ETV Bharat / state

ಖಾಸಗಿ ಹೋಟೆಲ್​​ಗಳಲ್ಲಿ ಧೂಮಪಾನ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್​..!

author img

By

Published : Aug 26, 2019, 11:22 PM IST

ಖಾಸಗಿ ಹೊಟೇಲ್ಗಳಲ್ಲಿ ಸಾರ್ವಜನಿಕರ ಮುಂದೆ ಧೂಮಪಾನ ಸೇದುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್

ಬೆಂಗಳೂರು: ಖಾಸಗಿ ಹೋಟೆಲ್​ಗಳಲ್ಲಿ ಸಾರ್ವಜನಿಕರ ಮುಂದೆ ಧೂಮಪಾನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೊಟಿಸ್ ಜಾರಿಗೊಳಿಸಿದೆ.

ಈ ಕುರಿತು ‘ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸೆಸ್ ಲಿಮಿಟೆಡ್ (ಎಚ್‌ಸಿಜಿ ಆಸ್ಪತ್ರೆ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಕೀಲರು 2003ರ ಧೂಮಪಾನ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅನ್ವಯ 30 ಕೊಠಡಿಗಳು ಹಾಗೂ 30 ಆಸನಗಳನ್ನ ಹೊಂದಿರುವ ಹೋಟೆಲ್​ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಮೀಸಲಿಡಲು ಅವಕಾಶ ಕಲ್ಪಿಸಿದೆ ಎಂದಿದ್ದಾರೆ.

ಆದರೆ, ಖಾಸಗಿ ಹೋಟೆಲ್​, ರೆಸ್ಟೋರೆಂಟ್ ನಲ್ಲಿ ಸದ್ಯ ಸಾರ್ವಜನಿಕರಿಗೆ ಸ್ಮೋಕಿಂಗ್ ಕಿರಿಕಿರಿಯಾಗುತ್ತಿದೆ. ಹಾಗೆಯೇ ಹೋಟೆಲ್​ಗಳಲ್ಲಿ ಸ್ಮೋಕಿಂಗ್ ಜೋನ್ ಗಳನ್ನು ಪ್ರತ್ಯೇಕವಾಗಿ ವಿಭಾಗಿಸಿಲ್ಲವೆಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ ನ್ಯಾಯಪೀಠ ‌ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರದ ನಗರಾಭಿವದ್ಧಿ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿಕೆ ಮಾಡಿದೆ.

Intro:KN_BNG _10_HIGCOURT_7204498Body:KN_BNG _10_HIGCOURT_7204498Conclusion:ಸಾರ್ವಜನಿಕರ ಮುಂದೆ ಧೂಮಪಾನ ಸೇದುವ ವಿಚಾರ
ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್

ಖಾಸಗಿ ಹೊಟೇಲ್ಗಳಲ್ಲಿ ಸಾರ್ವಜನಿಕರ ಮುಂದೆ ಧೂಮಪಾನ ಸೇದುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

ಈ ಕುರಿತು ‘ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸೆಸ್ ಲಿಮಿಟೆಡ್ (ಎಚ್‌ಸಿಜಿ ಆಸ್ಪತ್ರೆ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಹಿತು.

ಈ ವೇಳೆ ಅರ್ಜಿ ದಾರರ ವಕೀಲರು 2003ರ ಧೂಮಪಾನ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅನ್ವಯ 30 ಕೊಠಡಿಗಳು ಹಾಗು 30 ಆಸನಗಳನ್ನ ಹೊಂದಿರುವ ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಮೀಸಲಿಡಲು ಅವಕಾಶ ಕಲ್ಪಿಸಿದೆ. ಖಾಸಗಿ ಹೊಟೇಲ್ ರೆಸ್ಟೋರೆಂಟ್ ನಲ್ಲಿ ಸದ್ಯ ಸಾರ್ವಜನಿಕರಿಗೆ ಸ್ಮೋಕಿಂಗ್ ಕಿರಿಕಿರಿಯಾಗುತ್ತಿದೆ. ಹಾಗೆ ಹೊಟೇಲ್ಗಳು ಸ್ಮೋಕಿಂಗ್ ಜೋನ್ ಸಪರೇಟ್ ಆಗಿ‌ ಮಾಡಿಲ್ಲವೆಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ ನ್ಯಾಯಪೀಠ ‌ಕೇಂದ್ರಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರದ ನಗರಾಭಿವದ್ಧಿ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿಕೆ ಮಾಡಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.