ETV Bharat / state

ಮಂಡ್ಯ ಟು ತಮಿಳುನಾಡು.. ಟೊಮೆಟೋ ಬಾಕ್ಸ್ ಕೆಳಗೆ​ ರಕ್ತಚಂದನ ಇಟ್ಟು ಸಾಗಾಟ - ಈಟಿವಿ ಭಾರತ ಕನ್ನಡ

ಮಂಡ್ಯದಿಂದ ತಮಿಳುನಾಡಿಗೆ ಅಕ್ರಮವಾಗಿ ರಕ್ತಚಂದನ ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೋಟ್ಯಂತರ ರೂ ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿದೆ.

smugling-of-rakthachandana-five-were-arrested
ಮಂಡ್ಯ ಟು ತಮಿಳುನಾಡು.. ಟೊಮ್ಯಾಟೋ ಬಾಕ್ಸ್ ಕೆಳಗೆ​ ರಕ್ತಚಂದನ ಇಟ್ಟು ಸಾಗಾಟ
author img

By

Published : Oct 13, 2022, 5:30 PM IST

ಬೆಂಗಳೂರು: ಮಂಡ್ಯದಿಂದ ತಮಿಳುನಾಡಿಗೆ ರಕ್ತಚಂದನ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಿದ್ಧರಾಜು, ಪ್ರಜ್ವಲ್, ಲೋಕೇಶ್, ದೇವರಾಜ್ ಹಾಗೂ ಗೋವಿಂದಸ್ವಾಮಿ ಎಂದು ಗುರುತಿಸಲಾಗಿದೆ.

ಮಂಡ್ಯದ ದೇವಲಾಪುರದ ಕಾಡುಗಳಿಂದ ರಕ್ತಚಂದನ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳು ತಮಿಳುನಾಡಿಗೆ ಸಾಗಿಸುವ ಯತ್ನದಲ್ಲಿದ್ದರು. ಮಾರ್ಗಮಧ್ಯೆ ಪೊಲೀಸರ ಕಣ್ತಪ್ಪಿಸಲು ಬೊಲೇರೋ ವಾಹನದಲ್ಲಿ ರಕ್ತಚಂದನ ಮರದ ದಿಮ್ಮಿಗಳನ್ನು ಇರಿಸಿ ಅವುಗಳ ಮೇಲೆ ಟೊಮೆಟೊ ಬಾಕ್ಸ್ ಇಟ್ಟು ಸಾಗಿಸುತ್ತಿದ್ದಾಗ ಮಹಾಲಕ್ಷ್ಮಿ ಲೇಔಟ್ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ ಕೋಟ್ಯಂತರ ರೂಪಾಯಿ ಮೌಲ್ಯದ 1.5 ಟನ್ ರಕ್ತಚಂದನದ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಗೋವಿಂದಸ್ವಾಮಿ ವಿರುದ್ಧ ಆಂಧ್ರ ,ತಮಿಳುನಾಡು ಭಾಗದಲ್ಲಿ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಇದನ್ನೂ ಓದಿ : ಹಾವೇರಿ: ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.