ಮಾಹಿತಿ ಪಡೆದು ಖಿನ್ನತೆಗೆ ಒಳಗಾಗಿದ್ದರು. ಕುರುಬರಹಳ್ಳಿ ಜಂಕ್ಷನ್ ಬಳಿ ಬಂದು ತನ್ನ ಕಾರಿನ ಹಿಂಬದಿ ಸೀಟ್​ನಲ್ಲಿ ಕುಳಿತುಕೊಂಡಿದ್ದ. ಬಳಿಕ ದಾರಿಹೋಕನೊಬ್ಬನಿಗೆ ಹಣ, ಕಾರಿನ ಕವರ್ ಕೊಟ್ಟು ತಾನು ಕುಳಿತ ಬಳಿಕ ಕಾರಿನ ಕವರ್ ಹಾಕುವಂತೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

software-engineer
ವಿಜಯ್ ಕುಮಾರ್

ಸ್ವಲ್ಪ ಹೊತ್ತಿನಲ್ಲೇ ಮುಖ್ಯ ರಸ್ತೆಯಲ್ಲಿ ಕಾರ್ ನಿಲ್ಲಿಸಿ ಕವರ್ ಹಾಕಿದ್ದ ಬಗ್ಗೆ ಸ್ಥಳೀಯರಿಂದ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಜಯ್ ಕುಮಾರ್​ನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಗಿತ್ತು. ಆದರೆ ಮಾರ್ಗಮಧ್ಯೆ ವಿಜಯ್ ಕುಮಾರ್ ಸಾವನ್ನಪ್ಪಿದ್ದರು.

ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸಿದಾಗ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನ ದುರಂತ ಅಂತ್ಯ ಕಥೆ ಬಯಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಗುತ್ತಿದೆ ಆತ್ಮಹತ್ಯೆ ದರ: 2014ರಿಂದ 2.35 ಲಕ್ಷ ಮಂದಿ ಸಾವು

Last Updated : Dec 21, 2022, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.